• Home
  • »
  • News
  • »
  • uttara-kannada
  • »
  • Positive Story: 25 ಸಾವಿರಕ್ಕೂ ಹೆಚ್ಚು ಗ್ರಾಮೀಣ ಯುವಕರ ಭವಿಷ್ಯ ರೂಪಿಸಿದ ನಮ್ಮ ಕರ್ನಾಟಕದ ಸಂಸ್ಥೆಯಿದು!

Positive Story: 25 ಸಾವಿರಕ್ಕೂ ಹೆಚ್ಚು ಗ್ರಾಮೀಣ ಯುವಕರ ಭವಿಷ್ಯ ರೂಪಿಸಿದ ನಮ್ಮ ಕರ್ನಾಟಕದ ಸಂಸ್ಥೆಯಿದು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಉತ್ತರ ಕನ್ನಡದ ಹಳಿಯಾಳದಲ್ಲಿರುವ ದೇಶಪಾಂಡೆ ರುಡ್ ಸೆಟ್ ಟ್ರಸ್ಟ್ ಗೃಹೋಪಯೋಗಿ ಹಾಗೂ ತಾಂತ್ರಿಕ ತರಬೇತಿ ನೀಡುವಲ್ಲಿ ಫೇಮಸ್. ಅದೂ ಬೇರೆ ಒಂದು ಪೈಸೆ ಪಡೆಯದೆ!

  • Share this:

    ಹಳಿಯಾಳ: ಟಿವಿ ಒಳಗಡೆ ಏನಿದೆ? ಅದನ್ನ ರಿಪೇರಿ ಮಾಡೋದು ಹೇಗೆ? ಹೀಗೆ ಮಗ್ನರಾಗಿರುವ ಆಲಿಸುತ್ತಿರುವ ಇವರೆಲ್ಲರೂ ವಿದ್ಯಾರ್ಥಿಗಳು. ಅರೆ!ಈ ವಯಸ್ಸಿಗೂ ಸ್ಟೂಡೆಂಟಾ? ಯಾವ್ ಸಂಸ್ಥೆಯಪ್ಪ ಇವರ ಟ್ರೈನರ್ ಅಂದ್ಕೊಂಡ್ರ? ಅದುವೇ ನೋಡಿ ನಿಜಕ್ಕೂ ಆದರ್ಶಮಯವಾದ ಸ್ವಾವಲಂಬಿ ಬದುಕು (Positive Story) ಕಲಿಸಿಕೊಡೋ (Canara Bank Deshpande RSETI) ದೇಶಪಾಂಡೆ ರುಡ್ ಸೆಟ್.


    ಹೌದು, ಉತ್ತರ ಕನ್ನಡದ ಹಳಿಯಾಳದಲ್ಲಿರುವ ದೇಶಪಾಂಡೆ ರುಡ್ ಸೆಟ್ ಟ್ರಸ್ಟ್ ಗೃಹೋಪಯೋಗಿ ಹಾಗೂ ತಾಂತ್ರಿಕ ತರಬೇತಿ ನೀಡುವಲ್ಲಿ ಫೇಮಸ್. ಅದೂ ಬೇರೆ ಒಂದು ಪೈಸೆ ಪಡೆಯದೆ! ಬದಲಿಗೆ ತಾವೇ ಉಚಿತ ಊಟ, ವಸತಿ ಜೊತೆಗೆ ಉಚಿತ ತರಬೇತಿ ನೀಡಿ, ಉದ್ಯೋಗಕ್ಕೆ ಸಹಕಾರ ನೀಡಬಲ್ಲರು.


    25 ಸಾವಿರಕ್ಕೂ ಹೆಚ್ಚು ಯುವಕರಿಗೆ ತರಬೇತಿ
    ಹೀಗೆ ಈ ಸಂಸ್ಥೆಯಲ್ಲಿ ಇದುವರೆಗೆ ಸುಮಾರು 25 ಸಾವಿರ ಮಂದಿ ವೃತ್ತಿಪರ ತರಬೇತಿ ಪಡೆದು, ಶೇಕಡಾ 90 ರಷ್ಟು ಜನ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ. ಕೆನರಾ ಬ್ಯಾಂಕ್ ಸಹಯೋಗವೂ ಇದಕ್ಕಿದ್ದು, ಇಲ್ಲಿ ಕಲಿತು ಮುಂದೆ ಉದ್ಯೋಗ ಮಾಡುವವರಿಗೆ ರುಡ್ ಸೆಟ್ ಸಂಸ್ಥೆ ಮೂಲಕ ಸಾಲದ ನೆರವೂ ಸಿಗಲಿದೆ.




    ಇದನ್ನೂ ಓದಿ: Bananti Devi Temple: ಬಲು ವಿಶೇಷ ಈ ಬಾಣಂತಿ ಜಾತ್ರೆ, ನೀರಿನಲ್ಲಿ ಮಕ್ಕಳನ್ನು ತೇಲಿಬಿಡುವ ಹರಕೆ!


    ಕೇವಲ 2 ತಿಂಗಳ ತರಬೇತಿ!
    ವಿವಿಧ ವೃತ್ತಿಪರ ತರಬೇತಿಗಳನ್ನು ಇವರಿಲ್ಲಿ ಕೇವಲ ಒಂದು ತಿಂಗಳಲ್ಲಿ ನೀಡಬಲ್ಲರು. ಬಳಿಕ 2 ತಿಂಗಳ ತನಕ ತರಬೇತಿ ಪಡೆದವರನ್ನ ಮಾನಿಟರ್ ಮಾಡಿ ಸ್ವ ಉದ್ಯೋಗಕ್ಕೆ ಸಹಕಾರ ನೀಡುವರು. ಹೀಗೆ ಇಲ್ಲಿ ವಿವಿಧ ಗೃಹೋಪಯೋಗಿ ವಸ್ತುಗಳ ರಿಪೇರಿ, ಬೈಕ್ ರಿಪೇರಿ ಕಲಿತ ಅದೆಷ್ಟೋ ಮಂದಿ ಸ್ವ ಉದ್ಯೋಗ ಮಾಡಿಕೊಂಡಿದ್ದರೆ, ಇನ್ನು ಕೆಲವರು ಸ್ವಉದ್ಯೋಗದ ಕನಸಿನಲ್ಲಿದ್ದಾರೆ.


    ಇದನ್ನೂ ಓದಿ: Uttara Kannada: 10 ಸಾವಿರದಲ್ಲೇ ರೋಪ್ ವೇ ನಿರ್ಮಿಸಿದ ಕೃಷಿಕ!


    ಒಟ್ಟಿನಲ್ಲಿ ಹಳಿಯಾಳದ ದೇಶಪಾಂಡೆ ರುಡ್ ಸೆಟ್ ಸಂಸ್ಥೆಯು ಉತ್ತರ ಕನ್ನಡ ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಯ ಯುವಕರಿಗೆ, ವಯಸ್ಕರಿಗೂ ವೃತ್ತಿಪರ ತರಬೇತಿ ನೀಡುತ್ತಾ ಬಂದಿದೆ. ಈ ಸಂಸ್ಥೆಯ ಕೆಲಸ ಕಾರ್ಯಕ್ಕೆ ನಿಜಕ್ಕೂ ಭೇಷ್ ಎನ್ನಲೇಬೇಕು.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು