ಆಡು ನೀ ಈಜಾಡು! ನೀ ಆಡು ಆಡು ಈಜಾಡಿ ನೋಡು! ಇದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಾಗರಿಕರು ಸದ್ಯ ಹೇಳ್ತಾ ಇರೋ ಹಾಡು! ಅರೇ! ಯಾಕೆ ಗೊತ್ತಾ ಟೆಂಡರ್ ಸಮಸ್ಯೆಯಿಂದ ನೀರು ಕಾಣದೇ ಬರಡಾಗಿದ್ದ ನಗರಸಭೆಯ ಸ್ವಿಮ್ಮಿಂಗ್ ಪೂಲ್ (Swimming Pool) ಈಗ ತುಂಬಿ ತುಳುಕುತ್ತಿದೆ. ಉತ್ತರ ಕನ್ನಡದ (Uttara Kannada News) ಘಟ್ಟದ ಮೇಲಿನ ತಾಲೂಕುಗಳಲ್ಲಿ ಶಿರಸಿಯ ಮಾರಿಕಾಂಬಾ ಜಿಲ್ಲಾ (Sirsi Marikamba Temple) ಕ್ರೀಡಾಂಗಣವನ್ನು ಆಯ್ದುಕೊಂಡು ಅಲ್ಲಿ ಈ ಹಿಂದೆ ಸ್ವಿಮ್ಮಿಂಗ್ ಪೂಲ್ ನಿರ್ಮಿಸಲಾಗಿತ್ತು. ಸ್ವಲ್ಪ ಸಮಯದಲ್ಲೇ ಟೆಂಡರ್ ಸಮಸ್ಯೆಯಿಂದ ಈ ಸ್ವಿಮ್ಮಿಂಗ್ ಪೂಲ್ ಗೆ ಬೀಗ ಹಾಕಲಾಗಿತ್ತು. ಆದರೆ ಇದೀಗ ಸ್ವಿಮ್ಮಿಂಗ್ ಪೂಲ್ ತುಂಬಿದೆ.
ಆದರೆ ಈಗಿನ ನಗರಸಭೆಯ ಅಧಿಕಾರಿ ವರ್ಗದ ಪ್ರಯತ್ನದಿಂದ ಪುನಃ ಪೂಲ್ ಆರಂಭವಾಗಿದೆ. ಅಷ್ಟೇ ಅಲ್ಲದೇ, ಈ ಸ್ವಿಮ್ಮಿಂಗ್ ಪೂಲ್ ಅಲ್ಲಿ ಈಜು ತರಬೇತಿ, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ, ಲೈಟಿಂಗ್ಸ್ನೊಂದಿಗೆ ಸುಸಜ್ಜಿತ ವಾತಾವರಣ ಕಲ್ಪಿಸಲಾಗಿದೆ.
ತರಬೇತಿಯ ವಿವರ ಹೀಗಿದೆ ನೋಡಿ
21 ದಿನಗಳ ತರಬೇತಿಯನ್ನು ಈಜುಪಟುಗಳಿಂದ ಕೊಡಲಾಗುತ್ತದೆ. ಪ್ರತಿ ದಿನ ಸಂಜೆ 6-7 ಗಂಟೆ ತರಬೇತಿಯ ಅವಧಿಯಾಗಿರುತ್ತದೆ. ಈಜುಕೊಳಕ್ಕೆ ಪ್ರತಿ ಸೋಮವಾರ ರಜಾದಿನವಾಗಿರುತ್ತದೆ.
ಸದಸ್ಯತ್ವ ನೋಂದಣಿಯ ವಿವರ ಹೀಗಿದೆ ನೋಡಿ
ನೀವು ಈ ಈಜುಕೊಳದ ಸದಸ್ಯರಾಗಿ ಕೆಲವು ವಿಶೇಷ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಸದಸ್ಯತ್ವ ನಾಲ್ಕು ವಿಭಾಗದಲ್ಲಿ ಇರುತ್ತದೆ.
1. ವಾರ್ಷಿಕ ಸದಸ್ಯತ್ವ
2. ಆರು ತಿಂಗಳ ಸದಸ್ಯತ್ವ
3. ಮೂರು ತಿಂಗಳ ಸದಸ್ಯತ್ವ
4. ಒಂದು ತಿಂಗಳ ಸದಸ್ಯತ್ವ
ಅಷ್ಟೇ ಅಲ್ಲದೇ ಮಹಿಳೆಯರಿಗೆ ಪ್ರತ್ಯೇಕ ಬ್ಯಾಚ್ ವ್ಯವಸ್ಥೆಯನ್ನೂ ಸಹ ಶಿರಸಿಯ ಈ ಈಜುಕೊಳದಲ್ಲಿ ಮಾಡಲಾಗಿದೆ.
ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಈ ಸ್ವಿಮ್ಮಿಂಗ್ ಪೂಲ್ ಇದ್ದು ಶ್ರೀ ಮಾರಿಕಾಂಬಾ ಸ್ವಿಮ್ಮಿಂಗ್ ಎಂಬ ಹೆಸರಿನಲ್ಲಿ ಈ ಈಜುಕೊಳ ಆರಂಭವಾಗಿದೆ.
ಈ ಮೇಲಿನ ಎಲ್ಲಾ ವಿಷಯಗಳ ಬಗ್ಗೆ ವಿಚಾರಿಸಲು ಈಜುಕೊಳದ ನಿರ್ವಾಹಕರಾದ ಯೋಗೇಶ್ ಕುರುಬರ್ ಅವರನ್ನು ಸಂಪರ್ಕಿಸಬಹುದಾಗಿದೆ. ಇಲ್ಲಿದೆ ನೋಡಿ ದೂರವಾಣಿ ಸಂಖ್ಯೆ: 9886534720, 9481275445.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ