ಸೊಂಪಾಗಿ ಬೆಳೆದ ತರಕಾರಿ ಸೊಪ್ಪು. ಕ್ಯಾನ್ ಮೂಲಕ ನೀರುಣಿಸುತ್ತಿರೋ ಮಕ್ಕಳು. ಹೀಗೆ ಕೈತೋಟದಲ್ಲಿ ಪ್ರತಿಯೊಂದಕ್ಕೂ ಮಕ್ಕಳೇ (Government School Students) ನೀರುರುಣಿಸ್ತಾರೆ. ಮಕ್ಕಳೇ ಪೋಷಣೆ ಮಾಡುತ್ತಾರೆ. ಅಷ್ಟೇ ಅಲ್ಲ, ಇಲ್ಲಿ ಬೆಳೆದ ಪ್ರತಿಗಿಡವೂ ಮಕ್ಕಳದ್ದೇ (Student's Dream) ಕನಸು. ಹೌದು, ಉತ್ತರ ಕನ್ನಡ ಜಿಲ್ಲೆಯ (Uttara Kannada) ಅಜ್ಜರಣಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಹಿತ್ತಲಲ್ಲಿ ಹೀಗೆ ಹತ್ತಾರು ತರಕಾರಿ ಗಿಡಗಳಿವೆ.
ಅಷ್ಟೇ ಅಲ್ದೇ, ಈ ಶಾಲೆಯ ಮಕ್ಕಳಿಗೆ ಗಿಡಗಳ ಪೋಷಣೆಯ ಜವಾಬ್ದಾರಿಯೂ ಇದ್ದು, ಖುದ್ದು ಮಕ್ಕಳೇ ತಮಗೆ ನಿಗದಿಪಡಿಸಿದ ಗಿಡ, ಸೊಪ್ಪುಗಳಿಗೆ ನೀರುಣಿಸಿ ಪೋಷಿಸುತ್ತಾರೆ. ಹೀಗೆ ಬೆಳೆದ ತರಕಾರಿ, ಸೊಪ್ಪುಗಳನ್ನು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಲಾಗುತ್ತದೆ. ಮಕ್ಕಳಂತೂ ಶಾಲೆಯ ಹಿತ್ತಲಲ್ಲಿರುವ ಕೈತೋಟವನ್ನು ತಮ್ಮ ಮನೆಯ ಕೈತೋಟದಂತೆ ಪ್ರೀತಿಸಿ, ಪೋಷಿಸುತ್ತಾ ಬಂದಿದ್ದಾರೆ.
ಇದನ್ನೂ ಓದಿ: Fearless Belt: ಮಹಿಳೆಯರ ಸುರಕ್ಷತೆಗೆ ಫಿಯರ್ಲೆಸ್ಟ್ ಬೆಲ್ಟ್! ಕಿರುಕುಳ ಕೊಟ್ಟವರಿಗೆ ಶಾಕ್
ಹತ್ತಾರು ಸೊಪ್ಪು ತರಕಾರಿಗಳು ಇಲ್ಲಿವೆ
ಹರಿವೆ, ಮೂಲಂಗಿ, ಅವರೆ, ಟೊಮ್ಯಾಟೋ, ಬದನೆ, ಬಾಳೆ, ತೆಂಗು, ಕೊತ್ತಂಬರಿ, ಪಾಲಕ್ ಹೀಗೆ ಹತ್ತು ಹಲವು ತರಕಾರಿ, ಸೊಪ್ಪುಗಳು ಇಲ್ಲಿವೆ. ಬಹುತೇಕ ಬಡಮಕ್ಕಳನ್ನು ಹೊಂದಿರುವ ಈ ಶಾಲೆಯ ಮಕ್ಕಳು ಕಳೆದ 10 ವರ್ಷಗಳಿಂದ ಹೀಗೆ ತರಕಾರಿಗಳನ್ನು ಬೆಳೆಯುತ್ತಾ ಬಂದಿದ್ದಾರೆ.
70 ವಿದ್ಯಾರ್ಥಿಗಳ ಪರಿಶ್ರಮ
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯಲ್ಲಿ 6 ಮಂದಿ ಶಿಕ್ಷಕರಿದ್ದರೆ, 70 ಮಂದಿ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಕರ ಸಹಾಯ ಸಹಕಾರ, ತೋಟಗಾರಿಕಾ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಿಂದ ಹಂಚಿಕೆ ಮಾಡಲಾಗುವ ಬೀಜ, ಪ್ರೋತ್ಸಾಹ ಧನದಿಂದ ಈ ಸುಂದರ ಕೈ ತೋಟ ಅನ್ನದಾಸೋಹಕ್ಕೆ ಸಹಕಾರಿಯಾಗಿದೆ.
ಇದನ್ನೂ ಓದಿ: Special Jaggery: ಆಲೆಮನೆಯೆಂಬ ಮಲೆನಾಡಿನ ಸವಿಮನೆ! ನೀವೂ ರುಚಿ ಸವಿದುನೋಡಿ
ಒಟ್ಟಿನಲ್ಲಿ ಶಿಕ್ಷಕರ ಪ್ರೋತ್ಸಾಹ, ಮಕ್ಕಳ ಆಸಕ್ತಿ ಶಾಲೆಯ ಹಿತ್ತಲಲ್ಲಿ ಚೆಂದದ ಕೈ ತೋಟ ನಿರ್ಮಿಸಲು ಕಾರಣವಾಗಿದೆ.
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ