ವಿವಿಧ ಜಾತಿಯ ದಾಸವಾಳ, ನೀರಲ್ಲಿ ಅರಳಿದ ಕಮಲ, ಹಿತ್ತಲ ಹಿಂದೆ ಮೂಸಂಬಿ, ಕಿತ್ತಳೆ, ಮನೆಯ ಮುಂದೆ ಅಲಂಕಾರಿಕ ಗಿಡಗಳು ಹೀಗೆ ಇಡೀ ಮನೆಯ ವಾತಾವರಣ ಭಾರೀ ಸಮೃದ್ಧ. ಹಸಿರ ಸಿರಿಯ ನಡುವೆ ಕಣ್ಣಿಗೆ ಮುದ ನೀಡುವ ಹಲವು ಬಗೆಯ ಫಲಪುಷ್ಪಗಳು. ಹೌದು, ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಿರಸಿಯ ಮತ್ತಿಘಟ್ಟ (Mattighatta) ಇಂತಹ ಅಪರೂಪದ ಬೆಳೆಗಳಿಗೆ ಫೇಮಸ್. ಮತ್ತೀಘಟ್ಟದ ಗಣಪತಿ ಸಿದ್ಧಿಯವರು ಕಾಡುಹಂದಿ ಕಾಟದಿಂದಾಗಿ ವಿವಿಧ ಬೆಳೆಗಳನ್ನು ಬೆಳೆದು ಗುಡ್ಡದ ಮೇಲೆ ಹೊಸ ಲೋಕವನ್ನೇ (Agriculture Success Story) ಸೃಷ್ಟಿಸಿದ್ದಾರೆ.
ಇಲ್ಲಿ ನೀವು ಗಣಪತಿ ಸಿದ್ದಿಯವರು ಅರಳಿಸಿದ ಗೋಡಂಬಿ, ಶ್ರೀಗಂಧ, ಅಪರೂಪದ ಮರಸೇಬು, ಕಬ್ಬು, ಕಾಳುಮೆಣಸು, ನಿಂಬೆ ಬೆಳೆಗಳ ಸವಿ ಉಣ್ಣಬಹುದು.
ಇವರು ಬೆಳೆದಿರೋ ಬೆಳೆಗಳು ಅಚ್ಚರಿ ಮೂಡಿಸುತ್ತೆ!
ಅಂದ್ಹಾಗೆ ಮತ್ತಿಘಟ್ಟ ಎಂದರೆ ಯಾವುದೇ ಊರಲ್ಲ. ಕಾಡು, ಬೆಟ್ಟದ ನಡುವೆ ಅಲ್ಲಲ್ಲಿ ಮನೆಗಳು, ಪ್ರಕೃತಿದತ್ತವಾಗಿ ದೊರೆತಿರುವ ಕರಿಮಣ್ಣಿಗೆ ಹಾಸಿಕೊಂಡ ದಪ್ಪ ಬಂಡೆಗಳು. ಇಲ್ಲಿ ಗುಡ್ಡೆ ಮೇಲೆ ಕೃಷಿ ಮಾಡುವುದು ಹರಸಾಹಸದ ಕೆಲಸ. ಹಾಗಾಗಿ ತಮ್ಮ ಜೀವನೋಪಾಯಕ್ಕೆಂದು ಇಲ್ಲಿನ ರೈತರು ಅಡಿಕೆ ಬೆಳೆದುಕೊಂಡಿದ್ದಾರೆ. ಆದ್ರೆ ನಮ್ ಗಣಪತಿ ಸಿದ್ದಿಯವರು ಅಡಕೆ ಜೊತೆಗೆ ಬೆಳೆದಿರೋ ಇನ್ನಿತರ ಬೆಳೆಗಳು ಅಚ್ಚರಿ ಮೂಡಿಸುತ್ತವೆ.
ವಿವಿಧ ಮರಗಳನ್ನು ನೋಡೋದೇ ಚಂದ!
ನಾಲ್ಕೈದು ವರ್ಷದ ಗಣಪತಿ ಸಿದ್ಧಿಯವರ ಶ್ರಮಕ್ಕೆ ಇಲ್ಲಿ ಫಲವೂ ಯಥೇಚ್ಛವಾಗಿಯೇ ಇದೆ. ಬೆಟ್ಟದ ಮೇಲೆ ಮಾವಿನ ತೋಪು, 14 ಬಗೆಯ ಹಲಸಿನ ಮರಗಳು, ಅಡಿಕೆ ಜೊತೆಗೆ ಬಾಳೆ ಎಲ್ಲವೂ ಕೂಡ ಲಾಭ ತಂದುಕೊಡುತ್ತಿವೆ.
ಇದನ್ನೂ ಓದಿ: Arecanut Future: ಅಡಿಕೆಗೆ ಭವಿಷ್ಯವಿದೆಯೇ? ಪುತ್ತೂರಿನಲ್ಲಿ ಕೃಷಿಕರಿಂದ ಮಹತ್ವದ ತೀರ್ಮಾನ
ಪತ್ನಿಯಿಂದಲೂ ಸಾಥ್
ಪ್ರತಿ ವರ್ಷ 18 ಕ್ವಿಂಟಾಲ್ ಅಡಿಕೆ ಇಳುವರಿ ಕೊಯ್ತಿರೋ ಇವರ ಪತ್ನಿಯೂ ತೋಟ ಬೆಳೆಸಲು ಹೆಗಲಾಗಿದ್ದಾರೆ. ಕೃಷಿ ಬಗ್ಗೆ ಯಾವುದೇ ಉನ್ನತ ಮಾಹಿತಿ ಇಲ್ಲದೇ ಹೋದರೂ ಆರನೇ ಕ್ಲಾಸು ಓದಿರುವ ಗಣಪತಿ ಸಿದ್ಧಿಯವರು ಸಮಗ್ರ ಕೃಷಿಯನ್ನು ಸಾಧಿಸಿಬಿಟ್ಟಿದ್ದಾರೆ.
ಇದನ್ನೂ ಓದಿ: PVC Pipe Gun: ಮಂಗನನ್ನು ಓಡಿಸೋಕೆ ಪೈಪ್ ಗನ್! ಕೃಷಿಕರೇ, ವಿಡಿಯೋ ನೋಡಿ
ಸಮಗ್ರ ವೀರಾಗ್ರಣಿ ಪ್ರಶಸ್ತಿ ವಿಜೇತ
ಈಗಾಗಲೇ ಕೃಷಿ ಕ್ಷೇತ್ರದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿರುವ ಇವರು ಆಸಕ್ತಿಯಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮಾದರಿಯೂ ಆಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ