• Home
 • »
 • News
 • »
 • uttara-kannada
 • »
 • Positive Story: ಕೊಂಕಣಿ ಮಾತನಾಡುವ ಅಣಶಿ ಮಕ್ಕಳಿಗೆ ಕನ್ನಡ ಕಲಿಸುವ ಶಿಕ್ಷಕಿ; ಸೌಲಭ್ಯವೇ ಇರದೆಡೆ ಸಾಹಸ

Positive Story: ಕೊಂಕಣಿ ಮಾತನಾಡುವ ಅಣಶಿ ಮಕ್ಕಳಿಗೆ ಕನ್ನಡ ಕಲಿಸುವ ಶಿಕ್ಷಕಿ; ಸೌಲಭ್ಯವೇ ಇರದೆಡೆ ಸಾಹಸ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಶಾಲೆಗೆ ದಿನನಿತ್ಯ ಕನ್ನಡ ಪತ್ರಿಕೆಗಳು ತರೋದಕ್ಕೆ ಸಾಧ್ಯವಿಲ್ಲ ಅನ್ನೋದನ್ನ ಅರಿತಿದ್ದ ಈ ಶಿಕ್ಷಕಿ, ಮಕ್ಕಳನ್ನೆಲ್ಲಾ ಒಟ್ಟಾಗಿಸಿ ಅವರ ಕೈ ಬರಹದಿಂದಲೇ "ಅಣಶಿ ಸಮಾಚಾರ" ಎಂಬ ದಿನಪತ್ರಿಕೆ ಹೊರತಂದರು.

 • Share this:

  ಕಾರವಾರ: ಹಳ್ಳಿ ಮಕ್ಕಳ ಜೊತೆ ಬೆರೆತು ಪಾಠ ಮಾಡುವ ಟೀಚರು. ಸ್ವಚ್ಛ ಕನ್ನಡ, ಪರಿಸರ ಪ್ರೇಮದ ಪಾಠ. ಅದ್ರಲ್ಲೂ ನಾವ್ ಹೇಳ್ತೀರೋ ಈ ಸ್ಟೋರಿನ ನೋಡ್ತಾ ಹೋದ್ರೆ ಕನ್ನಡದ ಮನಸ್ಸುಗಳು ಹಿರಿಹಿರಿ ಹಿಗ್ಗೋದ್ರಲ್ಲಿ ಸಂಶಯವಿಲ್ಲ. ಇವ್ರು ಅಕ್ಷತಾ ಕೃಷ್ಣಮೂರ್ತಿ  (Akshatha Krishnamoorthy) ಅಂತ. ಕೇವಲ ಟೀಚರ್ ಮಾತ್ರವಲ್ಲ, ಕವಯಿತ್ರಿ, ಪರಿಸರ ಪ್ರೇಮಿ ಕೂಡ. ಅದಕ್ಕೂ ಜಾಸ್ತಿ ಹುಲಿ ಸಂರಕ್ಷಿತ ಅಣಶಿ ಅಭಯಾರಣ್ಯದ ಆದಿವಾಸಿ ಮಕ್ಕಳ ಭವಿಷ್ಯ ರೂಪಿಸುತ್ತಿರುವವರು. ಉತ್ತರ ಕನ್ನಡ (Uttara Kannada) ಜೋಯಿಡಾದ ಅಣಶಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (Government School Anshi) ಇವ್ರು ಕಳೆದ ಹದಿನೈದು ವರ್ಷಗಳಿಂದ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.


  ಅದ್ರಲ್ಲೂ ಸೌಲಭ್ಯಗಳೇ ಇಲ್ಲ ಅನ್ನೋ ಹಾಗಿರೋ ಈ ಪ್ರದೇಶದಲ್ಲಿ ನಿಂತು ಆದಿವಾಸಿ ಕುಣುಬಿ ಜನಾಂಗದ ಮಕ್ಕಳಲ್ಲಿ ಅಕ್ಷರದ ಜ್ಞಾನ ಬಿತ್ತುವ ಮಹಾತ್ಕಾರ್ಯದಲ್ಲಿ ತೊಡಗಿದ್ದಾರೆ.


  ಶಾಲೆಗೆ ಬರೋ ಮಕ್ಕಳ ಮನೆಮಾತು ಕೊಂಕಣಿ
  ಇಲ್ಲಿರೋ ಕುಣುಬಿ ಜನಾಂಗದ ಮಕ್ಕಳ ಮಾತೃಭಾಷೆ ಕೊಂಕಣಿ. ಯಾರೊಬ್ಬರಿಗೂ ಕನ್ನಡ ಮಾತೇ ಬರದು. ಅಂತಹ ಮಕ್ಕಳಿಗೆ ಪಾಠ ಮಾಡುವಾಗಲೂ ಅಕ್ಷತಾ ಕೃಷ್ಣಮೂರ್ತಿ ಅವರು ಮಕ್ಕಳ ಮನಸ್ಥಿತಿಯನ್ನ ಆಧರಿಸಿಯೇ ಪಾಠ ಮಾಡುತ್ತಾ ಬಂದಿದ್ದಾರೆ. ಇವರು ಮಕ್ಕಳಿಗೆ ಅಕ್ಷರ ಕಲಿಸಲು ಬಳಸಿದ ಪರಿಣಾಮಕಾರಿ ಉಪಾಯವೇ ಕ್ಲೇ ಮಾಡೆಲಿಂಗ್. ಅದರ ಮೂಲಕ ಅಕ್ಷರ ಜ್ಞಾನ ಬಿತ್ತಿದರು.


  ಹೊರಬಿತ್ತು ನೋಡಿ ಅಣಶಿ ಸಮಾಚಾರ
  ಶಾಲೆಗೆ ದಿನನಿತ್ಯ ಕನ್ನಡ ಪತ್ರಿಕೆಗಳು ತರೋದಕ್ಕೆ ಸಾಧ್ಯವಿಲ್ಲ ಅನ್ನೋದನ್ನ ಅರಿತಿದ್ದ ಈ ಶಿಕ್ಷಕಿ, ಮಕ್ಕಳನ್ನೆಲ್ಲಾ ಒಟ್ಟಾಗಿಸಿ ಅವರ ಕೈ ಬರಹದಿಂದಲೇ "ಅಣಶಿ ಸಮಾಚಾರ" ಎಂಬ ದಿನಪತ್ರಿಕೆ ಹೊರತಂದರು. ಅಲ್ಲದೇ, ಸ್ವತಃ ಅಂಕಣಕಾರ್ತಿಯಾಗಿರುವ ಅಕ್ಷತಾ ಅವರು ತಾವು ಬರೆದ ಅಂಕಣಗಳಿಗೆ ಸಿಗುವ ಸಹಾಯಧನದಿಂದ ಶಾಲೆಯ ಲೈಬ್ರರಿಗೆ ಕನ್ನಡ ಪುಸ್ತಕಗಳನ್ನು ಖರೀದಿಸಿದ್ದಾರೆ. ಜೊತೆಗೆ ಶಾಲೆಯ ಮಕ್ಕಳ ಡ್ರಾಯಿಂಗ್, ಯೋಗ, ಪೇಪರ್ ಕ್ರಾಫ್ಟ್ ಹೀಗೆ ವಿಧವಿಧಧ ವಿದ್ಯಾಭ್ಯಾಸವು ಮಕ್ಕಳಲ್ಲಿರುವ ಪ್ರತಿಭೆಯನ್ನ ಬೆಳಕಿಗೆ ತರುತ್ತಿದೆ. 


  ಇದನ್ನೂ ಓದಿ: Shaurya Award: ಜೀವ ಕೊಟ್ಟ ಅಪ್ಪನಿಗೇ ಪ್ರಾಣದಾತೆಯಾದ ಮಗಳು, ಉತ್ತರ ಕನ್ನಡದ ಬಾಲಕಿ ಮುಡಿಗೆ ಶೌರ್ಯ ಪ್ರಶಸ್ತಿಯ ಗರಿ


  ಬರೀ ಕನ್ನಡ ಮಾತ್ರವಲ್ಲದೇ ಪರಿಸರ ಕಾಳಜಿ ಮೂಡಿಸಲು ಮಕ್ಕಳ ಮೂಲಕ ಬೀಜದುಂಡೆ ಬಿತ್ತನೆ, ಸ್ಥಳೀಯ ಬಳ್ಳಿ, ಗಿಡಗಳ ಬೆಳೆಸುವಿಕೆ, ವಾರಕ್ಕೊಮ್ಮೆ ಹೊರಗೆ ಹೋಗಿ ಕೃಷಿ ಕಾರ್ಯ ವೀಕ್ಷಣೆ, ಗೋಡೆಗಳ ಮೇಲೆ ಕನ್ನಡದ ಚಿತ್ರಗಳನ್ನು ಬರೆಯುವುದು, ಕನ್ನಡದಲ್ಲೇ ಸಹಿ ಮಾಡುವ ಅಭಿಯಾನ ಕೈಗೊಂಡಿದ್ದಾರೆ. ಈ ಮೂಲಕ ಈಗಾಗಲೇ ಕನ್ನಡದಲ್ಲಿ ಹಾಗೂ ಪರಿಸರ ವಿಷಯದಲ್ಲಿ ಮಕ್ಕಳು ನಿಪುಣರಾಗುವಂತೆ ಮಾಡಿದ್ದಾರೆ.


  ಇದನ್ನೂ ಓದಿ: Siddapur Stone Bridge: ಉತ್ತರ ಕನ್ನಡದ ಈ ಬೃಹತ್ ಕಲ್ಲಿನ ಸೇತುವೆ ನಿರ್ಮಿಸಿದ್ದಾದ್ರೂ ಯಾರು!?


  ಸದ್ಯ ಅಣಶಿ ಶಾಲೆಯಲ್ಲಿ ಒಂದರಿಂದ 7 ನೇ ತರಗತಿವರೆಗೆ 113 ಮಕ್ಕಳಿದ್ದು, ನಾಲ್ಕು ಮಂದಿ ಶಿಕ್ಷಕರಿದ್ದಾರೆ. ಅದರಲ್ಲೂ ಆದಿವಾಸಿ ಮಕ್ಕಳ ಶಿಕ್ಷಣಕ್ಕಾಗಿ ಪಣ ತೊಟ್ಟಿರುವ ಅಕ್ಷತಾ ಕೃಷ್ಣಮೂರ್ತಿಯವ್ರು ತೆರೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ಇಂದಿನ ಕಾಲದಲ್ಲೂ ವರ್ಗಾವಣೆ ಬಯಸದೇ ಹಳ್ಳಿ ಮಕ್ಕಳ ಭವಿಷ್ಯ ರೂಪಿಸ ಹೊರಟ ಇಂತಹ ಮಹಾನ್ ಶಿಕ್ಷಕಿಗೆ ಸೆಲ್ಯೂಟ್ ಎನ್ನಲೇಬೇಕು.


  ವರದಿ: ಎ.ಬಿ.ನಿಖಿಲ್, ಮುಂಡಗೋಡ್

  Published by:ಗುರುಗಣೇಶ ಡಬ್ಗುಳಿ
  First published: