Positive Story: ಅಮೇರಿಕಾದ ಸಂಸ್ಥೆಯಿಂದ ಸಿದ್ಧಿ ಹುಡುಗಿಗೆ ಸ್ಕಾಲರ್‌ಶಿಪ್‌, ಇದು ಕಣ್ರೀ ಸಾಧನೆ ಅಂದ್ರೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಹೇಳಿ ಕೇಳಿ ಪ್ರಭಾವತಿ ಸಿದ್ಧಿಯವರ ಮನೆ ಇರುವ ಪಣತಗೇರಿ ಅದೆಂಥಾ ಕಾಡು ಅಂತೀರಾ? ಸುತ್ತಲೂ ಕಾಡಿನ ನಡುವಿನ ಹಾದಿಯಲ್ಲಿ ನಾಲ್ಕೈದು ಜನ ಸಿಕ್ಕರೇ ಅದೇ ಅದೃಷ್ಟ!

  • Share this:

ಉತ್ತರ ಕನ್ನಡ: ಸಣ್ಣ ಮನೆ, ದಟ್ಟದಾದ ಕಾಡು, ಹದಗೆಟ್ಟ ರಸ್ತೆ. ಇದೆಲ್ಲಾ ದಾಟಿಕೊಂಡು ಬರೀ ಪರೀಕ್ಷೆ ಮಾತ್ರವಲ್ಲ ಜೀವನವನ್ನೇ ಗೆದ್ದ ಹುಡುಗಿಯ ರಿಯಲ್‌ ಕಥೆ ಇದು. ಪಿಯುಸಿಯಲ್ಲಿ ಸಾಧನೆ ಮಾಡಿದ (Posiytive Story) ಸಾಧನೆ ಈ ಸಿದ್ಧಿ ಬಾಲಕಿಯ ಬದುಕನ್ನೇ ಬದಲಿಸಿದೆ. ಬುಡಕಟ್ಟು ಜನಾಂಗದ ಹೆಣ್ಮಗಳೊಬ್ಬಳು ಅಮೆರಿಕಾದ ಸ್ಕಾಲರ್​ಶಿಪ್‌ (American Scholarship)  ಪಡೆಯುವ ಮೂಲಕ ಉನ್ನಂತ ವ್ಯಾಸಂಗಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.


ಯೆಸ್‌, ಈಕೆಯ ಹೆಸರು ಪ್ರಭಾವತಿ ಸಿದ್ಧಿ. ಉತ್ತರ ಕನ್ನಡದ ಯಲ್ಲಾಪುರದ ಪಣತಗೇರಿಯ ನರಸಿಂಹ ಸಿದ್ದಿ ಹಾಗೂ ಮಹಾಲಕ್ಷ್ಮಿ ಸಿದ್ದಿಯವರ ಮಗಳು.  ಈ ವರ್ಷದ ಪಿಯುಸಿ ಫಲಿತಾಂಶದಲ್ಲಿ ಶೇಕಡಾ 75ರಷ್ಟು ಅಂಕ ಪಡೆದು ವಿಜ್ಞಾನ ವಿಭಾಗದಲ್ಲಿ ವಿಶಿಷ್ಟ ಸಾಧನೆ ಮಾಡಿದವರು.
ಕಾಡಿನಲ್ಲಿ ಪಯಣ
ಹೇಳಿ ಕೇಳಿ ಪ್ರಭಾವತಿ ಸಿದ್ಧಿಯವರ ಮನೆ ಇರುವ ಪಣತಗೇರಿ ಅದೆಂಥಾ ಕಾಡು ಅಂತೀರಾ? ಸುತ್ತಲೂ ಕಾಡಿನ ನಡುವಿನ ಹಾದಿಯಲ್ಲಿ ನಾಲ್ಕೈದು ಜನ ಸಿಕ್ಕರೇ ಅದೇ ಅದೃಷ್ಟ! ನೆಟ್‌ವರ್ಕ್‌ ಮಾತಂತೂ ಇಲ್ವೇ ಇಲ್ಲ. ಕನಿಷ್ಟ ಪಕ್ಷ ಯಾರಿಗಾದರೂ ಹುಷಾರು ತಪ್ಪಿದರೂ ಐದಾರು ಕಿಲೋಮೀಟರ್ ದೂರದ ನಂದೊಳ್ಳಿಗೆ ಹೋಗಬೇಕು. ಇಂತಹ ವ್ಯವಸ್ಥೆಯಲ್ಲಿ ಕಲಿತು ಅಮೇರಿಕಾ ದೇಶದ ಸಂಸ್ಥೆ ಕೊಡುತ್ತಿರುವ ವಿದ್ಯಾರ್ಥಿ ವೇತನವನ್ನು ಈ ಹುಡುಗಿ ಗೆದ್ದಿರೋದು ನಿಜಕ್ಕೂ ಹೆಮ್ಮೆಯ ವಿಚಾರವೇ ಸರಿ.


20 ಕಿ.ಮೀ. ದೂರದಲ್ಲಿ ಕಾಲೇಜು
ಯಲ್ಲಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಆಗಿರುವ ಪ್ರಭಾವತಿ ಸಿದ್ಧಿ, ಕಾಲೇಜಿಗೆ ತಲುಪಲು ಏನಿಲ್ಲ ಅಂದ್ರೂ 20 ಕಿಲೋಮೀಟರ್ ಹೋಗಬೇಕಿತ್ತು. ಅದರಲ್ಲೂ ಅಣಲುಗಾರು ಕ್ರಾಸ್ ತನಕ ಬಸ್ಸಿಲ್ಲ, ಅಷ್ಟಾದರೂ ಕೂಡ ಛಲ ಬಿಡದೇ ಕಲಿತು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕವನ್ನೇ ಗಳಿಸಿದ್ದಾಳೆ.


ಇದನ್ನೂ ಓದಿ: Idagunji Ganapati: ಮಹತೋಭಾರ ವಿನಾಯಕನ ಕ್ಷೇತ್ರ ದರ್ಶನ, ಇದು ಇಡಗುಂಜಿ ಗಣಪತಿಯ ಮಹಿಮೆ


ಅಮೆರಿಕಾ ಸಂಸ್ಥೆಯ ಸ್ಕಾಲರ್‌ಶಿಪ್‌!
ಮುಂದೆ ಸಾಫ್ಟ್‌ ವೇರ್‌ ಇಂಜಿನಿಯರಿಂಗ್‌ ಜೊತೆಗೆ ಐಎಎಸ್ ಕನಸು ಹೊತ್ತಿರುವ ಪ್ರಭಾವತಿಗೆ, ಅಮೇರಿಕಾ ಮೂಲದ Small Acts for Sustainability ಎಂಬ ಸಂಸ್ಥೆಯು ಪ್ರಭಾವತಿ ಸಿದ್ಧಿ ಅವರ ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ಭರಿಸುವುದಾಗಿ ತಿಳಿಸಿದೆ. ಕೂಲಿ ಕೆಲಸ ಮಾಡುವ ತಂದೆ ತಾಯಿ ಮುಖದಲ್ಲಿ ಈ ಸುದ್ದಿ ಜಗತ್ತೇ ಗೆದ್ದುವೆ ಅನ್ನೋ ಖುಷಿಯನ್ನ ಮೂಡಿಸಿದೆ.
ಪರಿಶ್ರಮಕ್ಕೆ ತಕ್ಕ ಫಲ!
ಇದೇ ಪ್ರಭಾವತಿ SSLC ಯಲ್ಲಿ 89% ಅಂಕ ಪಡೆದು ಸಿದ್ದಿ ಜನಾಂಗದಲ್ಲೇ ಅತಿ ಹೆಚ್ಚು ಅಂಕ ಪಡೆದ ಹೆಣ್ಮಗಳು ಅನ್ನೋ ಹಿರಿಮೆಗೆ ಪಾತ್ರರಾಗಿದ್ದರು. ಈ ಹಿಂದೆ ನಾಗಶ್ರೀ ಸಿದ್ಧಿ ಎಂಬ ಯುವತಿ ಕೂಡಾ ಅಮೇರಿಕನ್ ಸ್ಕಾಲರ್​ಶಿಪ್ ಅನ್ನು ಪಡೆದಿದ್ದು, ಈಗ ಇಂಜಿನಿಯರಿಂಗ್ ಓದುತ್ತಿದ್ದಾರೆ.


ಇದನ್ನೂ ಓದಿ: Inspiration: 300 ಕೆಜಿ ಭಾರ ಹೊತ್ತು ಸಾಗುತ್ತೆ ಈ ರೈತ ತಯಾರಿಸಿದ ಗಾಡಿ!

top videos


    ವಿಶೇಷ ಅಂದ್ರೆ ಅವರು ಕೂಡಾ ಇದೇ ಯಲ್ಲಾಪುರ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು. ಒಟ್ಟಿನಲ್ಲಿ ಪ್ರಭಾವತಿ ಸಿದ್ಧಿ ಪರಿಶ್ರಮ, ಛಲ ಅವರನ್ನ ಇನ್ನಷ್ಟು ಎತ್ತರಕ್ಕೇರಿಸಲಿ, ಒಂದಲ್ಲ ಒಂದು ದಿನ ದೇಶವೇ ಗುರುತಿಸುವಂತಹ ಅಧಿಕಾರಿ ಆಗಿ ಹೊರಹೊಮ್ಮಲಿ ಅನ್ನೋ ಆಶಯ ನಮ್ಮದು.

    First published: