ಶಿರಸಿ: ಪಾಚಿ ಬಣ್ಣದ ನೀರು. ನೀರೊಳಗೆ ಕೃಷ್ಣ ಸುಂದರಿಯಂತೆ ಕಂಗೊಳಿಸೋ ನೂರಾರು ಮೀನುಗಳು. ಇದು ಕಣ್ಣಿಗೆ ಖುಷಿ ಕೊಡೋದು ಮಾತ್ರವಲ್ಲ, ನಾನ್ ವೆಜ್ ಪ್ರಿಯರ ಬಾಯಿ ರುಚಿ ಹೆಚ್ಚಿಸಬಲ್ಲ ಜಲಚರಗಳು (Aquatic) . ಹಾಗಿದ್ರೆ ಇದು ಯಾವ ನದಿ, ಕೆರೆ, ಹಳ್ಳ ಅಂತ ನೋಡ್ತಿದ್ದೀರ? (Success Story Of Fish Farming) ಅಲ್ವೇ ಅಲ್ಲ, ಇದು ಅರೆ-ಸಾಂಪ್ರದಾಯಿಕ ಮೀನು ಕೃಷಿ.
ಇವರ ಹೆಸ್ರು ಪ್ರಸಾದ್ ಶರ್ಮಾ. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ. ವಿದೇಶದಲ್ಲಿ ಕಂಪೆನಿ ಹೊಂದಿದ್ದರೂ, ತನ್ನ ತವರೂರು ಶಿರಸಿಯ ಸಾಲ್ಕಣಿಯಲ್ಲಿ ಏನಾದ್ರೂ ಮಾಡ್ಬೇಕು ಎನ್ನುವ ತುಡಿತ ಅವರನ್ನ ಮೀನು ಕೃಷಿಗೆ ಪ್ರೇರೇಪಿಸಿತು.
ಕೈಹಿಡಿದ ಗೌರಿ ಮೀನು
ಅದರ ಜೊತೆ ಮೀನು ಸಾಕಾಣಿಕೆಯ ಹೊಸ ಹವ್ಯಾಸವನ್ನು ರೂಢಿಸಿಕೊಂಡರು. ನಾಲ್ಕು ವರ್ಷದ ಹಿಂದೆ ಶುರುವಾದ ಈ ಗೌರಿಮೀನಿನ ಸಾಕಾಣಿಕೆ ಈಗ ಮನಸ್ಸಿಗೆ ಮಾತ್ರವಲ್ಲ ಆದಾಯಕ್ಕೂ ಖುಷಿ ನೀಡುತ್ತಿದೆ ಎನ್ನುತ್ತಾರೆ ಪ್ರಸಾದ್ ಅವರು.
ಕಾನ್ಕೇವ್ ಮಾದರಿ ಮೀನುಗಾರಿಕೆ
ಕಾನ್ಕೇವ್ ಮಾದರಿ ಅಂದರೆ ಮೊದಲು 5.5 ಅಡಿ, ನಂತರ ಮಧ್ಯದಲ್ಲಿ 7.5 ಅಡಿ ಆಳ ಇರುವ ಈ ಕೃತಕ ಹೊಂಡದಲ್ಲಿ ಅವರು ಈಗ ಸದ್ಯ 1,000 ಮೀನು ಸಾಕುತ್ತಿದ್ದಾರೆ. ದ್ವೈವಾರ್ಷಿಕ ಫಲ ನೀಡುವ ಈ ಕೃಷಿಯಿಂದ ಎರಡರಿಂದ ಎರಡೂವರೆ ಕ್ವಿಂಟಾಲ್ ಮೀನು ಎರಡು ಬಾರಿ ಸಿಗುತ್ತದೆ.
ಇದನ್ನೂ ಓದಿ: Tunnel Road: ಕಾರವಾರದಲ್ಲಿ ಕರಾವಳಿಯ ಮೊದಲ ಹೆದ್ದಾರಿ ಸುರಂಗ ಮಾರ್ಗ!
ಕೆಜಿ ಮೀನಿಗೆ 250 ರೂ.ವರೆಗೂ ಸಿಗುತ್ತೆ
ನಂತರ ಅದನ್ನು ಸ್ಥಳೀಯರು ಕೊಂಡೊಯ್ಯುತ್ತಾರೆ. ಈ ಮೀನಿಗೆ ಕೆಜಿಗೆ 200 ರಿಂದ 250 ರೂಪಾಯಿವರೆಗೆ ಇದ್ದು ಈ ಮೀನುಗಳ ರುಚಿ ಗೊತ್ತಿದ್ದವರು ಖುಷಿಪಟ್ಟು ಕೊಂಡೊಯ್ಯುತ್ತಾರೆ.
ಇದನ್ನೂ ಓದಿ: Uttara Kannada: ಕೌದಿ ಹೊಲಿಯಾಕ ಬಂದಾಳ ನೋಡ್ರಿ ಅಮೇರಿಕಾ ಹುಡುಗಿ!
80 ಸಾವಿರ ಮಾತ್ರ ಹೂಡಿಕೆ
ಪ್ರಸಾದ್ ಶರ್ಮ ಅವರು ವಾರ್ಷಿಕ 80,000 ರೂಪಾಯಿ ಬಂಡವಾಳ ಹೂಡುತ್ತಾರೆ. ಅದರ ಹೊರತು ಹೆಚ್ಚಿನ ಪರಿಶ್ರಮವೂ ಇಲ್ಲ. ಸಾಂದ್ರೀಕೃತ ಆಮ್ಲಜನಕ ಹಾಗೂ ನೀರು ಅಷ್ಟೇ ಇದರ ಬೆಳವಣಿಗೆಗೆ ಮುಖ್ಯವಾಗುತ್ತದೆ. ಮೀನು ಸಾಕಣೆ ಒಂದು ಕಲೆಯಾಗಿದ್ದು ಇದನ್ನ ಅರಿತು ಮೀನು ಕೃಷಿಯಲ್ಲಿ ತೊಡಗಿದರೆ ಸಕ್ಸಸ್ ಖಂಡಿತಾ ಅನ್ನೋದಕ್ಕೆ ಪ್ರಸಾದ್ ಶರ್ಮಾ ಅವರು ಒಂದೊಳ್ಳೆ ಉದಾಹರಣೆಯಾಗಿದ್ದಾರೆ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ