Uttara Kannada: ತಾಳೆ ಮರದಿಂದ ತುಂಬಿ ಹೋದ ವರದಾ ದಂಡೆ! ಬಂಡವಾಳದ 3 ಪಟ್ಟು ಲಾಭ ಗಳಿಸಿದ ಬನವಾಸಿ ಕೃಷಿಕರು

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಒಂದು ಗಿಡದಲ್ಲಿ ಸುಮಾರು 50 ಕೆಜಿಯಷ್ಟು ಫಸಲು ಬರುವುದರ ಜೊತೆಗೆ ತಾಳೆ ಗರಿಯೂ ಬಳಕೆಗೆ ಬರುತ್ತೆ.

 • News18 Kannada
 • 2-MIN READ
 • Last Updated :
 • Uttara Kannada, India
 • Share this:

  ಉತ್ತರ ಕನ್ನಡ: ಸುತ್ತಲೂ ತಾಳೆ ಮರಗಳದ್ದೇ ಸಾಮ್ರಾಜ್ಯ. ಇದ್ಯಾವುದೋ ಮರುಭೂಮಿಯ (Desert) ಅನುಭವ ನೀಡೋ ತೋಟ. ಹಾಗಿದ್ರೆ ತಾಳ್ಮೆ ಪರೀಕ್ಷಿಸೋ ಈ ತಾಳೆ ಮರಗಳು (Palm Trees) ಬೆಳೆದಿದ್ದು ಎಲ್ಲಿ? ಮರುಭೂಮಿಯಂತಹ ವಾತಾವರಣ ಹೊಂದಿರೋ ಕರುನಾಡಿನ ಆ ಜಾಗ ಯಾವುದು ? ಹೇಳ್ತೀವಿ ನೋಡಿ.

  ಹೌದು, ಉತ್ತರ ಕನ್ನಡದ ಬನವಾಸಿ ಸಮಶೀತೋಷ್ಣ ವಲಯವಾದ್ರೂ ಈ ಉಷ್ಣ ವಲಯದ ತೋಟಕ್ಕೆ ಆಶ್ರಯ ನೀಡಿದೆ. ಸತತ 8 ವರ್ಷಗಳ ಪಾಲನೆ ಪೋಷಣೆಯಿಂದಾಗಿ ಬನವಾಸಿಯ ತಿಗಣಿ ಗ್ರಾಮದ ಮೃತ್ಯುಂಜಯ ಗೌಡ ಹಾಗೂ ವಿಶ್ವ ಗೌಡರ ಜಮೀನಿನಲ್ಲಿ ತಾಳೆ ಮರಗಳು ಸೊಂಪಾಗಿ ಬೆಳೆದು ತಲೆಯೆತ್ತಿ ನಿಂತಿವೆ.


  ಒಂದೇ ಗಿಡದಲ್ಲಿ 50 ಕೆಜಿ ಫಸಲು!
  ಒಂದರ್ಥದಲ್ಲಿ ಇದು ಕಲ್ಪವೃಕ್ಷ ಕೂಡಾ. ಒಂದು ಗಿಡದಲ್ಲಿ ಸುಮಾರು 50 ಕೆಜಿಯಷ್ಟು ಫಸಲು ಬರುವುದರ ಜೊತೆಗೆ ತಾಳೆ ಗರಿಯೂ ಬಳಕೆಗೆ ಬರುತ್ತೆ. ಮಲೆನಾಡು, ಕರಾವಳಿ ಭಾಗದಲ್ಲಿ ಎಣ್ಣೆ ಬೀಜಗಳ ತಾಳೆ ಮರ ಕಡಿಮೆಯಿರುವುದರಿಂದ ನಾನಾ ಕಡೆಯಿಂದ ಆಗಮಿಸುವ ವ್ಯಾಪಾರಸ್ಥರು ತಾಳೆ ಎಣ್ಣೆ ತಯಾರಿಕೆಗಾಗಿ ಇಲ್ಲಿಂದ ಬೀಜ ಖರೀದಿಸಿಕೊಂಡು ಹೋಗುತ್ತಾರೆ. ಮಾರುಕಟ್ಟೆಯ ಮೇಲೆ ದರ ನಿಗದಿಯಾಗುತ್ತೆ.


  ತದಡಿಗೆ ಹೆಸರು ಬಂದಿದ್ದೇ ತಾಳೆಯಿಂದ!
  ಮರಳುಗಾಡಿನ ಬೆಳೆ, ಸಮುದ್ರ ತೀರದ ಬೆಳೆ ಎಂದು ಪ್ರಸಿದ್ಧಿ ಪಡೆದಿರುವ ತಾಳೆಯಿಂದ ಒಂದು ಊರೇ ಹೆಸರು ಪಡೆಯುವಷ್ಟು ಅದರ ಸಂತತಿ ಮೊದಲು ಉತ್ತರ ಕನ್ನಡದಲ್ಲಿತ್ತು. ತದಡಿ ದ್ವೀಪಕ್ಕೆ ಈ ಹೆಸರು ಬಂದಿದ್ದೇ ತಾಳೆಮರಗಳಿಂದ. ಆದರೆ ಇತ್ತೀಚೆಗೆ ಕ್ರಮೇಣ ಈ ಬೆಳೆ ಕಡಿಮೆಯಾಗಿತ್ತು. ಆದ್ರೆ ಮೃತ್ಯುಂಜಯ ಗೌಡ ಹಾಗೂ ವಿಶ್ವ ಗೌಡ ಸಹೋದರರು ಮಾಡಿದ ತಾಳೆ ಕೃಷಿ ಇದೀಗ ಅವರ ಪ್ರಯತ್ನಕ್ಕೂ ಫಲ ನೀಡಿದೆ.


  ಥೇಟ್ ತೆಂಗಿನ ಹಾಗೇ ಕಾಣುತ್ತೆ
  ಸದ್ಯ ಈ ತಾಳೆ ಕೃಷಿ ಬಂಡವಾಳದ ಮೂರು ಪಟ್ಟು ಲಾಭ ತಂದು ಕೊಟ್ಟಿದೆ. ಮಧ್ಯಮ ಎತ್ತರಕ್ಕೆ ಬೆಳೆಯುವ ಥೇಟ್ ತೆಂಗಿನ ರಚನೆ ಹೋಲುವ ಈ ಬೆಳೆಯು ದೀರ್ಘಾವಧಿ ಬೆಳೆ ಅನ್ನೋದೇನೋ ನಿಜ. ಆದ್ರೆ, ಯಾವುದೇ ಕಾಡುಪ್ರಾಣಿಗಳ ಕಾಟ ಇದಕ್ಕಿಲ್ಲ.
  ಇದನ್ನೂ ಓದಿ: Snake Viral Video: ನಾಗರಹಾವು ರಸ್ತೆ ದಾಟಲು ಹೆದ್ದಾರಿಯೇ ಅರ್ಧ ಗಂಟೆ ಬಂದ್!


  ಈ ಸಹೋದರರು ಹತ್ತು ಎಕರೆಯಷ್ಟು ಜಮೀನನ್ನು ಪೂರ್ತಿ ಈ ಬೆಳೆಗೆ ಮೀಸಲಿಟ್ಟಿದ್ದಾರೆ. ಅಡಿಕೆಯ ಜೊತೆ ಜೊತೆಗೆ ಬನವಾಸಿಯಂತಹ ಅರೆಮಲೆನಾಡಿನಲ್ಲಿ ತಾಳೆಯೂ ಕೂಡ ಲಾಭದಾಯಕ ಅನ್ನೋದನ್ನ ತೋರಿಸಿಕೊಟ್ಟಿದ್ಧಾರೆ.


  ಇದನ್ನೂ ಓದಿ: Family Newspaper: ಉತ್ತರ ಕನ್ನಡದ ಈ ಕುಟುಂಬವೇ ಹೊರತರುತ್ತೆ ಫ್ಯಾಮಿಲಿ ನ್ಯೂಸ್ ಪೇಪರ್! ಇದು 'ಮಿರ್ಚಿ ಮಂಡಕ್ಕಿ' ಸ್ಪೆಷಲ್


  ಕೃಷಿ ಇಲಾಖೆ ಹಾಗೂ ತೈಲ ಕಂಪೆನಿಗಳು ಬೋರಾನ್ ಗೊಬ್ಬರ ಸೇರಿದಂತೆ ಸಹಾಯಧನವನ್ನೂ ಈ ಬೆಳೆಗೆ ನೀಡ್ತವೆ. ಒಟ್ಟಿನಲ್ಲಿ ಒಂದೇ ಬೆಳೆಗೆ ಸೀಮಿತರಾಗುವ ಕೃಷಿಕರ ನಡುವೆ ವಿಭಿನ್ನ ಆಲೋಚನೆ ಮಾಡಿದಾಗ ಇಂತಹ ರಿಸಲ್ಟ್ ಸಾಧ್ಯ ಅನ್ನೋದಕ್ಕೆ ಈ ಸಹೋದರರೇ ಸಾಕ್ಷಿಯಾಗಿದ್ದಾರೆ.


  ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು