ಉತ್ತರ ಕನ್ನಡ: ಕಾರವಾರದ ಕತ್ತಲಲ್ಲಿ ಉರಿದೆದ್ದವು ದೊಂದಿಗಳು, ಯಕ್ಷವೇಷದ ಆರ್ಭಟಕ್ಕೆ ಭಕ್ತಿಯಿಂದ ಶರಣೆಂದವು ಕರಗಳು. ಡೆನ್ನಾನ ಡೆನ್ನಾನ ಪಾಡ್ದನದ ಮೂಲಕ ಮೆರೆದಾಡಿದವು ತುಳುನಾಡಿದ (Tulu Nadu) ದೈವಗಳು! ಹೀಗೆ ಉತ್ತರ ಕನ್ನಡದ (Uttara Kannada News) ಮಾಜಾಳಿಯಲ್ಲಿ ಮೇಳೈಸಿತು ಸ್ವಾಮಿ ಕೊರಗಜ್ಜನ ಯಕ್ಷಗಾನ (Yakshagana) ಬಯಲಾಟ.
ಕೊರಗಜ್ಜನ ಕಥೆ
ಯೆಸ್, ಸ್ವಾಮಿ ಕೊರಗಜ್ಜ ಅಂದ್ರೆ ತುಳುನಾಡಿನಲ್ಲಿ ನೆಲೆಯಾದ ದೈವವಾದರೂ, ನಾಡಿಗೆಲ್ಲ ಚಿರಪರಿಚಿತ ದೈವ. ಜೊತೆಗೆ ಅಪಾರ ಸಂಖ್ಯೆಯ ಭಕ್ತರನ್ನ ಹೊಂದಿರುವ ಕಾರಣಿಕ ದೈವವೂ ಆಗಿದೆ. ಇದೀಗ ಕೊರಗಜ್ಜ ಜೀವನ ಚರಿತ್ರೆ, ಕಾರಣಿಕ ನೋಡುವ ಅವಕಾಶವನ್ನ ಉತ್ತರ ಕನ್ನಡದ ಕಾರವಾರದ ಮಾಜಾಳಿಯ ಜನತೆ ಪಡೆದುಕೊಂಡರು.
ಯಕ್ಷಗಾನ ಬಯಲಾಟ
ಉಡುಪಿಯ ಹಿರಿಯಡ್ಕದ ಶ್ರೀವೀರಭದ್ರೇಶ್ವರ ಯಕ್ಷಗಾನ ಮಂಡಳಿ ವತಿಯಿಂದ ಮಾಜಾಳಿಯಲ್ಲಿ ಸ್ವಾಮಿ ಕೊರಗಜ್ಜನ ಜೀವನ ಚರಿತೆ ಕುರಿತ ಯಕ್ಷಗಾನವನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಇಂತಹ ಅಪರೂಪದ ಹಾಗೂ ಅವಿಸ್ಮರಣೀಯ ಕ್ಷಣವನ್ನ ಜನ ಒಂದಿನಿತು ಮಿಸ್ ಮಾಡ್ದೇ ಕಣ್ತುಂಬಿಕೊಂಡ್ರು.
ಇದನ್ನೂ ಓದಿ: Ganapati Temple: ಈ ಗಣಪನಿಗೆ 6 ಕೈಗಳು, ಇಲ್ಲಿ ಯಕ್ಷಗಾನ ನೋಡಿದ್ರೆ ಕಷ್ಟಗಳೆಲ್ಲ ಮಂಗಮಾಯ!
ಭಕ್ತಿ ಹೆಚ್ಚಿಸಿದ ಬಯಲಾಟ
ಹೀಗೆ ಕರಾವಳಿ ಕರ್ನಾಟಕದ ಗಂಡುಕಲೆ ಪ್ರದರ್ಶನವನ್ನು ಉಡುಪಿ ಮೂಲದ ಸಂತೋಷ್ ಅನ್ನೋ ಹೋಟೆಲ್ ಉದ್ಯಮಿಯೊಬ್ಬರು ಆಯೋಜಿಸಿದ್ದರು. ಸುಮಾರು ಒಂದೂವರೆ ಲಕ್ಷ ರೂಪಾಯಿ ಖರ್ಚಿನಲ್ಲಿ ನಡೆದ ಉಚಿತ ಪ್ರದರ್ಶನವನ್ನ ಜನ ಇಷ್ಟಪಟ್ಟು ನೋಡಿದ್ರು. ಅದರಲ್ಲೂ ಕೊರಗಜ್ಜ ವೇಷದ ಆಗಮನವಾಗುತ್ತಲೇ ಭಕ್ತಿಯಿಂದ ಕೈ ಮುಗಿದರು. ತಮ್ಮ ತಮ್ಮ ಮೊಬೈಲ್ ಗಳಲ್ಲಿ ಆಟದ ದೃಶ್ಯಗಳನ್ನ ಸೆರೆ ಹಿಡಿದು ಸಂಭ್ರಮಿಸಿದರು.
ಇದನ್ನೂ ಓದಿ:Uttara Kannada: ಈ ಹಳ್ಳಿ ಸಂಸ್ಥೆ 6 ತಿಂಗಳಿಗೆ 15 ಲಕ್ಷ ವಹಿವಾಟು ನಡೆಸುತ್ತೆ!
ಒಟ್ಟಿನಲ್ಲಿ ತುಳುನಾಡಿನ ಆರಾಧ್ಯ ದೈವ ಸ್ವಾಮಿ ಕೊರಗಜ್ಜನ ಯಕ್ಷಗಾನ ಬಯಲಾಟ ಮೊದಲ ಬಾರಿಗೆ ಕಾರವಾರದಲ್ಲೂ ಸಂಚಲನ ಮೂಡಿಸಿತು. ಜನರೆಲ್ಲ ಕೊರಗಜ್ಜ ದೈವದ ನೇಮೋತ್ಸವದಂತೆಯೇ ಭಯ ಭಕ್ತಿಯಿಂದ ವೀಕ್ಷಿಸಿ ಸಂತೃಪ್ತರಾದರು.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ