Uttara Kannada: ಹವ್ಯಾಸದಿಂದಲೇ ಹಣ-ಹೆಸರು ಎರಡನ್ನೂ ಗಳಿಸಿದ ಗ್ರಾಮೀಣ ಮಹಿಳೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಬೇರೆ ಬೇರೆ ದೇಶಗಳಿಂದ ಗಿಡ ತಂದು ಬೆಳೆಸಿ ಅದರ ತಾಯಿ ಬೀಜವನ್ನು ಸಂಗ್ರಹಿಸಿ ನಮ್ಮ ಮಣ್ಣಿಗೆ ಒಗ್ಗಿಸಿ ಬೆಳೆಸುವ ಕಲೆಯಲ್ಲಿ ಸಂಧ್ಯಾ ಭಟ್  ನಿಷ್ಣಾತರಾಗಿದ್ದಾರೆ. ಹೀಗಾಗಿ ನಾವು ಕೇಳದೇ ಇರುವಂತಹ ಗಿಡಗಳು ಕೂಡಾ ಇಲ್ಲಿ ಅರಳಿ ನಿಂತಿವೆ.

  • News18 Kannada
  • 2-MIN READ
  • Last Updated :
  • Uttara Kannada, India
  • Share this:

    ಉತ್ತರ ಕನ್ನಡ: ಅಬ್ಬಬ್ಬಾ ಆ ಕಡೆ ಸರ್ವ ಋತು ಹಲಸು, ಈ ಕಡೆ ಸರ್ವಋತು ಮಾವು, ನಡುವೆ ದೇಸಿ ಕಂಪನ್ನು ಸೂಸುವ ವಿದೇಶಿ ಹೂಗಳು. ಹೌದು, ಇಲ್ಲಿ ಅದ್ಭುತವೆನಿಸುವಂತಿವೆ ಅದೆಷ್ಟೋ ಗಿಡಗಳು. ಸದಾ ಕಾಲ ನಳನಳಿಸುತ್ತಾ ಇವುಗಳು ಮಾಡೋ ಮೋಡಿಯೇ ಅಂತಹದ್ದು. ಅಂದಹಾಗೆ ಇದು ಏಕಾಏಕಿ ತಲೆ ಎತ್ತಿದ ಗ್ರೀನ್ ಗಾರ್ಡನ್ (Green Garden) ಅಲ್ಲ, ಬದಲಿಗೆ ಹವ್ಯಾಸಕ್ಕೆಂದು ಹಚ್ಚಿಕೊಂಡ ಈ ಆಸಕ್ತಿ ಇದೀಗ ಚೆಂದದ ನರ್ಸರಿ (Nursery Business) ಹುಟ್ಟುಹಾಕಿದೆ.


    ಇಲ್ಲಿದೆ ವೆರೈಟಿ ವೆರೈಟಿ ಗಿಡಗಳು
    ಯೆಸ್, ಮಲಯನ್ ಸೇಬು, ಥೈಲ್ಯಾಂಡ್ ಮಾವು, ಥೈಲ್ಯಾಂಡ್ ಹಲಸು, ಮಿರಾಕಲ್ ಫ್ರೂಟ್, ಮೆಕಡೋಮಿಯಾ, ಭಟ್ಕಳ ಮಲ್ಲಿಗೆ, ಮಾದಲ, ರಕ್ತಚಂದನ, ವಿಯೆಟ್ನಾಂ ಅರ್ಲಿ, ಕೆಲಿಥಿಯಾ, ಕೆಲಿಡಿಯಮ್ಸ್, ಆರ್ಕಿಡ್, ಜಬುಟಿಕಾಬಾ, ಪಾರಿಜಾತ ಇನ್ನೂ ಅನೇಕಾನೇಕ ಗಿಡಗಳು ಈ ನರ್ಸರಿಯಲ್ಲಿದೆ.


    ಹೆಸರೇ ವನದುರ್ಗಾ ನರ್ಸರಿ!
    ಅಂದಹಾಗೆ ಈ ನರ್ಸರಿ ಇರೋದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಫುರ ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ. ಇದು ಸಂಧ್ಯಾ ಭಟ್ ಎಂಬ ಮಹಿಳೆಯ ಕನಸಿನ ಕೂಸು ಈ ನರ್ಸರಿ. ಮನೆ ಅಂಗಳದಲ್ಲಿ ಆರಂಭವಾದ ಗಿಡಗಳನ್ನ ಬೆಳೆಸುವ ಆಸಕ್ತಿ ಇದೀಗ ನಾಲ್ಕು ಎಕರೆ ಜಾಗದಲ್ಲಿ ಹಬ್ಬಿದೆ.


    ಗ್ರಾಮೀಣ ಭಾಗದಲ್ಲಿ ನರ್ಸರಿ ಉದ್ಯಮ!
    ಸಂಧ್ಯಾ ಭಟ್ ಅವರು ಈಗ 500 ಕ್ಕೂ ಹೆಚ್ಚು ತಳಿಯ ಗಿಡಗಳನ್ನು ಬೆಳೆಯುತ್ತಿದ್ಧಾರೆ. ಇವರ ವನದುರ್ಗಾ ನರ್ಸರಿ ಈಗ ಹತ್ತು ಜನರಿಗೆ ಉದ್ಯೋಗವನ್ನೂ ಮಾಡಿದೆ. ಕುಮಟಾ, ಅಂಕೋಲಾ, ಗೋಕರ್ಣ ಭಾಗಗಳಲ್ಲಿ ಪ್ರಸಿದ್ಧ ನರ್ಸರಿಯಾಗುವ ಮೂಲಕ ಯಶಸ್ವಿ ಉದ್ಯಮವಾಗಿಯೂ ಬದಲಾಗಿದೆ. ಬೇರೆ ಬೇರೆ ದೇಶಗಳಿಂದ ಗಿಡ ತಂದು ಬೆಳೆಸಿ ಅದರ ತಾಯಿ ಬೀಜವನ್ನು ಸಂಗ್ರಹಿಸಿ ನಮ್ಮ ಮಣ್ಣಿಗೆ ಒಗ್ಗಿಸಿ ಬೆಳೆಸುವ ಕಲೆಯಲ್ಲಿ ಸಂಧ್ಯಾ ಭಟ್  ನಿಷ್ಣಾತರಾಗಿದ್ದಾರೆ. ಹೀಗಾಗಿ ನಾವು ಕೇಳದೇ ಇರುವಂತಹ ಗಿಡಗಳು ಕೂಡಾ ಇಲ್ಲಿ ಅರಳಿ ನಿಂತಿವೆ.


    ಇದನ್ನೂ ಓದಿ: Uttara Kannada: ಜೇನು ಮೇಣದಿಂದ ಪೇಪರ್ ತಯಾರಿ! ಯಲ್ಲಾಪುರದ ಕೃಷಿಕರ ವಿಶಿಷ್ಟ ಬ್ಯುಸಿನೆಸ್


    ಮಲೆನಾಡಿನಲ್ಲಿ ಮರಳುಗಾಡಿನ ಬೆಳೆ
    ಅಷ್ಟೇ ಅಲ್ಲ, ಸರ್ಕಾರದ ಗುಚ್ಛಗ್ರಾಮ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬೀಜಗಳನ್ನು ಸಂಧ್ಯಾ ಭಟ್ ಅವರೇ ಒದಗಿಸುತ್ತಿದ್ದಾರೆ. ಕರಾವಳಿ, ಮಲೆನಾಡು, ಮರಳುಗಾಡು ಸೇರಿದಂತೆ ವಿಶೇಷ ಹವಾಗುಣದಲ್ಲಿ ಬೆಳೆಯುವ ಗಿಡಗಳನ್ನೆಲ್ಲಾ ಬೆಳೆದು ಸಂಧ್ಯಾ ಅವರು ಆಶ್ಚರ್ಯ ಮೂಡಿಸಿದ್ದಾರೆ.




    ಇದನ್ನೂ ಓದಿ:ಶಿರಸಿಯಲ್ಲಿ IT ಕಂಪನಿ ಸ್ಥಾಪನೆ! ಮಲೆನಾಡು, ಕರಾವಳಿಯ ಪ್ರತಿಭೆಗಳಿಗೆ ಹೊಸ ಅವಕಾಶ


    ಹವ್ಯಾಸದಿಂದಲೇ ಹಣ-ಹೆಸರು ಎರಡೂ ಬಂತು! 
    ಈ ವನದುರ್ಗಾ ನರ್ಸರಿಗೆ ಬೇರೆ ಬೇರೆ ಕಡೆಯಿಂದ ಬಂದು ಗಿಡ ಒಯ್ಯುತ್ತಾರೆ. ಗುಳ್ಳಾಪುರಕ್ಕೆ ಬಂದರೆ ಇವರ ಮನೆಯ ದಾರಿಯನ್ನು ನರ್ಸರಿ ರೋಡ್ ಎಂದು ಕರೆಯುವ ಮಟ್ಟಿಗೆ ಇವರ ಕಸುಬು ಪ್ರಸಿದ್ಧವಾಗಿದೆ. ಹೀಗೆ ಸಂಧ್ಯಾ ಭಟ್ ಅವರ ಹವ್ಯಾಸವೊಂದು ಅವರ ಬದುಕನ್ನೇ ಬದಲಿಸಿ ಯಶಸ್ವಿ ಮಹಿಳಾ ಉದ್ಯಮಿಯನ್ನಾಗಿಸಿದೆ.


    ವರದಿ: ಎ.ಬಿ.ನಿಖಿಲ್ ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published: