• Home
  • »
  • News
  • »
  • uttara-kannada
  • »
  • Gokarna Papad: ಗೋಕರ್ಣ ಹಪ್ಪಳಕ್ಕೆ ವಿದೇಶದ ಕನಸು! ದೇಸಿ ರುಚಿಗೆ ಭರ್ಜರಿ ಡಿಮ್ಯಾಂಡ್

Gokarna Papad: ಗೋಕರ್ಣ ಹಪ್ಪಳಕ್ಕೆ ವಿದೇಶದ ಕನಸು! ದೇಸಿ ರುಚಿಗೆ ಭರ್ಜರಿ ಡಿಮ್ಯಾಂಡ್

ಹಪ್ಪಳದ ರುಚಿಯೇ ಸಖತ್

"ಹಪ್ಪಳದ ರುಚಿಯೇ ಸಖತ್"

ಹಪ್ಪಳ,ಸಂಡಿಗೆ ಹಾಗೂ ಮಜ್ಜಿಗೆ ಮೆಣಸಿನ ಮಾರ್ಕೆಟ್ ಸದ್ಯ ಸೀಮಿತ ಗಡಿ ದಾಟಿಲ್ಲ. ಇದಕ್ಕೇನಾದರೂ ಸ್ವಲ್ಪ ಲಿಫ್ಟ್ ಸಿಕ್ಕರೆ ಈ ಉದ್ಯಮ ದೇಶದಾಚೆಗೂ ಮುಟ್ಟಬಹುದು ಅನ್ನೋದನ್ನ ಮರೆಯುವಂತಿಲ್ಲ.

  • Share this:

    ಕಾರವಾರ: ಹಸಿರು, ಕೇಸರಿ, ಹಳದಿ, ಕಂದು ಹೀಗೆ ನಾನಾ ತರಹದ ಹಪ್ಪಳಗಳು, ಸಂಡಿಗೆಗಳು. ಸಖತ್ ಡಿಮ್ಯಾಂಡ್ ಇರೋ ಈ ತಿಂಡಿಗಳಿಗೆ ವರ್ಷವಿಡೀ ಮಾರ್ಕೆಟ್. ಬಗೆ ಬಗೆಯ ಈ ಕರಿದು ತಿನ್ನಬಹುದಾದ ಇವೆಲ್ಲವೂ ಪಕ್ಕಾ ದೇಸಿ ಸೊಪ್ಪು, ತರಕಾರಿಯ ರಂಗು ಪಡೆದ ಹಪ್ಪಳಗಳು. ಗೋಕರ್ಣಕ್ಕೆ (Gokarna Papad) ಸೀಮಿತವಾಗಿದ್ದ ಈ ಹಪ್ಪಳ ಮಾರ್ಕೆಟ್ ಈಗ ಉತ್ತರ ಕನ್ನಡ (Uttara Kannada Papad) ಜಿಲ್ಲೆಯಾದ್ಯಂತ ಹಬ್ಬಿಕೊಂಡಿದೆ. ಬೀಟ್ರೂಟ್ ಹಪ್ಪಳ, ಗಜ್ಜರಿ ಹಪ್ಪಳ, ಹಲಸಿನ ಹಪ್ಪಳ, ಅಕ್ಕಿ ಹಪ್ಪಳ, ಬೆಳ್ಳುಳ್ಳಿ ಹಪ್ಪಳ, ನೀರುಳ್ಳಿ ಹಪ್ಪಳ, ಸಬ್ಬಕ್ಕಿ ಹಪ್ಪಳ, ಪಾಲಕ್ ಹಪ್ಪಳ ಸೇರಿದಂತೆ ಇನ್ನೂ ಆರೆಂಟು ವೆರೈಟಿಯ ಹಪ್ಪಳಗಳು ಸದ್ಯ ಮಾರ್ಕೆಟ್​ನಲ್ಲಿ (Papad Market) ಸಿಗುತ್ತಿವೆ.


    ಬೆಲೆ 50ರಿಂದ 100ರವರೆಗೆ ಇದ್ದು ಒಂದು ಪ್ಯಾಕ್​ನಲ್ಲಿ ಹದಿನೈದು ಹಪ್ಫಳಗಳು ಇರುತ್ತವೆ. ಮಳೆಗಾಲದ ಟೈಮಲ್ಲಂತೂ ಜಾಕ್ ಫ್ರೂಟ್ ಹಪ್ಪಳಗಳಿಗೆ ಜ್ಯಾಕ್ ಪಾಟ್ ಅನ್ನಬಹುದಾದಷ್ಟು ಡಿಮ್ಯಾಂಡ್ ಇರ್ತವೆ. ಮೊದಲು ಗೋಕರ್ಣಕ್ಕಷ್ಟೇ ಸೀಮಿತವಾಗಿದ್ದ ಹಪ್ಪಳ ಮಾರ್ಕೆಟ್, ಇತ್ತೀಚಿನ ದಿನಗಳಲ್ಲಿ ಎಲ್ಲ ಪ್ರಾವಿಷನ್ ಸ್ಟೋರ್​ಗಳಲ್ಲೂ ಹಪ್ಪಳದ್ದೇ ಸದ್ದು ಅನ್ನೋ ಲೆವಲ್ಲಿಗೆ ಬದಲಾಗಿದೆ.


    ಇದನ್ನೂ ಓದಿ: Rani Mahal: ಇದು ಕರುನಾಡಿನ ಮೊಟ್ಟ ಮೊದಲ ರಾಜಮನೆತನದ ರಾಣಿ ನಿವಾಸ


    ಇವೆಲ್ಲಾ ಸ್ಪೆಷಲ್ ಇರುತ್ತೆ
    ಉತ್ತರ ಕನ್ನಡ ಜಿಲ್ಲೆಗೆ ಕೆಲವೊಂದು ಹಪ್ಪಳ ಪ್ರಾಡಕ್ಟ್​ಗಳು ಕಾರ್ಕಳದಿಂದ ಬಂದರೆ ಇನ್ನೂ ಕೆಲವು ಇಲ್ಲಿಯೇ ಸ್ಥಳೀಯರು ತಯಾರಿಸುತ್ತಾರೆ. ಇನ್ನೂ ಸ್ಪೆಷಲ್ ಎಂದರೆ ಸಬ್ಬಕ್ಕಿ ಸಂಡಿಗೆ, ನೀರುಳ್ಳಿ ಸಂಡಿಗೆ ಹಾಗೂ ಬೆಳ್ಳುಳ್ಳಿ ಸಂಡಿಗೆ ಹಪ್ಪಳಕ್ಕಿಂತ ತುಸು ಜೋರಾಗಿಯೇ ಸಪ್ಪಳ ಮಾಡುತ್ತಿದೆ.


    ಮಜ್ಜಿಗೆ ಮೆಣಸು ಹಾಟ್ ಫೆವ್ರೇಟ್!
    ಅಲ್ಲದೇ ಹಾಲಕ್ಕಿ ಸಮುದಾಯದವರು ಮಜ್ಜಿಗೆ ಮೆಣಸನ್ನು ಮಜ್ಜಿಗೆಯಲ್ಲಿ ನೆನೆಸಿಟ್ಟು ಅದನ್ನು ಒಣಗಿಸುತ್ತಾರೆ. ಆ ಮಜ್ಜಿಗೆ ಮೆಣಸು ಲೋಕಲ್ ಹಾಟ್ ಫೇವ್ರೇಟ್. ಇವುಗಳು ಸೀಸನಲ್ ಆದ್ದರಿಂದ ಅವುಗಳು ದರ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಗೋಕರ್ಣದ ಗಲ್ಲಿಗಳಲ್ಲಿ ಸುತ್ತುವ ಪ್ರವಾಸಿಗರಿಗೆ ತಕ್ಷಣ ಕ್ಯಾಚ್ ಹಾಕಿಕೊಳ್ಳುವ ಈ ರಂಗೀನ್ ಗೃಹೋದ್ಯಮ ಗೋಕರ್ಣದ ಟ್ಯಾಗ್​ಗಳಲ್ಲಿ ಒಂದೆನ್ನಬಹುದು.


    ಇದನ್ನೂ ಓದಿ: Yakshagana: ಯಕ್ಷಗಾನವೇ ಈ ಕುಟುಂಬದ ಉಸಿರು! ಯಕ್ಷಗಾನದ ಅಆಇಈ ಕಲಿಯೋಕೆ ಇಲ್ಲಿ ಬನ್ನಿ


    ಆದರೆ ಹಪ್ಪಳ, ಸಂಡಿಗೆ ಹಾಗೂ ಮಜ್ಜಿಗೆ ಮೆಣಸಿನ ಮಾರ್ಕೆಟ್ ಸದ್ಯ ಸೀಮಿತ ಗಡಿ ದಾಟಿಲ್ಲ. ಇದಕ್ಕೇನಾದರೂ ಸ್ವಲ್ಪ ಲಿಫ್ಟ್ ಸಿಕ್ಕರೆ ಈ ಉದ್ಯಮ ದೇಶದಾಚೆಗೂ ಮುಟ್ಟಬಹುದು ಅನ್ನೋದನ್ನ ಮರೆಯುವಂತಿಲ್ಲ. ಹಾಗೆಯೇ ನೀವು ಕೂಡಾ ಗೋಕರ್ಣ ಕಡೆ ಹೋದರೆ ಹಪ್ಪಳ ತರೋದನ್ನು ಮರಿಬೇಡಿ.


    ವರದಿ:ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: