ಉತ್ತರ ಕನ್ನಡ: ತಕ್ಕಮಟ್ಟಿಗೆ ದೊಡ್ಡದಾದ ಕಾರ್ಖಾನೆ. ಒಳಗಡೆ ಅದೇನೋ ಮಷಿನ್ಗಳ ಚಟುವಟಿಕೆ. ಇನ್ನೊಂದೆಡೆ ತಯಾರಾಗ್ತಿವೆ ನೋಡಿ ಪೇಪರ್ ಫೈಲ್ಗಳು. ನಿಜ, ಹೀಗೆ ನಡೆಯೋ ಈ ಪ್ರಕ್ರಿಯೆ ಫೈನಲ್ ಪ್ರಾಡಕ್ಟೇ ಈ ಪೇಪರ್ ಫೈಲ್. ಅಷ್ಟಕ್ಕೂ ತೆರೆಮರೆಯ ಈ ಉದ್ಯಮ (Paper File Business) ನಡೆಯೋದು ಹೇಗೆ ಅಂತಾನ ನಿಮ್ ಕುತೂಹಲ? ಅದೆಲ್ಲವನ್ನೂ ಈ ಸ್ಟೋರೀಲಿ (Success Story) ನೋಡಿ.
ಪೇಪರ್ ಮಿಲ್ ಉದ್ಯಮ
ಯೆಸ್, ನಾವೆಲ್ಲಾ ಫೈಲ್ಗಳನ್ನು ಜೀವನದಲ್ಲಿ ಒಮ್ಮೆಯಾದರೂ ಬಳಸಿರುತ್ತೇವೆ. ರಟ್ಟಿನಂತೆ ಗಟ್ಟಿಯಿರುವ ಆ ಫೈಲ್ ಫೋಲ್ಡರ್ಗಳಿಗೂ, ಸರ್ಕಾರಿ ಕಚೇರಿಗಳಿಗೂ ಅವಿನಾಭಾವ ಸಂಬಂಧವಿದೆ.
ಅಷ್ಟೇ ಅಲ್ದೇ, ಇಂತಹ ಸಣ್ಣ ಸಣ್ಣ ಫೈಲ್ ತಯಾರಿಸೋ ಉದ್ಯಮವು ಒಂದೊಳ್ಳೆ ಬ್ಯುಸಿನೆಸ್ ಅನ್ನೋದು ಯಾರಿಗೂ ಗೊತ್ತಾಗ್ದೇ ಇರೋ ರೀತಿಯಲ್ಲಿ ದಿನವೊಂದಕ್ಕೆ ಒಂದೂವರೆ ಕ್ವಿಂಟಾಲ್ನಷ್ಟು ಫೈಲ್ಗಳನ್ನ ತಯಾರಿಸುತ್ತಾ ಉತ್ತರ ಕನ್ನಡದ ಶಿರಸಿಯ ಈ ಪೇಪರ್ ಮಿಲ್ ಯಶಸ್ವಿ ಉದ್ಯಮವಾಗಿ ಬದಲಾಗಿದೆ. ಇಲ್ಲಿನ ಸಹ್ಯಾದ್ರಿ ಪೇಪರ್ ಮಿಲ್ನಲ್ಲಿ ಇಂತಹ ಬಣ್ಣ ಬಣ್ಣದ ಪೇಪರ್ ಫೋಲ್ಡಿಂಗ್ ಫೈಲ್ಗಳು ತಯಾರಾಗುತ್ತೆ.
ಹೀಗೆ ತಯಾರಾಗುತ್ತೆ ಪೇಪರ್ ಫೈಲ್
ಇದೊಂಥರಾ ಕಸದಿಂದ ರಸದ ಅಡ್ವಾನ್ಸ್ ವರ್ಷನ್. ಗಾರ್ಮೆಂಟಿನ ವೇಸ್ಟ್ ಬಟ್ಟೆಗಳನ್ನು ಹುಡಿ ಮಾಡಿಕೊಂಡು ಅದನ್ನು ಬಿಸಿ ಬಿಸಿ ದ್ರಾವಕದಲ್ಲಿ ಗಟ್ಟಿ ಮಾಡಲಾಗುತ್ತದೆ. ಅಲ್ಲಿ ಅದಕ್ಕೆ ಬೇಕಾದ ಕಲರ್ ಗ್ರೇಡಿಂಗ್ ಮಾಡಿ, ನಂತರದ ಪ್ರಕ್ರಿಯೆಯೇ ಫೈಲ್ ಗಳಿಗೆ ಬೇಕಾದ ಹಾಗೆ ಉದ್ದದ ಹಾಳೆಯ ಹಾಗೆ ಆ ವಸ್ತುವನ್ನು ಪೇಪರ್ ರೂಪಕ್ಕೆ ತರುವುದು. ನಂತರ ಬೇಸಿಗೆಯಲ್ಲಾದರೆ ಹೊರಗಡೆಯಿಟ್ಟು, ಮಳೆ, ಚಳಿಯಲ್ಲಾದರೆ ಮಶಿನ್ಗಳ ಮೂಲಕ ಆ ಹಾಳೆಯನ್ನು ಗಟ್ಟಿ ಮಾಡಲಾಗುತ್ತೆ.
ಇದನ್ನೂ ಓದಿ: Sonda Fort: ಸೋಂದ ಅರಸರ ಕೋಟೆಯಲಿ ಪರಾಕ್ರಮ ಮೆರೆದ ಫಿರಂಗಿಗಳು!
ಡಿಸೈನ್ ಮಾಡೋದು ಹೀಗೆ
ನಂತರ ಬಂದ ಹಾಳೆಗಳನ್ನು ಸ್ಟೀಲ್ ಪ್ಲೇಟುಗಳ ಮೂಲಕ ಮಶಿನ್ನಲ್ಲಿ ಇರಿಸಿ ಮತ್ತಷ್ಟು ಗಟ್ಟಿ ಮಾಡಲಾಗುತ್ತೆ. ನಂತರ ಕಟ್ಟಿಂಗ್, ಅದಾದ ಮೇಲೆ ಯಂತ್ರದ ಮೂಲಕ ಗೆರೆಗಳನ್ನು ಮಾರ್ಕ್ ಮಾಡಿ ಫೈಲ್ ಅನ್ನು ಫೋಲ್ಡ್ ಮಾಡಲಾಗುತ್ತೆ. ಇಂಕ್ ಹಾಗೂ ಫೋಟೋ ಇಂಪ್ರೆಶನ್ ಮೂಲಕ ಪ್ರಿಂಟ್ ಮಾಡಿ ಕೊನೆಗೆ ಕೈಯಿಂದ ಪಂಚ್ ಮಾಡಿದರೆ ನಾವು ಬಳಸೋ ಪೇಪರ್ ಫೈಲ್ ತಯಾರಾಗುತ್ತೆ.
ರಾಜ್ಯದ ಹಲವೆಡೆ ಫೇಮಸ್
ವಿನಾಯಕ್ ಜೋಶಿಯವರ ನೇತೃತ್ವದ ಈ ಕಂಪೆನಿಗೆ ಕರ್ನಾಟಕದ ಎಲ್ಲಾ ಆಫೀಸ್ಗಳೂ ಸಹ ಫೈಲುಗಳಿಗಾಗಿ ಅವಲಂಬಿತವಾಗಿವೆ. ಜೊತೆಗೆ 30 ಜನರಿಗೆ ನೌಕರಿಯನ್ನು ಈ ಕಂಪೆನಿಯು ನೀಡಿದೆ. ಪ್ರತಿವರ್ಷ 150 ಟನ್ ಪೇಪರ್ ಫೈಲ್ನ್ನು ಈ ಸಂಸ್ಥೆ ತಯಾರಿಸುತ್ತದೆ.
ಇದನ್ನೂ ಓದಿ: Chandragutti: ಚಾರಣಿಗರ ಸ್ವರ್ಗವಿದು ಚಂದ್ರಗುತ್ತಿಯ ಬಂಡೆ, ಬೆಟ್ಟಗಳ ಸಾಲು!
ಒಟ್ಟಿನಲ್ಲಿ ಮಲೆನಾಡಿನಲ್ಲಿ ತೆರೆಮರೆಯಲ್ಲಿ ಸದ್ದಿಲ್ಲದೇ ಕಾರ್ಯಾಚರಿಸುತ್ತಾ ನಾಡಿಗೆಲ್ಲ ಫೈಲ್ ಗಳನ್ನು ಪೂರೈಕೆ ಮಾಡುವ ಈ ಉದ್ದಿಮೆಯು ನಿಜಕ್ಕೂ ಆತ್ಮನಿರ್ಭರ ಭಾರತಕ್ಕೆ ಉದಾಹರಣೆಯಂತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ