Uttara Kannada: 142 ವರ್ಷಗಳ ಲಿಖಿತ ಇತಿಹಾಸವಿರುವ ಬಗ್ಗೋಣ ಪಂಚಾಂಗ ಬರೆಯುವ ಕನ್ನಡತಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ಮನೆತನದ ಹಿರಿಯರಾಗಿದ್ದ ರಾಮ ತಿಮ್ಮಣ್ಣ ಭಟ್ಟರು ಈ ಪಂಚಾಂಗದ ಮೂಲಪುರುಷರು. ಇಂದಿಗೂ ಇದು ಮುಂದುವರೆದುಕೊಂಡು ಬಂದಿದೆ. ಸದ್ಯದ 142 ನೇ ವರ್ಷದ ಮುದ್ರಣವಂತೂ ಭಾರೀ ಬೇಡಿಕೆ ಪಡೆದಿದೆ.

  • News18 Kannada
  • 3-MIN READ
  • Last Updated :
  • Uttara Kannada, India
  • Share this:

ಉತ್ತರ ಕನ್ನಡ: ಹಳೆಯದಾದ ಹಾಳೆ, ತಿರುವಿ ಹಾಕಿದ್ರೆ ಅದ್ಯಾವುದೋ ಲೆಕ್ಕಚಾರ, ಬಿಡಿಸಲಾರದ ಒಗ್ಗಟ್ಟಿನಂತಹ ಅಂಕಿ ಅಂಶ. ಯೆಸ್, ಇದೇನಿದು ಪುಸ್ತಕ ಅಂತೀರಾ? ಇದುವೇ ಉತ್ತರ ಕನ್ನಡದ (Uttara Kannada News) ಮೂಲದ ಬಗ್ಗೋಣ ಪಂಚಾಂಗ. ವಿಶೇಷ ಅಂದ್ರೆ ಮಹಿಳೆಯೊಬ್ಬರ ಸಾರಥ್ಯ ಈ ಪಂಚಾಂಗಕ್ಕೆ(Baggona Panchanga) ರಾಜ್ಯದಾದ್ಯಂತ ಭಾರೀ ಬೇಡಿಕೆ ಇದೆ. ಹಾಗಿದ್ರೆ ಅಂತಹ ವಿಶೇಷತೆ ಏನು ಅಂತೀರಾ? ಈ ಸ್ಟೋರಿ ನೋಡಿ.


ಶತಮಾನದ ಇತಿಹಾಸ
ಹೇಳಿಕೇಳಿ ಈ ಬಗ್ಗೋಣ ಪಂಚಾಂಗ ಕರುನಾಡಿನ ಹಳೆಯ ಪಂಚಾಂಗ ಕೂಡಾ. ಈ ಪಂಚಾಂಗ ಬರೆಯುಲು ಆರಂಭಿಸಿದ್ದು ಇದೇ ಮನೆತನದವರು. ಹಾಗಾಗಿ ಈ ಮನೆಯ ಪಂಚಾಂಗಕ್ಕೆ ಭಾರೀ ಮಾನ್ಯತೆ ಇದೆ. ಬಗ್ಗೋಣ ಪಂಚಾಂಗಕ್ಕೆ 142 ವರ್ಷಗಳ ಲಿಖಿತ ಇತಿಹಾಸವಿದೆ. ಆದ್ರೆ 300 ವರ್ಷದಿಂದಲೂ ಈ ಮನೆತನದವರು ಪಂಚಾಂಗ ಬರೆಯುತ್ತಿದ್ದಾರೆ ಅನ್ನೋ ಮಾತಿದೆ.




ಮಹಿಳೆಯೇ ಸ್ಫೂರ್ತಿ
ಉತ್ತರ ಕನ್ನಡದ ಗೋಕರ್ಣದ ರಥಬೀದಿಯಲ್ಲಿ ವಾಸವಾಗಿರೋ ವೆಂಕಟರಮಣ ಪಂಡಿತ್ ಹಾಗೂ ಅವರ ಅಕ್ಕ ಜಯಾ ಪಂಡಿತ್ ಇಂದಿಗೂ ಈ ಪಂಚಾಂಗವನ್ನ ಬರೆಯುತ್ತಿದ್ದಾರೆ. ಈ ಅಕ್ಕ ತಮ್ಮನ ಜೋಡಿ ಪಂಚಾಂಗ ಬರೆಯುವುದಲ್ಲಿ ದೊಡ್ಡದಾದ ಹೆಸರನ್ನೇ ಮಾಡಿದೆ. ವಿಶೇಷ ಅಂದ್ರೆ ಜಯಾ ಪಂಡಿತ್ ಮಹಿಳೆಯಾದರೂ ತಾನೂ ಜ್ಯೋತಿಷ್ಯ ಶಾಸ್ತ್ರ ಕಲಿತು ಪಂಚಾಂಗ ಬರೆಯುವುದರಲ್ಲಿ ತಮ್ಮನ ಜೊತೆ ಮುಂಚೂಣಿಯಲ್ಲಿದ್ದಾರೆ.




ದಾಖಲೆ ಪ್ರತಿ ಮಾರಾಟ
ಈ ಮನೆತನದ ಹಿರಿಯರಾಗಿದ್ದ ರಾಮ ತಿಮ್ಮಣ್ಣ ಭಟ್ಟರು ಈ ಪಂಚಾಂಗದ ಮೂಲಪುರುಷರು. ಇಂದಿಗೂ ಇದು ಮುಂದುವರೆದುಕೊಂಡು ಬಂದಿದೆ. ಸದ್ಯದ 142 ನೇ ವರ್ಷದ ಮುದ್ರಣವಂತೂ ಭಾರೀ ಬೇಡಿಕೆ ಪಡೆದಿದೆ. ಸಾಮಾನ್ಯರೂ ಈ ಪಂಚಾಂಗವನ್ನು ಅನುಸರಿಸೋದ್ರಿಂದ ಪ್ರತೀ ವರ್ಷ ಸುಮಾರು 25,000 ಪಂಚಾಂಗ ಪ್ರತಿಗಳು ಮಾರಾಟವಾಗುತ್ತವೆ. ಜೊತೆಗೆ ಹೊರ ರಾಜ್ಯದಲ್ಲೂ ಈ ಪಂಚಾಂಗಕ್ಕೆ ಬೇಡಿಕೆಯಿದೆ.




ಇದನ್ನೂ ಓದಿ: Stone Chariot: ಹಂಪಿಯಲ್ಲೊಂದೇ ಅಲ್ಲ, ಉತ್ತರ ಕನ್ನಡದಲ್ಲಿದೆ 3 ಚಕ್ರದ ಕಲ್ಲಿನ ರಥ!


ಮಾನ್ಯತೆ ಪಡೆದ ಪಂಚಾಂಗ
ಈ ಪಂಚಾಂಗಕ್ಕೆ ಪ್ರತಿಷ್ಠಿತ ಮಠಗಳಿಂದ ಮಾನ್ಯತೆ ಹಾಗೂ ಬಿರುದಾವಳಿಗಳು ಸಿಕ್ಕಿವೆ. ಅಷ್ಟೇ ಅಲ್ಲದೇ, ಪ್ರತೀ ಸಲ ಖಗೋಳವಿಜ್ಞಾನಿಗಳ ತಂಡವೊಂದು ಇವರ ಬಳಿ ಬಂದು ಪಂಚಾಂಗ ಪರೀಕ್ಷೆ ನಡೆಸುವುದು ಇನ್ನೊಂದು ವಿಶೇಷ.




ಇದನ್ನೂ ಓದಿ: Uttara Kannada: ಈ ಹಳ್ಳಿ ಸಂಸ್ಥೆ 6 ತಿಂಗಳಿಗೆ 15 ಲಕ್ಷ ವಹಿವಾಟು ನಡೆಸುತ್ತೆ!


ಬಗ್ಗೋಣ ಪಂಚಾಂಗ ಅಂದ್ರೆ ಅಷ್ಟೊಂದು ನಿಖರತೆ ಹೊಂದಿದ್ದು, ಜನರೂ ಈ ಪಂಚಾಂಗವನ್ನೇ ನೆಚ್ಚಿಕೊಳ್ಳುತ್ತಿದ್ದಾರೆ‌. ಇಂತಹ ಪಂಚಾಂಗ ಬರೆಯುವುದರ ಮೂಲಕ ಈ ಮನೆತನ ಕೂಡಾ ಅಷ್ಟೇ ಇಂದಿಗೂ ಜನಮೆಚ್ಚುಗೆಯನ್ನ ಪಡೆದಿದೆ.

top videos


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    First published: