ಉತ್ತರ ಕನ್ನಡ: ಅದ್ಯಾವುದೋ ಕೂಲ್ಡ್ ಡ್ರಿಂಕ್ಸ್ ಬಾಟಲ್, ಬಾತ್ ರೂಂ ಕ್ಲೀನ್ ಮಾಡೋ ಲಿಕ್ವಿಡ್ ಎಲ್ಲ ಒಟ್ಟಿಗೆ ಕಿಚನ್ನಲ್ಲಿ ಇಟ್ಟುಬಿಟ್ಟಿದ್ದಾರೆ ಅಂದ್ಕೊಂಡ್ರಾ? ಇಲ್ಲ, ಇದೆಲ್ಲವೂ ಕೆಮಿಕಲ್ ಡಿಟರ್ಜೆಂಟ್ಗೆ ವಿರುದ್ಧವಾಗಿ ಮಹಿಳೆಯೇ (Woman Success Story) ತಯಾರಿಸಿದ ಸೂಪರ್ ಪವರ್ ಲಿಕ್ವಿಡ್ಗಳು. ಮಗನಿಗೆ ಶುರುವಾದ ಅಲರ್ಜಿಯಿಂದ ಈ ಲೇಡಿ ತಾನೇ ಸಂಶೋಧಕಿಯಾಗಿದ್ದು ಇಂಟ್ರೆಸ್ಟಿಂಗ್ ಸ್ಟೋರಿ. ಹೀಗೆ ಶುರುವಾದ ಇವ್ರ ಸಣ್ಣ ಪ್ರಯತ್ನ ಈಗಂತೂ ಕಾರ್ಪೊರೇಟ್ ಕಂಪೆನಿಗಳಿಗೂ (Corporate Company) ಸವಾಲೊಡ್ಡುವ ಹಂತಕ್ಕೆ ತಲುಪಿದೆ.
ಬಯೋ ಡಿಟರ್ಜೆಂಟ್!
ಯೆಸ್, ಇದೆಲ್ಲವೂ ಉತ್ತರ ಕನ್ನಡದ ಶಿರಸಿಯ ಸಾದಾ ಸೀದಾ ಗೃಹಿಣಿ ಧನ್ಯಾ ಅವರ ಧರಣಿ ಪ್ರಾಡಕ್ಟ್ಸ್ನ ಪ್ರಾಡಕ್ಟ್ಗಳು. ಅದ್ಯಾವ ಕೆಮಿಕಲ್ ಅನ್ನೂ ಬಳಸದೇ ತಯಾರಿಸೋ ಈ ಜೀವಾಮೃತವನ್ನ ನೆಲ ಒರೆಸಲು, ಬಟ್ಟೆ ಒಗೆಯಲು ಅಷ್ಟೇ ಯಾಕೆ ಅಡುಗೆ ಪಾತ್ರೆ ತೊಳೆಯಲು ಆರಾಮದಾಯಕವಾಗಿ ಬಳಸಬಹುದು.
ಧರಣಿ ಪ್ರಾಡಕ್ಟ್ ಹಿಂದಿನ ಕಥೆ
ಇಷ್ಟಕ್ಕೂ ಧನ್ಯಾ ಅವರ ಈ ಪ್ರಯೋಗದ ಹಿಂದೆ ಒಂದು ಕಥೆಯೇ ಇದೆ. ಅದೇನಪ್ಪ ಅಂದ್ರೆ ಧನ್ಯಾ ಅವರ ಮಗನಿಗೆ ಅಲರ್ಜಿ ಸಮಸ್ಯೆ ತೀರಾ ಉಲ್ಬಣಿಸಿತ್ತು. ವೈದ್ಯರಲ್ಲಿ ಕರೆದೊಯ್ದಾಗ ಮನೆಯಲ್ಲಿ ಬಳಸುವ ಡಿಟರ್ಜೆಂಟುಗಳ ಕೆಮಿಕಲ್ ಕಾರಣ ಅನ್ನೋದು ಗೊತ್ತಾಯಿತು. ಹೀಗೆ ಅದಕ್ಕೆ ಪರ್ಯಾಯವಾಗಿ ಕಂಡುಕೊಳ್ಳಬೇಕೆಂದು ಧನ್ಯಾ ಅವರು ನಿರ್ಧರಿಸಿದರು. ಅದಕ್ಕೆ ತಕ್ಕಂತೆ ಅವರ ಪತಿಯೂ ಸಾಥ್ ನೀಡಿದ್ರು. ಅಲ್ಲಿಂದಲೇ ಶುರುವಾಯ್ತು ನೋಡಿ ಈ ಧರಣಿ ಪ್ರಾಡಕ್ಟ್ಸ್ ಮೊದಲ ಹೆಜ್ಜೆ ಎನ್ನಬಹುದು.
ಯಾವುದರ ಮಿಶ್ರಣ
ಹೀಗೆ ಶುರುವಾದ ಐಡಿಯಾ ಲಿಂಬು, ಸೀಗೆ, ಅಂಟುವಾಳದ ಮೂಲಕ ಲಿಕ್ವಿಡ್ ತಯಾರಿಕೆಗೆ ಪ್ರೇರಣೆಯಾಯಿತು. ಆ ಲಿಕ್ವಿಡ್ ಬಳಸುತ್ತಾ ಹೋದಂತೆ ಅವರ ಮಗುವಿನ ಕಾಯಿಲೆಯೂ ದೂರವಾಯಿತು. ಆದರೆ ಇದಿಷ್ಟೇ ಅವರು ಇಷ್ಟಕ್ಕೆ ನಿಲ್ಲದ ಇವರ ಪ್ರಯತ್ನ, ಮುಂದೆ ಧರಣಿ ಅನ್ನೋ ತಮ್ಮದೇ ಸ್ವಂತ ಬ್ರ್ಯಾಂಡಿನ ಸಂಸ್ಥೆ ಹುಟ್ಟುಹಾಕಿತು. ಹೀಗೆ ಇವರು ಹೊರ ತರುವ ಬಯೋಡಿಟರ್ಜೆಂಟ್ಗೆ ಈ ಸಖತ್ ಬೇಡಿಕೆಯೂ ಇದೆ.
ಇದನ್ನೂ ಓದಿ: Uttara Kannada News: ಈ 88ರ ಹರೆಯದ ಅಜ್ಜಿಯ ಜೀವನ ಪ್ರೀತಿಗೆ ಬಿಗ್ ಸೆಲ್ಯೂಟ್!
ಗಮನ ಸೆಳೆದ ಉತ್ಪನ್ನಗಳು
ಈ ಸಲ ಜಿ 20 ಸಮ್ಮಿಟ್ ಆಫ್ ಎನ್ವರ್ಮೆಂಟಲ್ ಸಸ್ಟೇನಿಬಿಲಿಟಿ ಎಂಡ್ ಬಯೋಎನ್ಜೈಮ್ ಎಂಬ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಇವರು ಪ್ರಥಮ ಸ್ಥಾನ ಪಡೆದಿದ್ದಾರೆ. ಎಂಟು ದೇಶಗಳ 350 ಕ್ಕೂ ಹೆಚ್ಚು ರಿಸರ್ಚ್ ಪೇಪರ್ಗಳನ್ನು ಹಿಂದೆ ಹಾಕಿ ಈ ಧರಣಿ ಸಂಸ್ಥೆ ಪ್ರಥಮ ಸ್ಥಾನ ಗಳಿಸಿದೆ. ಜೊತೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮ ದಲ್ಲಿ "ಉತ್ತಮ ನವೀನ ಆವಿಷ್ಕಾರ" ಎಂಬ ಬಿರುದನ್ನು ಇವರ ಸಂಸ್ಥೆಯ ಪ್ರಾಡಕ್ಟ್ ಗಳಿಗೆ ದೊರಕಿದೆ.
ಮಾರ್ಜಕಗಳಾಗಿಯೂ ಬಳಕೆ
ಧರಣಿ ಪ್ರಾಡಕ್ಟ್ಗಳಲ್ಲಿ ಒಂದೇ ದ್ರಾವಕವಿದ್ದರೂ ಅದನ್ನು ಬೇರೇ ಬೇರೆ ಅನುಪಾತದಲ್ಲಿ ವಿಂಗಡಿಸಿ ನಾಲ್ಕು ಬಗೆಯ ಮಾರ್ಜಕಗಳನ್ನು ತಯಾರಿಸಿದ್ದಾರೆ. ಹಾಗೆ ತಯಾರಿಸಿದವುಗಳು ಎಲ್ಲಾ ರೀತಿಯ ಮನೆ ಕೆಲಸಕ್ಕೂ ಬಳಕೆಯಾಗುತ್ತಿವೆ.
ಇದನ್ನೂ ಓದಿ: Yakshagana In America: ಅಮೆರಿಕಾ ನೆಲದಲ್ಲಿ ಯಕ್ಷ ಕಲೆ ಉಣಬಡಿಸಿದ ಶಿರಸಿ ಮಹಿಳೆ!
ಒಟ್ಟಿನಲ್ಲಿ ಮಗನ ಅಲರ್ಜಿ ಸಮಸ್ಯೆಗೆ ಕಂಡುಕೊಳ್ಳಲು ಮುಂದಾದ ಪರಿಹಾರ ಈಗ ಮನೆಯನ್ನೇ ಬದಲಿಸಿದೆ ಅಂದ್ರೆ ಅತಿಶಯೋಕ್ತಿ ಎನಿಸದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ