ಉತ್ತರ ಕನ್ನಡ: ಕೆಂಪು ಸೌತೆಕಾಯಿ, ಕಲ್ಲಂಗಡಿ ಜೊತೆಗೆ ಬೆಳೆದಿದ್ದಾರೆ ಅಂದ್ಕೊಂಡ್ರಾ? ಇಲ್ಲ ಕಣ್ರೀ! ಹಣ್ಣಾಗಿರೋ ಹಳದಿ ಸೌತೆಯಂತಿರೋ ಇದು ಕೂಡಾ ಕಲ್ಲಂಗಡಿನೇ. ನಿಜ, ಕಲ್ಲಂಗಡಿ (Watermelon) ಅಂದಾಗ ನಮ್ಗೆಲ್ಲ ಕಾಮನ್ ಆಗಿ ತಲೆಗೆ ಬರೋದು ಹಸಿರು ಬಣ್ಣ, ಒಳಗಡೆ ಕೆಂಪಗಿನ ತಿರುಳು. ಆದ್ರೆ ಇಲ್ಲಿದೆ ನೋಡಿ ಸಖತ್ ಡಿಫರೆಂಟ್ ಆಗಿರೋ ಹಳದಿ ಕಲ್ಲಂಗಡಿ ಹಣ್ಣು. ಹಾಗಿದ್ರೆ ಏನಿದರ ಸ್ಪೆಷಲ್, (Yellow Watermelon) ಹೇಗಿದೆ ಮಾರ್ಕೆಟಿಂಗ್ ಅನ್ನೋದನ್ನೆಲ್ಲ ತಿಳ್ಕೊಂಡು ಬರೋಣ ಬನ್ನಿ.
ಯೆಸ್, ಉತ್ತರ ಕನ್ನಡದ ರೈತರೊಬ್ಬರ ಜಮೀನಿನಲ್ಲಿ ಕಂಡು ಬರುವ ಈ ಹಳದಿ ಕಲ್ಲಂಗಡಿ ಒಂದೊಮ್ಮೆ ನಮ್ ಕಣ್ಣಿಗೇನಾದ್ರೂ ಕಾಮಾಲೆ ಹತ್ತಿಕೊಂಡಿತ ಅನ್ನೋ ಸಂಶಯ ಮೂಡಿಸುತ್ತೆ. ಯಾಕಂದ್ರೆ ಕಲ್ಲಂಗಡಿ ಗದ್ದೆಯಲ್ಲಿ ಹಸಿರು ಗೀಟುಗಳ ಹಣ್ಣು ಕಾಣೋ ಬದಲು ಈ ಹಳದಿ ಹಣ್ಣು ಕಂಡ್ರೆ ಹೇಗಿರ್ಬೇಡ ಅಲ್ವ? ಯಲ್ಲಾಪುರ ಶಿರಸಿ ಮಾರ್ಗದಲ್ಲಿ ಮಳಲಗಾಂವ್ ಕ್ರಾಸ್ ಬಳಿ ಮಹಾಬಲೇಶ್ವರ ಭಟ್ಟರ ಕಲ್ಲಂಗಡಿ ತೋಟದ ದರ್ಶನವಾಗುತ್ತೆ.
ತೈವಾನ್ ತಳಿಯ ಕಲ್ಲಂಗಡಿ ಇದು
2016 ರಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಮಹಾಬಲೇಶ್ವರ ಭಟ್ಟರು, ಕ್ಲೋನ್ ಯೂ ಸೀಡ್ಸ್ ಎಂಬ ಖಾಸಗಿ ಕಂಪನಿಯಿಂದ ಆರೋಹಿ, ರೋಶನಿ, ಕಿರಣ್, ವಿಶಾಲಾ ತಳಿಯ ಕಲ್ಲಂಗಡಿ ಬೀಜಗಳನ್ನು ತೆಗೆದುಕೊಂಡು ಮೊದಲು ಅವುಗಳನ್ನು ನರ್ಸರಿ ಮಾದರಿಯಲ್ಲಿ ಬೆಳೆಸಿಕೊಂಡು ನಂತರ ಅವುಗಳನ್ನು ನಾಟಿ ಮಾಡಿದ್ದಾರೆ. ಎರಡೂವರೆ ತಿಂಗಳಲ್ಲೇ ಫಲ ಕೊಡುವ ತೈವಾನ್ ಮೂಲದ ಈ ಹಣ್ಣುಗಳಿಗೆ ಗೋವಾದಲ್ಲಿ ಫುಲ್ ಬೇಡಿಕೆಯಿದೆ.
ಇದನ್ನೂ ಓದಿ: Uttara Kannada: ಶಾಲ್ಮಲೆಯ ನಡುಗಡ್ಡೆಯಲ್ಲಿ ಸಾಸಿವೆಯಷ್ಟು ಬೆಳೆಯುವ ಸಿದ್ಧಿ ವಿನಾಯಕ!
ಕೆಜಿಗೆ ಎಷ್ಟು ರೇಟ್ ಗೊತ್ತಾ?
ಸುಮಾರು 20 ಗುಂಟೆಯಲ್ಲಿ 8 ಕ್ವಿಂಟಾಲ್ ಭರ್ಜರಿ ಬೆಳೆಯನ್ನು ಮಹಾಬಲೇಶ್ವರ ಭಟ್ಟರು ಬೆಳೆಯುತ್ತಿದ್ದಾರೆ. ಕೆಜಿಗೆ 50 ರೂಪಾಯಿಯಂತೆ ಇದು ಮಾರಾಟವಾಗುತ್ತಿದೆ. ಇನ್ನೂ ಸಾಮಾನ್ಯ ಕಲ್ಲಂಗಡಿಗೆ ಹೋಲಿಸಿದರೆ ಜಾಸ್ತಿ ನೀರಿನ ಪ್ರಮಾಣ ಈ ಹಳದಿ ಬಣ್ಣದ ತಿರುಳ ಕಲ್ಲಂಗಡಿಯಲ್ಲಿ ಕಂಡುಬರುತ್ತದೆ. ಜೊತೆಗೆ ಹಸಿರು ಕಲ್ಲಂಗಡಿಗಿಂತ ಅಧಿಕ ಸಿಹಿಯನ್ನು ಹೊಂದಿರುತ್ತೆ.
ಸೂಪರ್ ಕಾಂಬಿನೇಶನ್
ಮಹಾಬಲೇಶ್ವರ ಭಟ್ಟರು ಜೀವಾಮೃತ ಸೇರಿದಂತೆ ಹಲವು ಸಾವಯವ ವಿಧಾನದ ಮೂಲಕ ಕಲ್ಲಂಗಡಿ ಬೆಳೆಯುತ್ತಾ ಬಂದಿದ್ದಾರೆ. ಉತ್ತರ ಕನ್ನಡವೆಂದರೆ ಎತ್ತರದ ಕಂಗು ತೆಂಗುಗಳ ಬೀಡು ಎನ್ನುವ ಮಾತಿಗೆ ಸವಾಲೆಂಬಂತೆ ಹಳದಿ ಕಲ್ಲಂಗಡಿ ಪರ್ವವೇ ಕಂಡುಬರುತ್ತೆ.
ಇದನ್ನೂ ಓದಿ: Uttara Kannada: ನಾಡಿನಲ್ಲಿ ಕಾಡು ಹಣ್ಣುಗಳ ಕಲರವ! ಇದು ಹಾಲಕ್ಕಿ ಮಹಿಳೆಯರ ಸ್ವಾಭಿಮಾನದ ಬದುಕು
ಹಸಿರು ಕಲ್ಲಂಗಡಿ ಜೊತೆಗೆ, ಹಳದಿ ಕಲ್ಲಂಗಡಿಯ ಕಾಂಬಿನೇಶನ್ ಇಲ್ಲಿ ಚೆನ್ನಾಗಿದೆ. ಅಂದಹಾಗೆ ನಿಮಗೂ ಹಳದಿ ಕಲ್ಲಂಗಡಿ ತಿನ್ನಬೇಕೆನಿಸಿದರೆ 94491 68119 ಈ ಸಂಖ್ಯೆಗೆ ಕರೆಮಾಡಿ!
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ