• Home
  • »
  • News
  • »
  • uttara-kannada
  • »
  • Robot: 7ನೇ ಕ್ಲಾಸ್ ಬಾಲಕ ರೋಬೋಟ್ ತಯಾರಿಸಿದ! ಇದು ಸೇನೆಗೂ ಸಹಾಯ ಮಾಡುತ್ತೆ!

Robot: 7ನೇ ಕ್ಲಾಸ್ ಬಾಲಕ ರೋಬೋಟ್ ತಯಾರಿಸಿದ! ಇದು ಸೇನೆಗೂ ಸಹಾಯ ಮಾಡುತ್ತೆ!

X
ಇಲ್ಲಿದೆ ನೋಡಿ ರೋಬೋಟ್

"ಇಲ್ಲಿದೆ ನೋಡಿ ರೋಬೋಟ್"

ಈ ರೋಬೋಟ್ಅನ್ನು ಒಂದಲ್ಲ ಎರಡಲ್ಲ, ಬರೋಬ್ಬರಿ 8 ತಿಂಗಳು ಶ್ರಮವಹಿಸಿ ಈ ತಯಾರಿಸಿದ್ದಾರೆ ರಜತ್. ಶಿಕ್ಷಕರು, ಮನೆಯವರು ರೋಬೋಟ್ ತಯಾರಿಸೋಕೆ ಬೆನ್ನೆಲುಬಾಗಿದ್ರಂತೆ.

  • News18 Kannada
  • Last Updated :
  • Uttara Kannada, India
  • Share this:

    ಮನೆ ತುಂಬಾ ಚೆಲ್ಲಾಪಿಲ್ಲಿಯಾದ ಇಲೆಕ್ಟ್ರಿಕ್ ಉಪಕರಣ, ನಡುವೆ ಹೆಲ್ಮೆಟ್, ಬ್ಯಾಟರಿ, ಕಟ್ಟಿಗೆ, ಪೈಪ್ ತುಂಡುಗಳು. ವೈರ್​ಗಳನ್ನು ಹಿಡಿದು ಯಾವ್ದೋ ಪ್ರಯೋಗದಲ್ಲಿ ಮಗ್ನನಾಗಿರೋ ಬಾಲಕ. ಇದು ನೋಡಿದ್ರೆ ಇದು ಮನೆಯಾ ಅಥವಾ ಪ್ರಯೋಗಾಲಯವಾ ಅನ್ನೋ ಪ್ರಶ್ನೆ ಮೂಡುತ್ತೆ. ಇಲ್ಲಿ ಲೈಟ್ ಉರಿಯೋ ಹೆಲ್ಮೆಟ್ ತೊಟ್ಟಿರೋ ಈ ಬಾಲಕ ಉತ್ತರ ಕನ್ನಡ ಜಿಲ್ಲೆಯ (Uttara Kannada) ಸಿದ್ದಾಪುರದ (Siddapur) ಪುಟ್ಟ ವಿಜ್ಞಾನಿ!


    ಈ ಮಲ್ಟಿಟ್ಯಾಲೆಂಟೆಡ್ ಹುಡುಗನ ಹೆಸರು ಸಿದ್ದಾಪುರದ ರಜತ್ ಶೇಟ್ ಅಂತ. ಈ ಬಾಲಕ ತನ್ನ ಮನೆಯನ್ನೇ ಪ್ರಯೋಗಾಲಯ ಮಾಡ್ಕೊಂಡಿದ್ದಾರೆ. ಸದ್ಯ ಸಿದ್ಧಾಪುರದ ಪ್ರಶಾಂತಿ ಹೈಸ್ಕೂಲ್​ನಲ್ಲಿ ಏಳನೇ ಕ್ಲಾಸ್​ನಲ್ಲಿ ಓದ್ತಿರೋ ರಜತ್ ಶೇಟ್ ಮನೆಯಲ್ಲೇ ಲಾಕ್ ಡೌನ್ ಟೈಮಲ್ಲಿ ಯೂಟ್ಯೂಬ್ ನೋಡಿಕೊಂಡು ಹಲವು ವಸ್ತುಗಳನ್ನು ತಯಾರಿಸಿದ್ಧಾರೆ.


    ಅತೀ ಕಡಿಮೆ ಹಣದಲ್ಲಿ ಇಷ್ಟೆಲ್ಲ ತಯಾರಿ!
    ರೋಬೋಟ್, ವ್ಯಾಕ್ಯೂಮ್ ಕ್ಲೀನರ್, ಗ್ರಾಸ್ ಕಟಿಂಗ್ ಮೆಶಿನ್, ಶೋಲ್ಡರಿಂಗ್ ಸ್ಟ್ಯಾಂಡ್, ವಾಟರ್ ಫ್ಲೋ ಅಲಾರಾಂ, ಮಲ್ಟಿ ಟಾಸ್ಕಿಂಗ್ ಹೆಲ್ಮೆಟ್ ಹೀಗೆ ಹಲವು ರೀತಿಯ ಐಟಂಗಳು ರಜತ್ ಕೈಯಲ್ಲಿ ಅರಳಿವೆ. ಅತೀ ಕಡಿಮೆ ಹಣದಲ್ಲಿ ತಯಾರಿಸೋದು ರಜತ್ ಹೆಗ್ಗಳಿಕೆ.


    ಇದನ್ನೂ ಓದಿ: Soil Prasad: ಇಲ್ಲಿ ಮಣ್ಣೇ ಪ್ರಸಾದ! ಮಕ್ಕಳ ಹಠ ಕಡಿಮೆ ಆಗೋಕೆ ಈ ದೇಗುಲದ ಮಣ್ಣು ತಿನಿಸುವ ಪೋಷಕರು!


    ಸೇನೆಗೂ ಬಹು ಉಪಕಾರಿಯಂತೆ ಈ ರೋಬೋಟ್!
    ಅಂದ್ಹಾಗೆ ಬಹು ಮುಖ್ಯವಾದ ಮಾಹಿತಿ ಹಾಗೂ ಬೆಲೆಬಾಳುವ ವಸ್ತುಗಳನ್ನು ರಕ್ಷಣೆ ಮಾಡೋಕೆ ರಜತ್ ತಯಾರಿಸೋ ಈ ರೋಬೋಟ್​ನ ಬಳಸಬಹುದಂತೆ. ಸೇನೆಯಲ್ಲಿ ರಕ್ಷಣೆಗೆ ಸಂಬಂಧಿಸಿಯೂ ಹಲವು ಬಗೆಯಲ್ಲಿ ಈ ರೋಬೋಟ್ ಕೆಲಸ ಮಾಡಬಲ್ಲದು ಅಂತಾರೆ ರಜತ್.


    ಇದನ್ನೂ ಓದಿ: Positive Story: ಕಾಶ್ಮೀರದಿಂದ ಕನ್ಯಾಕುಮಾರಿಗೆ ಸ್ಕೇಟಿಂಗ್ ಯಾತ್ರೆ! ಇವರ ಸಾಹಸ ನೀವೇ ನೋಡಿ


    ಈ ರೋಬೋಟ್ಅನ್ನು ಒಂದಲ್ಲ ಎರಡಲ್ಲ, ಬರೋಬ್ಬರಿ 8 ತಿಂಗಳು ಶ್ರಮವಹಿಸಿ ಈ ತಯಾರಿಸಿದ್ದಾರೆ ರಜತ್. ಶಿಕ್ಷಕರು, ಮನೆಯವರು ರೋಬೋಟ್ ತಯಾರಿಸೋಕೆ ಬೆನ್ನೆಲುಬಾಗಿದ್ರಂತೆ. ಮುಂದೊಂದು ದಿನ ವಿಜ್ಞಾನಿಯಾಗುವ ಕನಸು ಹೊಂದಿರೋ ರಜತ್ಗೆ ನಾವೂ ಆಲ್ ದಿ ಬೆಸ್ಟ್ ಹೇಳೋಣ ಅಲ್ವಾ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: