• Home
 • »
 • News
 • »
 • uttara-kannada
 • »
 • Sweet Potato: ಅಂಕೋಲಾ ಗೆಣಸು ಉಪವಾಸಕ್ಕೆ ಫೇಮಸ್ಸು! ಆರೋಗ್ಯಕ್ಕಂತೂ ಭಾರೀ ಬೆಸ್ಟು

Sweet Potato: ಅಂಕೋಲಾ ಗೆಣಸು ಉಪವಾಸಕ್ಕೆ ಫೇಮಸ್ಸು! ಆರೋಗ್ಯಕ್ಕಂತೂ ಭಾರೀ ಬೆಸ್ಟು

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ನಾನಾ ಬಗೆಯ ಈ ಗಡ್ಡೆ ಗೆಣಸುಗಳಿಗೆ ಇಷ್ಟೊಂದ್ ಡಿಮ್ಯಾಂಡ್ ಇರೋದಕ್ಕೆ ಅಂಕೋಲಾ ಹಾಲಕ್ಕಿ ಸಮುದಾಯದವರು ಸಾವಯವ ವಿಧಾನದಲ್ಲಿ ಬೆಳೆಯೋದೇ ಕಾರಣ.

 • Share this:

  ಕಾರವಾರ: ಎಲ್ಲಿ ನೋಡಿದ್ರೂ ಗಡ್ಡೆ ಗೆಣಸುಗಳೇ (Sweet Potato)  ತುಳಸಿ ಗಡ್ಡೆ, ಬಿಳಿಗೆಣಸು, ಚೆಂಡಿನಾಕಾರದ ಗೆಣಸು, ಕೋಲುಗೆಣಸು, ಮರಗೆಣಸು, ಕೆಸುವಿನ ಗಡ್ಡೆ (Colocasia) ಹೀಗೆ ನಾನಾ ಬಗೆಯ ಗೆಣಸುಗಳು. ಅರೆ! ಇದೇನು ಆಶ್ಚರ್ಯ ಇಲ್ಲೇನಾದ್ರೂ ಗಡ್ಡೆ ಗೆಣಸುಗಳಿಗೇನೆ ಮಾರ್ಕೆಟ್ ಇದೆಯಾ ಅಂದ್ಕೊಂಡ್ರಾ? ಉತ್ತರ ಕನ್ನಡ ಜಿಲ್ಲೆಯ (Uttara Kannada) ಅಂಕೋಲಾ ಪೇಟೆ ಇರೋದೇ ಹೀಗೆ!


  ಅಂಕೋಲಾ ಸಾವಯವ ತರಕಾರಿಗಳು ಅಂದ್ರೆ ತುಂಬಾನೇ ಫೇಮಸ್. ಇಲ್ಲಿಯ ಗಡ್ಡೆ ಗೆಣಸುಗಳಂತೂ ತುಂಬಾ ಸ್ವಾದಿಷ್ಟ, ಆರೋಗ್ಯಕ್ಕೂ ಅಷ್ಟೇ ಒಳ್ಳೇದು. ಹೀಗಾಗಿಯೇ ಇಲ್ಲಿನ ಮಾರ್ಕೆಟ್​ಗಳಲ್ಲಿ ಗಡ್ಡೆ ಗೆಣಸುಗಳದ್ದೇ ದರ್ಬಾರ್!


  ಇದನ್ನೂ ಓದಿ: Dharmasthala Lakshadeepotsava: 5 ದಿನಗಳ ಕಾಲ ಧರ್ಮಸ್ಥಳ ಲಕ್ಷದೀಪೋತ್ಸವ; ಇಲ್ಲಿದೆ ಪ್ರತಿದಿನದ ಕಾರ್ಯಕ್ರಮ ವಿವರ


  ಹಾಲಕ್ಕಿ ಸಮುದಾಯದಿಂದ ಸಾವಯವ ಬೆಳೆ
  ನಾನಾ ಬಗೆಯ ಈ ಗಡ್ಡೆ ಗೆಣಸುಗಳಿಗೆ ಇಷ್ಟೊಂದ್ ಡಿಮ್ಯಾಂಡ್ ಇರೋದಕ್ಕೆ ಅಂಕೋಲಾ ಹಾಲಕ್ಕಿ ಸಮುದಾಯದವರು ಸಾವಯವ ವಿಧಾನದಲ್ಲಿ ಬೆಳೆಯೋದೇ ಕಾರಣ.


  ಇದನ್ನೂ ಓದಿ: Positive Story: ಕೊಂಕಣಿ ಮಾತನಾಡುವ ಅಣಶಿ ಮಕ್ಕಳಿಗೆ ಕನ್ನಡ ಕಲಿಸುವ ಶಿಕ್ಷಕಿ; ಸೌಲಭ್ಯವೇ ಇರದೆಡೆ ಸಾಹಸ


  ಕಾರ್ಬೋಹೈಡ್ರೇಟಿನ ಆಗರ ಈ ಗೆಣಸು
  ಇಷ್ಟೇ ಅಲ್ಲ, ಉತ್ತರ ಕನ್ನಡ ಅಂಕೋಲಾದಲ್ಲಿ ಗೆಣಸುಗಳಿಗೆ ಪೂಜನೀಯ ಸ್ಥಾನವೂ ಇದೆ. ವಿವಿಧ ಧಾರ್ಮಿಕ ಆಚರಣೆಗಳಲ್ಲಿ ಗೆಣಸಿನ ಬಳಕೆಯಿದೆ. ಕಾರ್ಬೋಹೈಡ್ರೇಟಿನ ಆಗರವಾಗಿರುವ ಈ ಗೆಣಸನ್ನು ಉಪವಾಸಕ್ಕೂ ಮುನ್ನ ತಿಂದರೆ ದೇಹಕ್ಕೂ ಪುಷ್ಠಿ ನೀಡುತ್ತಂತೆ. ಒಟ್ಟಾರೆ ಅಪ್ಪಟ ಸಾವಯವ ಅಂಕೋಲಾ ಗಡ್ಡೆ ಗೆಣಸಿಗೆ ಇನ್ನಷ್ಟು ದೊಡ್ಡ ಮಾರುಕಟ್ಟೆ ಸಿಗಲಿ, ಬೆಳೆಗಾರರ ಬದುಕೂ ಬಂಗಾರವಾಗಲಿ ಅನ್ನೋದೇ ನಮ್ಮ ಆಶಯ.


  ವರದಿ: ಎ.ಬಿ.ನಿಖಿಲ್, ಮುಂಡಗೋಡ್

  Published by:ಗುರುಗಣೇಶ ಡಬ್ಗುಳಿ
  First published: