Business Idea: ಬೇಸಿಗೆ ರಜೆ ಬ್ಯುಸಿನೆಸ್! ಮಾವಿನ ಹಣ್ಣು ಮಾರಿ ದಿನಕ್ಕೆ 5 ಸಾವಿರ ದುಡಿಯುವ ಮಕ್ಕಳು

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ರಾಜ್ಯ ಹೆದ್ದಾರಿ 69ರ ಸಾಲುಮರದ ನೆರಳಲ್ಲಿ ಸಣ್ಣ ಅಂಗಡಿಗಳನ್ನು ಇಟ್ಟುಕೊಂಡು ಮಕ್ಕಳು ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿರುತ್ತಾರೆ. ಇವರು ದಿನಕ್ಕೆ ಏನಿಲ್ಲ ಅಂದ್ರೂ ಐದು ಸಾವಿರದಷ್ಟು ಆದಾಯ ಪಡೆಯುತ್ತಾರಂತೆ!

  • News18 Kannada
  • 3-MIN READ
  • Last Updated :
  • Mundgod, India
  • Share this:

ಉತ್ತರ ಕನ್ನಡ: ರಸ್ತೆ ಬದಿಯಲ್ಲಿ ಘಮಘಮಿಸೋ ಮಾವಿನ ಹಣ್ಣಿನ ಪರಿಮಳ. ಮಕ್ಕಳೇ ನಿಂತು ಮಾಡ್ತಾರೆ ಮಾರಾಟ. ತೋಟದಿಂದ ನೇರವಾಗಿ ತರೋ ಮಾವಿನ ಹಣ್ಣಿಗೆ ಸಾಲು ಮರಗಳೇ ಮಾರಾಟ ಮಳಿಗೆ. ಮಕ್ಕಳ ಬೇಸಿಗೆ ರಜೆಯ (Summer Holiday Business Idea) ಜೊತೆಗೆ ಆದಾಯ ನೀಡೋ ಮಾವಿನ ಹಣ್ಣಿನ (Mango) ರುಚಿ ಜನರ ಬಾಯಿ ಚಪ್ಪರಿಸುವಂತೆ ಮಾಡ್ತಿದೆ.




ಭರ್ಜರಿ ಮಾರಾಟ
ಯೆಸ್, ಮಾವಿನ ಸೀಸನ್ ಶುರುವಾಗ್ತಿದ್ದಂತೆ ಎಲ್ಲೆಂದೆರಲ್ಲಿ ಮಾವಿನ ಹಣ್ಣುಗಳ ಮಾರಾಟ ಶುರುವಾಗುತ್ತೆ. ಅಂತೆಯೇ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಾವಿನ ಮಾರಾಟ ಭರ್ಜರಿಯಾಗಿ ಸಾಗಿದೆ‌. ಅಂಕೋಲಾದ ಕರಿಇಷಾಡ, ಮಲೆನಾಡಿನ ಅಪ್ಪೆಮಿಡಿ, ನೀಲಂ, ಮಾವಿನ ಹಣ್ಣುಗಳು ಭರ್ಜರಿಯಾಗಿ ಮಾರಾಟವಾಗ್ತಿವೆ.


ಶಾಲಾ ಮಕ್ಕಳಿಂದ ಮಾವಿನ ವ್ಯಾಪಾರ
ವಿಶೇಷ ಅಂದ್ರೆ ಜಿಲ್ಲೆಯ ಮುಂಡುಗೋಡದ ಪಾಳಾ ಊರಿನ ಬಹುಪಾಲು ಕೃಷಿಕರು ಆಧರಿಸಿರುವುದು ಮಾವಿನ ಕೃಷಿಯನ್ನೇ. ಆದರೂ ಇಲ್ಲಿಯವರ್ಯಾರು ಅದನ್ನು ಮಾರುಕಟ್ಟೆಗೆ ಕೊಡೋದಿಲ್ಲ. ಬದಲಿಗೆ ನೇರವಾಗಿ ತಾವೇ ಮಾರುಕಟ್ಟೆಗೆ ತರುತ್ತಾರೆ. ರಸ್ತೆ ಬದಿಯ ಮರದಡಿಯಲ್ಲಿ ಕೂತು ಅಲ್ಲೇ ವ್ಯಾಪಾರ ಕುದುರಿಸುತ್ತಾರೆ. ಸದ್ಯ ಮಕ್ಕಳಿಗೆ ಬೇಸಿಗೆ ರಜೆಯಿದ್ದು, ಮಕ್ಕಳು ತಮ್ಮ ಮನೆಗಳಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ಮಾರ್ಕೆಟ್​ಗೆ ತಂದು ಮಾರಾಟ ಮಾಡ್ತಾ ಆದಾಯ ಗಳಿಸ್ತಾರೆ. ಜೊತೆಗೆ ತಮ್ಮ ಪೋಷಕರಿಗೆ ಆಧಾರವಾಗ್ತಿದ್ದಾರೆ.




ಇದನ್ನೂ ಓದಿ: Leaf Helmet: ನೇರಳೆ ಮರದ ಎಲೆಯಿಂದ ಹೆಲ್ಮೆಟ್! ಇದರಿಂದ ತಲೆ ಆಗುತ್ತೆ ಕೂಲ್‌


ಕಡಿಮೆ ಬೆಲೆಗೆ ಸಿಗುತ್ತೆ ತಾಜಾ ಹಣ್ಣು
ರಾಜ್ಯ ಹೆದ್ದಾರಿ 69ರ ಸಾಲುಮರದ ನೆರಳಲ್ಲಿ ಸಣ್ಣ ಅಂಗಡಿಗಳನ್ನು ಇಟ್ಟುಕೊಂಡು ಮಕ್ಕಳು ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿರುತ್ತಾರೆ. ಇವರು ದಿನಕ್ಕೆ ಏನಿಲ್ಲ ಅಂದ್ರೂ ಐದು ಸಾವಿರದಷ್ಟು ಆದಾಯ ಪಡೆಯುತ್ತಾರಂತೆ!




ಪೇಟೆಗಿಂತ ಕಮ್ಮಿ ಬೆಲೆಗೆ ಅಂದರೆ ಕೆಜಿಗೆ 100 ರಿಂದ 150 ರೂಪಾಯಿ ದರದಲ್ಲಿ ಮಾರಾಟವಾಗುವ ತಾಜಾ ತಾಜಾ ನೀಲಂನಂತಹ ಹಣ್ಣುಗಳು ವೇಗದ ಬೈಕ್ ಕಾರುಗಳನ್ನು ತಮ್ಮ ಘಮದಿಂದ ತಡೆದು ನಿಲ್ಲಿಸುವಷ್ಟರ ಮಟ್ಟಿಗೆ ಮಾವುಗಳ ಪರಿಮಳ, ಬಣ್ಣ ಕೈಬೀಸಿ ಕರೆಯುತ್ತೆ.


ಇದನ್ನೂ ಓದಿ: Vibhuti In River: ಈ ನದಿಯಲ್ಲಿ ಸಿಗುತ್ತಂತೆ ನೈಸರ್ಗಿಕ ವಿಭೂತಿ!


ಒಟ್ಟಿನಲ್ಲಿ ಮಕ್ಕಳಿಗೆ ವ್ಯಾಪಾರದ ಅನುಭವ, ಮಾವುಗಳ ಭರ್ಜರಿ ವ್ಯಾಪಾರ ಉತ್ತರ ಕನ್ನಡದ ರಾಜ್ಯ ಹೆದ್ದಾರಿಗಳಲ್ಲಿ ಇದೀಗ ಸಖತ್ ಘಮ ಘಮಿಸುತ್ತಿದೆ.

First published: