Uttara Kannada: 2 ಸಾವಿರಕ್ಕಿಂತ ಕಡಿಮೆ ಹಣಕ್ಕೆ ಅದ್ಭುತ ಕೃಷಿ ಉಪಕರಣ ತಯಾರಿಸಿದ ವಿದ್ಯಾರ್ಥಿಗಳು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿದ್ದ ಸೈಕಲ್​ಗೆ ಹಗುರವಾದ ಬ್ಲೇಡ್​ಗಳನ್ನು ಸಿಕ್ಕಿಸಿ ಹ್ಯಾಂಡಲ್ ಹಿಂಭಾಗಕ್ಕೆ ಕೂರಿಸಿದ್ರು. ನಂತರ ಒಂದು ಡಬ್ಬಿಯನ್ನು ವೆಲ್ಡ್ ಮಾಡಿ ಬ್ರೇಕ್ ವೈರ್ ಮೂಲಕ ಕೂರಿಗೆ ಮಾಡಿದ್ದಾರೆ.

  • News18 Kannada
  • 4-MIN READ
  • Last Updated :
  • Uttara Kannada, India
  • Share this:

    ಉತ್ತರ ಕನ್ನಡ: ಪುಟ್ಟದಾದ ಸೈಕಲ್. ಹಿಂದೊಂದು ಮುಂದೊಂದು ಕಪ್ಪು ಬಣ್ಣದ ಬಾಕ್ಸ್. ಬೆಲ್, ಬ್ರೇಕ್ ಇದ್ರೂ ಪೆಡಲ್ ಇಲ್ಲದ ಈ ಸೈಕಲ್ (Cycle) ಯೂಸ್ ಆಗೋದಾದ್ರೂ ಏನಕ್ಕೆ ಅಂತೀರಾ?  ಇವರು ಕಂಡುಹಿಡಿದಿರೋ ಈ ಸೈಕಲ್ ರೈತರ (Farmer's Tips) ಪಾಲಿನ ಫ್ರೆಂಡ್!  ಇದನ್ನ ಕಂಡುಹಿಡಿದವರಾದರೂ ಯಾರು ಅಂತೀರಾ? ಎಲ್ಲವನ್ನ ಹೇಳ್ತೀವಿ ನೋಡಿ.


    ಯೆಸ್, ಇಂತಹ ವಿಶಿಷ್ಟ ಮಾದರಿಯ ಸೈಕಲ್ ಕಂಡು ಹಿಡಿದಿರೋದು ಈ ಇಬ್ಬರು ವಿದ್ಯಾರ್ಥಿಗಳು ಮತ್ತು ಶಿಕ್ಷಕಿ. ಇವರು ಉತ್ತರ ಕನ್ನಡದ ಕುಮಟಾದ ಹೆಗಡೆ ಗ್ರಾಮದ ಮೊರಾರ್ಜಿ ವಸತಿ ನಿಲಯದ ಶಿಕ್ಷಕಿ ಮಧುರಾ ದೇಸಾಯಿ ಹಾಗೂ ಆದರ್ಶ್ ಹಾಗೂ ಪುನೀತ್ .


    ಹೇಗೆ ತಯಾರಿಸಿದ್ರು ಗೊತ್ತಾ?
    ಈ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿದ್ದ ಸೈಕಲ್​ಗೆ ಹಗುರವಾದ ಬ್ಲೇಡ್​ಗಳನ್ನು ಸಿಕ್ಕಿಸಿ ಹ್ಯಾಂಡಲ್ ಹಿಂಭಾಗಕ್ಕೆ ಕೂರಿಸಿದ್ರು. ನಂತರ ಒಂದು ಡಬ್ಬಿಯನ್ನು ವೆಲ್ಡ್ ಮಾಡಿ ಬ್ರೇಕ್ ವೈರ್ ಮೂಲಕ ಕೂರಿಗೆ ಮಾಡಿದ್ದಾರೆ.


    ಈ ಯಂತ್ರ ಕೆಲಸ ಮಾಡೋದು ಹೀಗೆ
    ಈ ಗಾಡಿ ಮುಂದೆ ಹೋದ ಹಾಗೆ ಮಣ್ಣನ್ನು ಅಗೆಯುತ್ತಾ ಸಾಗುತ್ತೆ. ನಂತರ ಆ ಭಾಗದಲ್ಲಿ ಕೂರಿಗೆಯಿಂದ ಬೀಜ ಉದುರಿಸುವಂತೆ ಮಾರ್ಪಾಡು ಮಾಡಲಾಗಿದ್ದು, ಹಿಂದೆ ಇಟ್ಟಿರುವ ಪ್ಲೇಟ್ ಮಣ್ಣನ್ನು ಹದ ಮಾಡುತ್ತೆ. ಇದಕ್ಕೆಲ್ಲ 2000 ರೂಪಾಯಿ ಒಳಗೆ ಖರ್ಚು ಆಗಿದೆ ಎನ್ನುವುದು ವಿಶೇಷ.


    ಅತ್ಯುತ್ತಮ ವಿಜ್ಞಾನ ಮಾದರಿಯೆಂಬ ಹೆಗ್ಗಳಿಕೆ
    ಈ ಮಕ್ಕಳು ಹಾಗೂ ಶಿಕ್ಷಕಿಗೆ ಇದನ್ನು ಸ್ವಯಂಚಾಲಿತ ಉಪಕರಣವನ್ನಾಗಿಸುವ ಗುರಿಯಿದೆ. ಅದರ ಕುರಿತು ಪ್ಲ್ಯಾನಿಂಗ್ ಕೂಡ ಶುರುವಾಗಿದೆ. ಸದ್ಯದ ಮಟ್ಟಿಗೆ ಈ ಸಾಧನ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅತ್ಯುತ್ತಮ ವಿಜ್ಞಾನ ಮಾದರಿಯಾಗಿ ಆಯ್ಕೆಯಾಗಿದೆ. ರಾಜ್ಯದ ಉತ್ತಮ ವಿಜ್ಞಾನ ಮಾದರಿಗಳಲ್ಲಿ ಒಂದು ಎಂಬ ಮೆಚ್ಚುಗೆ ಪಡೆದಿದೆ.


    ಇದನ್ನೂ ಓದಿ: Karwar: ಗಣೇಶನಿಗೆ ಸಂಭ್ರಮದ ಪೂಜೆ; ಇದ್ಯಾವ ಚೌತಿ ಅಂತೀರಾ?


    ಈ ಇಬ್ಬರೂ ವಿದ್ಯಾರ್ಥಿಗಳು ರೈತಾಪಿ ಕುಟುಂಬದಿಂದ ಬಂದವರು. ಹೀಗಾಗಿ ಅವರಿಗೆ ಈ ಐಡಿಯಾ ಹೊಳೆದಿದ್ರೆ, ನಂತರ ವಿಜ್ಞಾನ ಶಿಕ್ಷಕಿ ಮಧುರಾ ಮೇಡಂ ಈ ಮಾದರಿಯನ್ನು ಸಿದ್ಧಪಡಿಸಿದ್ದಾರೆ. ಈ ಮೂವರು ಸೇರಿ ಮಾಡಿದ ಸಾಧನವನ್ನು ಮಾನವ ಚಾಲಿತವಾಗಿ ತೋಟಗಳಲ್ಲಿ ಬಳಸಬಹುದಾಗಿದೆ. ಯಾವುದೇ ಇಂಧನ ಬಳಸದ ಮಾಲಿನ್ಯ ಮಾಡದ ಈ ಯಂತ್ರ ನಮಗೆ ದೈಹಿಕ ವ್ಯಾಯಾಮವನ್ನೂ ಒದಗಿಸುತ್ತದೆ.




    ಇದನ್ನೂ ಓದಿ: Jodukere Hanuman: ಜೋಡುಕೆರೆಯ ಮಾರುತಿಯ ಜೋಪಾನ ಮಾಡುತ್ತಿರುವ ತಾಯಂದಿರು‌!


    ಒಟ್ಟಿನಲ್ಲಿ ಕೃಷಿಗೆ ಪೂರಕವಾದ ಈ ಉಪಕರಣ ಇನ್ನಷ್ಟು ಅಭಿವೃದ್ಧಿಗೊಂಡು ರೈತರ ಪಾಲಿಗೆ ಉತ್ತಮ ಸಾಧನವಾಗಲಿ ಅನ್ನೋದು ನಮ್ಮ ಆಶಯ ಕೂಡಾ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು