• Home
 • »
 • News
 • »
 • uttara-kannada
 • »
 • Good News: ಸುಲಭವಾಗಿ ಗಣಿತ, ವಿಜ್ಞಾನ ಕಲಿಯಬೇಕೇ? ಇಲ್ಲಿ ಬನ್ನಿ ಸಾಕು!

Good News: ಸುಲಭವಾಗಿ ಗಣಿತ, ವಿಜ್ಞಾನ ಕಲಿಯಬೇಕೇ? ಇಲ್ಲಿ ಬನ್ನಿ ಸಾಕು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಭದ್ರತೆಯ ದೃಷ್ಟಿಯಿಂದ ಕೈಗಾಕ್ಕೆ ಭೇಟಿ ಕಷ್ಟಸಾಧ್ಯ. ಆದ್ರೆ, ಕೈಗಾದಲ್ಲಿ ಅಣುವಿದ್ಯುತ್ ಉತ್ಪಾದನೆ ಹೇಗಿರತ್ತೆ ಅನ್ನೋದನ್ನ ವಿಜ್ಞಾನ ಕೇಂದ್ರದಲ್ಲೇ ನೋಡ್ಬಹುದು.

 • News18 Kannada
 • 3-MIN READ
 • Last Updated :
 • Uttara Kannada, India
 • Share this:

  ವಿಜ್ಞಾನ, ಗಣಿತ ಅಂದ್ರೆ ನಿಮ್ ಮಕ್ಕಳಿಗೆ ಕಬ್ಬಿಣದ ಕಡಲೆಕಾಯಿನಾ? ಹಾಗಿದ್ರೆ ಚಿಂತೆ ಬಿಡಿ, ಒಂದ್ಸಲ ಇಲ್ಲಿ ಕರ್ಕೊಂಡು ಬನ್ನಿ ಸಾಕು, ಎಲ್ಲವನ್ನೂ ಈ ಮಕ್ಕಳೇ ಪಟ ಪಟ ಅಂತಾ ವಿವರಿಸ್ತಾ ಹೋಗ್ತಾರೆ. ನೀರು ಕುಡಿದಷ್ಟೇ ಈಸಿಯಾಗಿ ಸುಲಭವಾಗಿ ಕಲಿತು ಅವರೇ ವಿವರಿಸ್ತಾ ಹೋಗ್ತಾರೆ! ಹೌದು, ಉತ್ತರ ಕನ್ನಡ ಜಿಲ್ಲೆಯ (Uttara Kannada) ಕಾರವಾರದ ವಿನೋದ ವಿಜ್ಞಾನ ಕೇಂದ್ರದ (Karwar Sub Regional Science Centre) ವಿಶೇಷವಿದು. ಇಲ್ಲಿರೋ 30ಕ್ಕೂ ಅಧಿಕ ವಿಜ್ಞಾನ, ಗಣಿತ ಮಾದರಿಗಳಿಂದ ಪ್ರಾಯೋಗಿಕವಾಗಿ ಪಾಠ ಕಲಿಯಬಹುದು. ಇನ್ನು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಒಂದು ರೀತಿಯ ಒನ್ ಸ್ಟಾಪ್ ಸೆಂಟರ್ ಇದ್ದಂತೆ. ವಿನೋದ ವಿಜ್ಞಾನದಲ್ಲಿ ನ್ಯೂಟನ್ ನಿಯಮಗಳನ್ನ, ಬೇರೆ ಬೇರೆ ಗ್ರಹಗಳಲ್ಲಿ ನಮ್ಮ ತೂಕ ಎಷ್ಟಿರತ್ತೆ ಅನ್ನೋದನ್ನ, ಎಷ್ಟೇ ಇಣುಕಿದ್ರೂ ಆಳ ತಿಳಿಯದ ಬಾವಿ, ಹೀಗೆ ಸಾಕಷ್ಟು ಮಾದರಿಗಳಿವೆ.


  ಎಲ್ಲಿದೆ ಈ ವಿಜ್ಞಾನ ಕೇಂದ್ರ?
  ಕಾರವಾರ ನಗರದಿಂದ ಮೂರು ಕಿಲೋಮೀಟರ್ ದೂರದ ಕೋಡಿಬಾಗ ಕಡಲತೀರದಲ್ಲಿ, ಹೆದ್ದಾರಿಯ ಪಕ್ಕದಲ್ಲೇ ಈ ಉಪಪ್ರಾದೇಶಿಕ ವಿಜ್ಞಾನ ಕೇಂದ್ರವಿದೆ. ಕೇಂದ್ರದ ಎದುರಿಗೇ ಕೈಗಾ ಅಣುವಿದ್ಯುತ್ ಸ್ಥಾವರದ ಮಿನಿಯೇಚರ್ ಇದೆ.


  ಇದನ್ನೂ ಓದಿ: Manjguni Temple: ಅಕ್ಷರಶಃ ವೈಕುಂಠವಾದ ಕರ್ನಾಟಕದ ತಿರುಪತಿ, 708 ವರ್ಷಗಳ ನಂತರ ಮತ್ತೆ ಭೂದಾನ


  ಹತ್ತಾರು ಬಗೆ ಬಗೆಯ ಮೀನುಗಳೂ ಇಲ್ಲಿವೆ!
  ಭದ್ರತೆಯ ದೃಷ್ಟಿಯಿಂದ ಕೈಗಾಕ್ಕೆ ಭೇಟಿ ಕಷ್ಟಸಾಧ್ಯ. ಆದ್ರೆ, ಕೈಗಾದಲ್ಲಿ ಅಣುವಿದ್ಯುತ್ ಉತ್ಪಾದನೆ ಹೇಗಿರತ್ತೆ ಅನ್ನೋದನ್ನ ವಿಜ್ಞಾನ ಕೇಂದ್ರದಲ್ಲೇ ನೋಡ್ಬಹುದು. ಇನ್ನು ಕೇಂದ್ರದ ಮೇಲ್ಬಾಗಕ್ಕೆ ತೆರಳಿದರೆ ಹತ್ತಾರು ಬಗೆ ಬಗೆಯ ಮೀನುಗಳನ್ನ ಕಣ್ತುಂಬಿಸಿಕೊಳ್ಳಬಹುದು. ವಿದ್ಯಾರ್ಥಿಗಳ ಗುಂಪುಗಳೇನಾದರೂ ಇದ್ದಲ್ಲಿ ಒಂದು ದಿನ ಮೊದಲೇ ಕೇಂದ್ರಕ್ಕೆ ಮಾಹಿತಿ ನೀಡಬೇಕಾಗುತ್ತೆ.


  ಇದನ್ನೂ ಓದಿ: Positive Story: ಮಾರಿಕಾಂಬಾ ಎಂಬ ಮಾದರಿ ಶಾಲೆ; ಈ ಸರ್ಕಾರಿ ಶಾಲೆಗೆ ಅಡ್ಮಿಷನ್ ಮಾಡಲು ಇರುತ್ತೆ ಉದ್ದದ ಕ್ಯೂ


  Sub - Regional Science Centre
  ಈ ಸೈನ್ಸ್​ ಸೆಂಟರ್​ಗೆ ಹೀಗೆ ಬನ್ನಿ (ಚಿತ್ರಕೃಪೆ:ಗೂಗಲ್ ಮ್ಯಾಪ್ಸ್)


  ಒಟ್ಟಿನಲ್ಲಿ ಈ ವಿಜ್ಞಾನ ಕೇಂದ್ರ ಹೆಸರಿಗೆ ತಕ್ಕಂತೆ ವಿನೋದದ ಜತೆಗೆ ವಿಜ್ಞಾನ ಕಲಿಸುವ ಕೇಂದ್ರವಾಗಿದ್ದು, ಉತ್ತರ ಕನ್ನಡ ಪ್ರವಾಸಕ್ಕೆ ಹೋಗೋ ಶಾಲಾ ಮಕ್ಕಳಿಗಂತೂ ಯೂಸ್ ಫುಲ್ ಟೂರ್ ಆಗೋದ್ರಲ್ಲಿ ಎರಡು ಮಾತಿಲ್ಲ.


  ವರದಿ: ದೇವರಾಜ್ ನಾಯ್ಕ್, ಕಾರವಾರ

  Published by:ಗುರುಗಣೇಶ ಡಬ್ಗುಳಿ
  First published: