Success Story: ಹಳ್ಳಿಯಿಂದಲೇ ಲಕ್ಷ ಲಕ್ಷ ಸಂಪಾದಿಸೋ ಮಹಿಳೆ, ಇವ್ರನ್ನ ನೋಡಿ ಕಲಿಯಬೇಕು ಕಣ್ರೀ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಹೈನುಗಾರಿಕೆಯಲ್ಲಿ ಯಶಸ್ವಿ ಉದ್ಯಮ ನಡೆಸುವುದರ ಜೊತೆಗೆ, ತಮ್ಮದೇ ಆದ ಬ್ರ್ಯಾಂಡ್‌ ಸ್ಥಾಪಿಸಿಕೊಂಡು ಮಹಿಳೆಯೋರ್ವರು ಮನೆ ಮಾತಾಗಿದ್ದಾರೆ.

  • News18 Kannada
  • 5-MIN READ
  • Last Updated :
  • Uttara Kannada, India
  • Share this:

ಉತ್ತರ ಕನ್ನಡ: ಹಸು ಸಾಕೋದಂದ್ರೆ ಮೂಗು ಮುರಿಯೋರೇ ಜಾಸ್ತಿ. ಆದ್ರೆ ಹೈನುಗಾರಿಕೆ (Dairy Farming) ಮೂಲಕ ಇಲ್ಲೊಬ್ಬರು ಮಹಿಳೆ ತಿಂಗಳಿಗೆ ಲಕ್ಷ ರೂಪಾಯಿ ಆದಾಯ ಗಳಿಸ್ತಿದ್ದಾರೆ. ತನ್ನದೇ ಸ್ವಂತ ಬ್ರ್ಯಾಂಡಿನ (Success Story) ಹಾಲು, ಗೊಬ್ಬರದ ಜೊತೆಗೆ ಭಾರೀ ಮಾರ್ಕೆಟ್ ಅನ್ನೇ ಹೊಂದಿದ್ದಾರೆ. ಇವ್ರ ಈ ಸಾಧನೆ ನೋಡ್ತಿದ್ರೆ ಭೇಷ್ ಅನ್ನದೇ ಇರಲು ಸಾಧ್ಯವೇ ಇಲ್ಲ ನೋಡಿ.


ಹೌದು, ಉತ್ತರ ಕನ್ನಡದ ಶಿರಸಿಯ ಅರಸಾಪುರದ ರಾಜೇಶ್ವರಿ ಹೆಗಡೆ ಅವರೇ ಈ ರೀತಿಯಾಗಿ ಹೈನುಗಾರಿಕೆ ಮೂಲಕ ವಿಶಿಷ್ಟ ಸಾಧನೆ ಮಾಡಿದವರು. ಕೃಷಿ ಕುಟುಂಬದಲ್ಲಿ ಬೆಳೆದ ಇವರ ಮನೆಯಲ್ಲಿ ಸಾಧಾರಣವಾಗಿ ಹಸುಗಳಿದ್ದವು. ಇವರಿಗೆ ಮದುವೆ ಆದ ಮೇಲೆ ಇವರು ತಮ್ಮ ಗಂಡನ ಮನೆಯಲ್ಲಿ ಹಸು ಸಾಕಲು ಪ್ರಾರಂಭಿಸಿದರು. ಈಗ ಮೂವತ್ತು ಹಸುಗಳಿದ್ದು, ಅದರಲ್ಲಿ ನಾಟಿ, ಜೆರ್ಸಿ, ಗಿರ್ ಹೀಗೆ ಹಲವು ತಳಿಯ ಆಕಳುಗಳಿವೆ.




ಹಾಲಿನಿಂದ ಲಕ್ಷ ರೂ. ಆದಾಯ
ಇಲ್ಲಿರುವ ಆಕಳುಗಳು ಪ್ರತಿನಿತ್ಯ 100 ಲೀಟರ್ ಹಾಲನ್ನು ನೀಡುತ್ತವೆ. ಅಷ್ಟೇ ಅಲ್ಲ, ಕೃಷಿ ತೋಟದ ವೇಸ್ಟ್ ಹಸುವಿನ ಹೊಟ್ಟೆಗೆ, ಕೊಟ್ಟಿಗೆ ಸಗಣಿ ಗೊಬ್ಬರದ ತೊಟ್ಟಿಗೆ ಅನ್ನೋ ಇವರ ಪರಿಕಲ್ಪನೆಯೂ ಇವ್ರ ಆದಾಯ ಹೆಚ್ಚಿಸಿದೆ. ಲೀಟರ್ ಗೆ 42 ರೂಪಾಯಿಯಂತೆ ಹಾಲನ್ನು ಮಾರಾಟ ಮಾಡುವ ಹೆಗಡೆ ಅವರು, ಅದ್ರಿಂದಲೇ ತಿಂಗಳಿಗೆ ಏನಿಲ್ಲ ಅಂದ್ರೂ ಒಂದು ಲಕ್ಷ ರೂಪಾಯಿಯಷ್ಟು ಸಂಪಾದನೆ ನಡೆಸುತ್ತಾರೆ.




ಸ್ವಂತ ಬ್ರ್ಯಾಂಡ್!
ಇನ್ನು ಇಲ್ಲಿ ತಯಾರಾಗೋ ಗೊಬ್ಬರ 600 ರೂಪಾಯಿಗೆ ಅರ್ಧ ಕ್ವಿಂಟಾಲ್ ಲೆಕ್ಕದಲ್ಲಿ ಮಾರಾಟವಾಗುತ್ತದೆ. ಜೊತೆಗೆ ಸ್ವಂತ ಬ್ರ್ಯಾಂಡಿನ "ಹುಳಗೋಳ ಆಕಳ ಹಾಲು" ಹಾಗೂ "ಶಕ್ತಿ ಸಾವಯವ" ಗೊಬ್ಬರದ ಬ್ರ್ಯಾಂಡ್ ಇವೆರೆಡೂ 2017 ರಲ್ಲಿ ಇದೇ ದನದ ಹಟ್ಟಿಯಲ್ಲಿ ಹುಟ್ಟಿ ಇದೀಗ ಭಾರೀ ಮನೆ ಮಾತಾಗಿದೆ. ಕಳೆದ ವರ್ಷ 50 ಟನ್ ನಷ್ಟು ಗೊಬ್ಬರವನ್ನು ರಾಜೇಶ್ವರಿ ಹೆಗಡೆ ಅವರು ಮಾರಾಟ ಮಾಡಿದ್ದಾರೆ.‌ ಇನ್ನು ಇಲ್ಲೇ ತಯಾರಾಗೋ ಗೊಬ್ಬರದಿಂದಲೂ ತಿಂಗಳಿಗೆ ಸಾವಿರಾರು ರೂಪಾಯಿಯ ಆದಾಯ ಗಳಿಸುತ್ತಾ ಬಂದಿದ್ದಾರೆ.


ಇದನ್ನೂ ಓದಿ: Shankar Nag: ಇದೇ ನೋಡಿ ಶಂಕರ್​ ನಾಗ್​ ಹುಟ್ಟಿ ಬೆಳೆದ ಮನೆ, ಇಲ್ಲೇ ಇದ್ದಾರಂತೆ ಕರಾಟೆ ಕಿಂಗ್​!


ಪ್ರಶಸ್ತಿಗಳ ಗರಿ
ಸದ್ಯ ಶಿರಸಿಯಾದ್ಯಂತ ಹುಳಗೋಳ ಬ್ರ್ಯಾಂಡ್ ಗೆ ಭಾರೀ ಡಿಮ್ಯಾಂಡ್ ಇದೆ. ಹೀಗಾಗಿಯೇ ಅರ್ಹವಾಗಿ ರಾಜೇಶ್ವರಿ ಹೆಗಡೆ ಅವ್ರಿಗೆ ಜೊತೆಗೆ 10 ಕ್ಕಿಂತ ಹೆಚ್ಚು ಪ್ರಶಸ್ತಿಗಳು ಸಂದಿವೆ. ಕೃಷಿ ವಿಶ್ವವಿದ್ಯಾಲಯದ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಎರಡು ಬಾರಿ ಪಡೆದುಕೊಂಡಿರುವುದು ಇವರ ಹೆಗ್ಗಳಿಕೆ.




ಇದನ್ನೂ ಓದಿ: Viral Video: ಬಸ್​​ನಲ್ಲಿ ಕುಳಿತು ಎಲೆ ಅಡಿಕೆ ಉಗಿದ ಪ್ರಯಾಣಿಕ, ಸರಿಯಾಗಿ ಬುದ್ಧಿ ಕಲಿಸಿದ ಸಾರ್ವಜನಿಕರು!

top videos


    ಒಟ್ಟಿನಲ್ಲಿ ಹೈನುಗಾರಿಕೆ ಮೂಲಕ ಉತ್ತಮ ಜೀವನ ನಡೆಸಬಹುದು ಅನ್ನೋದನ್ನ ರಾಜೇಶ್ವರಿ ಹೆಗಡೆ ಅವರು ತೋರಿಸಿಕೊಟ್ಟಿದ್ದಾರೆ.

    First published: