Dog's Revenge: ತಾಯಿ‌ ಸಾವಿಗೆ ಕಾರಣರಾದವರ ಮೇಲೆ ಸೇಡಿಗಾಗಿ ಹವಣಿಸುತ್ತಿರುವ ನಾಯಿ!

ಈ ಹಿಂದೆ ಅಪಘಾತವೊಂದರಲ್ಲಿ ತಾಯಿ ಮೃತಪಟ್ಟಿರೋದನ್ನ ನೆನಪಿಸಿಕೊಂಡ ಶ್ವಾನವೊಂದು ಸೇಡಿಗಾಗಿ ಅಂಥದ್ದೇ ವಾಹನಗಳನ್ನಿ ಹಿಂಬಾಲಿಸುವ ದೃಶ್ಯ ಕರುಳು ಹಿಂಡುತ್ತಿದೆ. ಇದು ಟೋಲ್‌ಗೇಟ್‌ನಲ್ಲಿ ಕಾಣಸಿಗುವ ನಿತ್ಯದ ದೃಶ್ಯ ಎನ್ನುವಂತಾಗಿದೆ.

ಸೇಡಿಗಾಗಿ ಕಾದಿರುವ ನಾಯಿ

ಸೇಡಿಗಾಗಿ ಕಾದಿರುವ ನಾಯಿ

  • Share this:
ಉತ್ತರ ಕನ್ನಡ: ತಾಯಿ (Mother) ಮಕ್ಕಳ (Children) ಸಂಬಂಧಕ್ಕಿಂತ (Relationship) ಮಿಗಿಲಾದದ್ದು ಯಾವುದೂ ಇಲ್ಲ. ಪ್ರಾಣಿಗಳು (Animals) ಕೂಡ ತನ್ನ ಮರಿಗಳನ್ನ (Cubs) ಪಾಲನೆ ಮಾಡುವ ಪರಿ ಮನುಷ್ಯ ಕೂಡ ನಾಚುವಂತೆ ಇರುತ್ತದೆ. ಆದ್ರೆ ತಾಯಿಯನ್ನ ಕಳೆದುಕೊಂಡ ಅನಾಥವಾಗುವ ಮಕ್ಕಳ ರೋಧನೆ ಹೇಳತೀರದು. ಅದು ಪ್ರಾಣಿಯಾದರೂ ಅಷ್ಟೇ, ಮನುಷ್ಯನಾದರೂ ಅಷ್ಟೇ. ಹೌದು. ಅಪಘಾತವೊಂದರಲ್ಲಿ (Accident) ತಾಯಿ ಮೃತಪಟ್ಟಿರೋದನ್ನ ನೆನಪಿಸಿಕೊಂಡ ಶ್ವಾನವೊಂದು (Dog) ಸೇಡಿಗಾಗಿ ಅಂಥದ್ದೆ ವಾಹನಗಳನ್ನ (Vehicles) ಹಿಂಬಾಲಿಸುವ ದೃಶ್ಯ ಕರುಳು ಹಿಂಡುತ್ತಿದೆ. ಆ್ಯಂಬ್ಯುಲೆನ್ಸ್ (Ambulance) ವಾಹನಗಳನ್ನ ಬೆನ್ನಟ್ಟುತ್ತಿರುವ ಶ್ವಾನ. ಪೊಲೀಸ್ ವಾಹನಗಳ (Police Vehicle) ಮುಂದೆ ಅಡ್ಡ ನಿಲ್ಲುವ ಶ್ವಾನ. ಇದು ಉತ್ತರಕನ್ನಡ (Uttara Kannada) ಜಿಲ್ಲೆಯ ಅಂಕೋಲಾ (Ankola) ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ (Toll Gate) ಬಳಿ ದಿನ ನಿತ್ಯ ಕಂಡು ಬರುವ ದೃಶ್ಯ.

ಅಪಘಾತದಲ್ಲಿ ಸಾವನ್ನಪ್ಪಿದ್ದ ತಾಯಿ ನಾಯಿ

ಕಳೆದ ಒಂದು ವರ್ಷದ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ಸೈರನ್ ಹಾಕಿ ಬಂದ ಆ್ಯಂಬ್ಯುಲೆನ್ಸ್ ಒಂದು ಹಾಲುಣಿಸುತ್ತಿದ್ದ  ನಾಯಿಗೆ ಡಿಕ್ಕಿ ಹೊಡೆದು ಸಾಯಿಸಿತ್ತು... ಅಪಘಾತದಲ್ಲಿ ತಾಯಿ ನಾಯಿ‌ ಸಾವು‌ ಕಂಡಿದ್ದ ಮರಿ‌ ನಾಯಿ‌ ಬದುಕುಳಿದಿತ್ತು.

ಆ್ಯಂಬುಲೆನ್ಸ್ ಮೇಲೆ ಮರಿನಾಯಿಗೆ ಕೋಪ

ಮರಿ‌ನಾಯಿ ದೊಡ್ಡದಾಗುತ್ತ ಬರುತ್ತಿದ್ದಂತೆ ಮರಿ  ಶ್ವಾನ  ವಿಐಪಿ ಲೇನ್ ಮೂಲಕ ಸೈರನ್ ಹಾಕಿ ಬರುವ ಆಂಬ್ಯುಲೇನ್ಸ್ ಮತ್ತು ಪೋಲಿಸ್ ವಾಹನವನ್ನ ತಡೆ‌ಹಿಡಿದು‌ ನಿಲ್ಲಿಸುವದ್ರ ಜತೆಗೆ ಅಟ್ಟಾಡಿಸಿ ಕೊಂಡು ಹೋಗಿ ತನ್ನ ತಾಯಿಯ ಸಾವಿಗೆ ಕಾರಣರಾದವರ ಮೇಲೆ ಸೇಡಿಗಾಗಿ ಹವಣಿಸುತ್ತಿದೆ..

ಇದನ್ನೂ ಓದಿ: Mysore Zoo: ಮೈಸೂರಿನ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

ಟೋಲ್‌ ಗೇಟ್‌ ಬಳಿ ನಿತ್ಯ ಬೊಗಳುವ ನಾಯಿ

ಟೋಲ್ ಗೇಟ್ ನ ವಿಐಪಿ ಲೇನ್ ಅಲ್ಲಿ ಸೈರನ್ ಹಾಕಿ ಬರುವ ಅಂಬ್ಯುಲೆನ್ಸ್ ಮತ್ತು ಪೊಲೀಸ್ ವಾಹನಗಳನ್ನ  ಹಿಂಬಾಲಿಸಿ ಅಟ್ಟಾಡಿಸಿಕೊಂಡು  ಹೋಗುತ್ತಿದೆ ಈ ಶ್ವಾನ.  ಟೋಲ್ ಗೇಟ್ ಸಿಬ್ಬಂದಿಗಳು ಈ ಶ್ವಾನವನ್ನ ಆರೈಕೆ ಮಾಡಿದ್ದರಿಂದ ದೊಡ್ಡದಾಗಿದೆ. ವಿಐಪಿ ಲೇನ್ ನಿಂದ ಸೈರನ್ ಹಾಕಿ ಬರುವ ಪ್ರತಿ ಅಂಬ್ಯುಲೇನ್ಸ್ ಗೂ ಹಿಂಬಾಲಿಸಿ ಅಟ್ಟಾಡಿಸಿಕೊಂಡು ಹೋಗುತ್ತಿದೆ... ತನ್ನ ತಾಯಿಯ ಸಾವಿಗೆ ಈ ವಾಹನವೇ ಕಾರಣವಾಗಿರಬಹುದೆಂದು ತಿಳಿದು ವಾಹನದ ಮೇಲೆ ಎರಗುವ ಪ್ರಯತ್ನ ಮಾಡುತ್ತಿದೆ...ಈ ಮೂಲಕ ತನ್ನ ನೋವು ಮತ್ತು ಸೇಡಿಗಾಗಿ ಹವಣಿಸುತ್ತಿದೆ.

3 ತಿಂಗಳಿನಿಂದ ರಸ್ತೆ ಮೇಲೆ ನಿತ್ಯ ಕಾವಲು

ಕಳೆದ ಮೂರು ತಿಂಗಳಿಂದ  ತಾಯಿಯ ಸಾವಿನ ಸೇಡು ತೀರಿಸಿಕೊಳ್ಳಲು ಸೈರನ್ ಹಾಕಿ ವಿಐಪಿ ಲೇನ್ ನಿಂದ ಬರುವ  ಅಂಬ್ಯುಲೆನ್ಸ್ ವಾಹನವನ್ನ ಶ್ವಾನ ಅಡ್ಡಗಟ್ಟುತ್ತಿವೆ.  ಕೇವಲ ಅಂಬ್ಯುಲೇನ್ಸ್ ಅಷ್ಟೆ ಅಲ್ಲ ಪೋಲಿಸ್ ವಾಹನ ಕಂಡಾಗ ಇದು ಜಿಗಿದು ನಿಲ್ಲಿಸುವ ಪ್ರಯತ್ನ ಮಾಡುತ್ತಿದೆ.

ಸೈರನ್ ಶಬ್ದ ಕಿವಿಗೆ ಬೀಳುತ್ತಿದ್ದಂತೆ ಅಲರ್ಟ್

ಟೋಲ್ ಗೇಟ್ ಬಳಿಯಿಂದ ಸೈರನ್ ಶಬ್ಧ ಕಿವಿಗೆ ಬೀಳುತ್ತಿದ್ದಂತೆ ಎದ್ದು ಅಲರ್ಟ್ ಆಗುವ ಶ್ವಾನ ಸೇಡಿನ‌ ಪ್ರತಿಕಾರಕ್ಕೆ ಹವಣಿಸುತ್ತಿದೆ.  ತಾಯಿಯ ಸಾವನ್ನ ಕಣ್ಣಾರೆ ಕಂಡ ಈ ಮರಿ ಶ್ವಾನ  ಈ ರೀತಿಯಾಗಿ ವರ್ತಿಸುತ್ತಿದೆ.  ಕಳೆದ ಏಳೆಂಟು ತಿಂಗಳಿಂದ ಟೋಲ್ ಗೇಟ್ ಸಿಬ್ಬಂದಿಗಳು ಶ್ವಾನಕ್ಕೆ ಬಿಸ್ಕೆಟ್, ತಿಂಡಿ ನೀಡಿ ಪೋಷಿಸುತ್ತಿದ್ದಾರೆ. ಸಿಬ್ಬಂದಿಗಳ ಪೋಷಣೆಯಿಂದ  ಈ  ಶ್ವಾನ   ದೊಡ್ಡದಾಗುತ್ತ ಬರುತ್ತಿದ್ದಂತೆ ಸೇಡಿಗಾಗಿ ಹವಣಿಸುತ್ತಿದೆ.

ಇದನ್ನೂ ಓದಿ: Viral Story: ಅಬ್ದುಲ್ ಗಫರ್ ಗೋಪ್ರೇಮ, ಗೋವುಗಳ ದಾಹ ತಣಿಸುತ್ತಿರುವ ಗಫರ್!

ಮನುಷ್ಯ ಕುಲದಲ್ಲಿ  ತಂದೆ ತಾಯಿಯನ್ನ ನೆನಪಿಸಿಕೊಳ್ಳುವ ಸಂದರ್ಭ ದೂರವಾಗುತ್ತಿರುವ ಈ ಕಾಲದಲ್ಲಿ ಶ್ವಾನಗಳು ತನ್ನ ತಾಯಿಯ ಸಾವಿಗೆ ಕಾರಣವಾಗುವ ವಾಹನಗಳನ್ನ  ಗುರುತಿಸಲು ಪ್ರಯತ್ನಿಸೋದು ಮಾತ್ರ ನಿಜಕ್ಕೂ ಕರುಳು ಹಿಂಡುವಂತಿದೆ.  ತಾಯಿ ಮಗುವಿನ ವಾತ್ಸಲ್ಯ ಪ್ರಾಣಿಗಳ ಮೂಲಕ ನಮಗೆ ಕಣ್ಣಿಗೆ ಕಾಣುತ್ತಿವೆ.
Published by:Annappa Achari
First published: