ಉತ್ತರ ಕನ್ನಡ: ಲಟ್ ಪಟ್ ಲಟ್ ಪಟ್ ಅಂತಾ ಸದ್ದು ಮಾಡ್ತಿರೋ ಕೈಮಗ್ಗ. ನೂಲಿನ ಮೇಲೊಂದು ನೂಲು ಹೆಣೆದು ಜೋಡಿಸುತ್ತಿರೋ ನೌಕರರು. ದೇಸಿ ವಸ್ತ್ರಗಳ ತಯಾರಿಕೆಗೆ ಈ ಕೇಂದ್ರ ಬಲು ಫೇಮಸ್. ಅದೆಷ್ಟೋ ಕಾರ್ಮಿಕರ ಪಾಲಿಗೆ ಇಲ್ಲಿನ ಚರಕವೇ (Handloom) ಜೀವನಾಡಿ. ಅದೆಲ್ಲಕ್ಕೂ ಜಾಸ್ತಿ ದಂಪತಿಯೋರ್ವರ (Couple Success Story) ಛಲದ ಫಲವೇ ಈ ಕೈಮಗ್ಗ ಕೇಂದ್ರ.
ಉತ್ತರ ಕನ್ನಡದ ಯಲ್ಲಾಪುರದ ವೀರಭದ್ರೇಶ್ವರ ಕೈಮಗ್ಗ ಸಂಸ್ಥೆಯಲ್ಲಿ ಇಂದಿಗೂ ಚರಕದಲ್ಲಿ ಮಗ್ಗ ನೇಯುವ ದೃಶ್ಯ ಕಾಮನ್. 1992ರಲ್ಲಿ ಪಾಂಡುರಂಗ ಮಂಡಗೋಡ್ಲಿ ತಮಗೆ ಬಂದಂತಹ ಸರ್ಕಾರಿ ನೌಕರಿ ಬಿಟ್ಟು ಸ್ವಂತ ಏನಾದರೂ ಮಾಡುವ ಆಸೆಯಿಂದ ಕೈಮಗ್ಗ ಪ್ರಾರಂಭಿಸಿದರು. ಇವರ ಹೆಂಡತಿ ಸುಮಂಗಲಾ ಅದಕ್ಕೆ ಸಾಥ್ ನೀಡಿದರು.
ಸಖತ್ ವಹಿವಾಟು
ಮುಂದೆ ಇದೇ ಸಂಸ್ಥೆ ಹಲವಾರು ಜನರಿಗೆಇಂಟರ್ನ್ಶಿಪ್ ಕೇಂದ್ರವಾಯಿತು. ಈಗಾಗಲೇ 1500 ಕ್ಕೂ ಹೆಚ್ಚು ಜನ ಇಲ್ಲಿ ನೇಯ್ಗೆ ಕಲಿತಿದ್ದಾರೆ. 15 ಜನಕ್ಕೆ ಸಂಸ್ಥೆ ಈಗ ಉದ್ಯೋಗ ನೀಡಿದೆ. 6 ತಿಂಗಳಿಗೆ ಎಂಟು ಲಕ್ಷ ರೂಪಾಯಿಯ ವಹಿವಾಟನ್ನು ನಡೆಸುವ ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿದೆ.
ತನ್ನದೇ ಆದ ಬ್ರ್ಯಾಂಡ್
ಇಳಕಲ್, ಮೈಸೂರ್ ಸಿಲ್ಕ್, ಉಡುಪಿ ಸೀರೆ ಥರಾನೇ ಯಲ್ಲಾಪುರ ಸೀರೆನೂ ತನ್ನದೇ ಬ್ರ್ಯಾಂಡ್ ಕ್ರಿಯೇಟ್ ಮಾಡಿಕೊಂಡಿದೆ. ಉಳಿದಂತೆ ಇಲ್ಲಿ ತಯಾರಾಗೋ ವಿಧವಿಧವಾದ ರಗ್ಗುಗಳು, ಕಂಬಳಿಗಳಿಗೆ ಸಖತ್ ಡಿಮ್ಯಾಂಡ್ ಇವೆ. ಸದ್ಯ ಮನೆಯ ಆರು ಹಾಗೂ ಹೊರಗಿನ ಹದಿನೈದು ಜನ ಸಂಸ್ಥೆಗಾಗಿ ದುಡಿಯುತ್ತಿದ್ದಾರೆ.
ಇದನ್ನೂ ಓದಿ: Ganapati Temple: ಈ ಗಣಪನಿಗೆ 6 ಕೈಗಳು, ಇಲ್ಲಿ ಯಕ್ಷಗಾನ ನೋಡಿದ್ರೆ ಕಷ್ಟಗಳೆಲ್ಲ ಮಂಗಮಾಯ!
ಶಿಷ್ಯವೇತನ
ಪ್ರತಿ ಬಾರಿಯೂ ಕೇಂದ್ರ ಸರ್ಕಾರದಿಂದ ಏನಾದರೊಂದು ಯೋಜನೆಗೆ ಈ ಕೈಮಗ್ಗ ಸಂಸ್ಥೆ ತರಬೇತಿ ಕೇಂದ್ರವಾಗಿರುತ್ತದೆ. ಇಲ್ಲಿ ಕಲಿತವರಿಗೆ ತಿಂಗಳಿಗೆ 3,500 ರೂಪಾಯಿ ಶಿಷ್ಯವೇತನ ಸಿಗುತ್ತೆ. ಮತ್ತವರಿಗೆ ಕೆಲಸ ಖಾಯಂ ಎಂದುಕೊಳ್ಳಬಹುದು.
ಇದನ್ನೂ ಓದಿ: Red Ant Chutney: ಕೆಂಪು ಇರುವೆಯ ರುಚಿ ರುಚಿ ಚಟ್ನಿ, ಸಿದ್ದಿ ಸಮುದಾಯದ ಸಖತ್ ರೆಸಿಪಿ ಇದು
ಅಷ್ಟರಮಟ್ಟಿಗೆ ನೇಯ್ಗೆಗೆ ಈ ದಂಪತಿ ಹೆಸರಾಗಿದ್ದಾರೆ. ಒಟ್ಟಿನಲ್ಲಿ ಕೈಮಗ್ಗ ನೇಯ್ಗೆಯ ಜೊತೆಗೆ, ಗಾಂಧಿ ಚರಕದ ಮೂಲಕ ಸ್ವದೇಶಿ ವಸ್ತ್ರಗಳ ಉತ್ಪಾದನೆ ಇಂದಿಗೂ ನಡೆಸುತ್ತಿರೋ ಈ ದಂಪತಿ ನಿಜಕ್ಕೂ ಗ್ರೇಟ್ ಎನಿಸಿಕೊಂಡಿದ್ದಾರೆ.
ಸುಮಂಗಲಾ ಮತ್ತು ಪಾಂಡುರಂಗ ಅವರ ಸಂಪರ್ಕ ಸಂಖ್ಯೆ: 97416 66923
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ