ಉತ್ತರ ಕನ್ನಡ: ನೋಡೋದಕ್ಕೆ ಸ್ಕೂಟರ್ ಥರಾ ಇದ್ರು, ಮಾಡುತ್ತೆ ಆಟೋ ಕೆಲ್ಸ. ರೈತರ ಕೆಲಸಕ್ಕಂತೂ ಇದು ಬಹುಪಯೋಗಿ ಗಾಡಿ. ಹೀಗೆ ಭಾರದ ವಸ್ತುಗಳನ್ನು ಹೊತ್ತುಕೊಂಡು ಸುಸ್ತಾಗ್ತಿದ್ದ ರೈತನೇ ಈ ಕಾರ್ಟ್ ವೆಹಿಕಲ್ನ ರೂವಾರಿ. ತನ್ನ ಹಳೆಯ ಟಿವಿಎಸ್ ಸ್ಕೂಟರೇ ಈ ಹೊಸ ನಮೂನೆಯ ಗಾಡಿಯ ಮೂಲ.
ಹೌದು, ಇವರು ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ಉಂಚಳ್ಳಿಯ ವಿದ್ಯಾಧರ ಭಟ್. ರೈತನಾಗಿರುವ ಇವರು ಭಾರದ ವಸ್ತುಗಳನ್ನ ಕೊಂಡೊಯ್ಯಲು, ಹೊತ್ತು ತರಲು ಕಂಡುಕೊಂಡ ಸೂಪರ್ ಐಡಿಯಾವೇ ಈ ಹೊಸ ಬಗೆಯ ಕಾರ್ಟ್ ವೆಹಿಕಲ್ನ ನಿಜರೂಪ.
ತುಕ್ಕು ಹಿಡಿದಿದ್ದ TVS ಹೆವಿ ಡ್ಯೂಟಿ ಉಪಯೋಗಕ್ಕೆ ಬಂತು!
ಮನೆಯಲ್ಲಿದ್ದ ಹಳೆಯ ಟಿವಿಎಸ್ ಹೆವಿ ಡ್ಯೂಟಿ ರಿಪೇರಿಗೆ ಬಂದು ತುಕ್ಕು ಹಿಡಿಯುತ್ತಿತ್ತು. ಹೀಗಾಗಿ ಅದನ್ನೇ ಯೂಸ್ ಮಾಡಿಕೊಳ್ಳೋಣ ಅಂತಾ ಮುಂದಾದ ವಿದ್ಯಾಧರ ಭಟ್ರು, ಪ್ರಶಾಂತ್ ಎಂಬ ಸ್ಥಳೀಯ ಇಂಜಿನಿಯರ್ ಸೇರಿ ಸ್ಕೆಚ್ ರೆಡಿ ಮಾಡಿಕೊಂಡ್ರು. ನಂತರ ಹಳೆಯ ಸ್ಕೂಟಿಯ ಟೈರ್ ಹಾಗೂ ಆಟೋ ಟೈರ್ ಹೊಂದಿರುವ ತ್ರಿಚಕ್ರ ವಾಹನವೊಂದನ್ನು ಮಾಡಿಯೇ ಬಿಟ್ಟರು.
ಇದನ್ನೂ ಓದಿ: Business Idea: ಬೇಸಿಗೆ ರಜೆ ಬ್ಯುಸಿನೆಸ್! ಮಾವಿನ ಹಣ್ಣು ಮಾರಿ ದಿನಕ್ಕೆ 5 ಸಾವಿರ ದುಡಿಯುವ ಮಕ್ಕಳು
ಮೈಲೇಜ್ ಎಷ್ಟು?
ಸಿಟಿ 100 ನ ಎಂಜಿನ್ ಹಾಗೂ ಅದೇ ರೀತಿ ಆಟೋದ ಡಿಸ್ಟೆನ್ಸರಿ ಮತ್ತು ಓಮ್ನಿಯ ಬ್ರೇಕ್ ಸೇರಿದಂತೆ ಹಲವು ಗಾಡಿಗಳ ಸ್ಪೇರ್ ಪಾರ್ಟಿನ ಒಳಗೊಳ್ಳುವಿಕೆ ಫೈನಲ್ ರೂಪವೇ ಈ ಕಾರ್ಟ್ ವೆಹಿಕಲ್. ಹಿಂದಿನಿಂದ ಅಳವಡಿಸಲಾದ ಕಂಟೇನರ್ 300 ಕೆಜಿ ತೂಕದ ವಸ್ತುವನ್ನು ಲಿಫ್ಟ್ ಮಾಡಬಲ್ಲದು. ಎಷ್ಟೇ ಅಡೆತಡೆಯಿದ್ದರೂ ಸರಾಗವಾಗಿ ಸಾಗಬಲ್ಲ, ಈ ವಾಹನ ಫ್ಯಾನ್ನೊಂದಿಗೆ ಇಂಟರ್ ಕೂಲರ್ ವ್ಯವಸ್ಥೆ ಹೊಂದಿದೆ.
ಮೈಲೇಜ್ ಸಹ ಚೆನ್ನಾಗೇ ಕೊಡುತ್ತೆ!
ಲಗೇಜ್ ಇದ್ರೆ 20 ಕಿಲೋ ಮೀಟರ್ , ಇಲ್ದೇ ಹೋದ್ರೆ 30 ರಿಂದ 35 ಕಿಲೋ ಮೀಟರ್ ಮೈಲೇಜ್ ಗಾಡಿ ಇದಾಗಿದೆ. ಒಟ್ಟಿನಲ್ಲಿ ಅದ್ಭುತ ರೈತ ಸ್ನೇಹಿ ವಾಹನ ಇದಾಗಿದೆ.
ಇದನ್ನೂ ಓದಿ: Leaf Helmet: ನೇರಳೆ ಮರದ ಎಲೆಯಿಂದ ಹೆಲ್ಮೆಟ್! ಇದರಿಂದ ತಲೆ ಆಗುತ್ತೆ ಕೂಲ್
ಹೆಚ್ಚು ಶ್ರಮವಹಿಸದೇ, ಕೂಲಿಯಾಳುಗಳನ್ನ ಅವಲಂಬಿಸದೇ ಈ ವಾಹನ ಚಲಾಯಿಸ್ತಾ ಅಚ್ಚುಕಟ್ಟಾಗಿ ಕೆಲಸ ಮುಗಿಸಬಹುದಾಗಿದೆ. ಒಟ್ಟಿನಲ್ಲಿ, ಮನಸೊಂದಿದ್ರೆ ಏನ್ ಬೇಕಾದ್ರೂ ಮಾಡಿ ತೋರಿಸಬಹುದು ಅನ್ನೋದಕ್ಕೆ ವಿದ್ಯಾಧರ್ ಭಟ್ ಒಂದೊಳ್ಳೆ ಉದಾಹರಣೆಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ