• Home
  • »
  • News
  • »
  • uttara-kannada
  • »
  • Uttara Kannada: ಟ್ರಾಫಿಕ್ ರೂಲ್ಸ್ ಫಾಲೋ ಮಾಡಿಸಲು ರಸ್ತೆಯಲ್ಲೇ ನಾಟಕ!

Uttara Kannada: ಟ್ರಾಫಿಕ್ ರೂಲ್ಸ್ ಫಾಲೋ ಮಾಡಿಸಲು ರಸ್ತೆಯಲ್ಲೇ ನಾಟಕ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ರಾಜ್ಯದ 30 ಜಿಲ್ಲೆಗಳ 50 ತಾಲೂಕುಗಳನ್ನು ಆಯ್ದುಕೊಂಡು ಅಲ್ಲಿನ ಬಸ್ ನಿಲ್ದಾಣಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಪ್ರಾಧಿಕಾರವು ನಿರ್ಧರಿಸಿದೆ. ಅದಕ್ಕಾಗಿ ಬೀದಿ ನಾಟಕವನ್ನ ಹಮ್ಮಿಕೊಂಡಿದೆ.

  • Share this:

    ಉತ್ತರ ಕನ್ನಡ: ಬಸ್ ಸ್ಟ್ಯಾಂಡಲ್ಲಿ ಪೆಂಡಾಲು, ಮೈಕ್ ಸದ್ದು. ಸುತ್ತಲೂ ಸುತ್ತುವರಿದು ನೋಡ್ತಿರೋ ಜನ. ಏನಿದು ಸ್ಪೆಷಲ್ ಈವೆಂಟ್? (Special Event) ಜನ ಮುಗಿ ಬಿದ್ದು ನೋಡ್ತಿರೋ ಈ ಶೋ ಆದ್ರೂ ಏನು? ಯೆಸ್, ಪೆಂಡಾಲ್ ಒಳಹೊಕ್ಕರೆ ಕಾಣಸಿಗೋದು ಮಾತ್ರ ಬೀದಿ ನಾಟಕದ (Street Play) ದೃಶ್ಯಗಳು.

    ಹೀಗೆ ಕಲಾವಿದರು ಬೀದಿ ನಾಟಕದ ಮೂಲಕ ಜನರ ಮನಸ್ಸಿಗೆ ನಾಟುವಂತೆ ತೋರ್ಪಡಿಸುತ್ತಿರುವ ಈ ನಾಟಕದ ಪ್ರಾಯೋಜಕರು ಕರ್ನಾಟಕ ರಸ್ತೆ ಸುರಕ್ಷತಾ ಪ್ರಾಧಿಕಾರ.


    ಬೀದಿ ನಾಟಕದಿಂದ ಪಾಸಿಟಿವ್ ಪರಿಣಾಮ
    ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಡಿ ತೋರಿಸುತ್ತಿರುವ ನಾಟಕವಿದು. ಮದ್ಯಪಾನ, ಅಮಲು ಪದಾರ್ಥಗಳನ್ನ ಸೇವಿಸಿ ವಾಹನ ಚಲಾಯಿಸಿದರೆ ಆಗುವ ಪರಿಣಾಮ, ಕುಟುಂಬದ ಮೇಲೆ ಅದ್ರಿಂದ ಆಗುವ ಆಘಾತಗಳನ್ನ ಬೀದಿ ನಾಟಕದ ಕಲಾವಿದರು ತೋರಿಸಿಕೊಟ್ಟರು. ಕಲಾವಿದರ ಅಭಿನಯವಂತೂ ಜನರ ಮನಸ್ಸನ್ನ ನಾಟಿತ್ತು. ಹೀಗಾಗಿ ಜನರು ಬೀದಿ ನಾಟಕವನ್ನ ತದೇಕಚಿತ್ತದಿಂದ ಆಸ್ವಾದಿಸಿದರು.


    ಇದನ್ನೂ ಓದಿ: Uttara Kannada: ಬೌದ್ಧ ಭಿಕ್ಕುಗಳಿಂದ 49 ದಿನ ಶ್ರಾದ್ಧ ಆಚರಣೆ!


    ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರದರ್ಶನ
    ಕಲಘಟಗಿ ಬಸ್ ನಿಲ್ದಾಣದ ಬಳಿ ನಡೆದ ಈ ನಾಟಕವನ್ನ ಸಾರ್ವಜನಿಕರು ವೀಕ್ಷಿಸಿ ರಸ್ತೆ ಅಪಘಾತಕ್ಕೆ ಕಾರಣವಾಗುವ ವಿಚಾರಗಳ ಬಗ್ಗೆ ತಿಳಿದುಕೊಂಡರು. ಹೀಗೆ ರಾಜ್ಯದ 30 ಜಿಲ್ಲೆಗಳ 50 ತಾಲೂಕುಗಳನ್ನು ಆಯ್ದುಕೊಂಡು ಅಲ್ಲಿನ ಬಸ್ ನಿಲ್ದಾಣಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಪ್ರಾಧಿಕಾರವು ನಿರ್ಧರಿಸಿದೆ. ಅದಕ್ಕಾಗಿ ಬೀದಿ ನಾಟಕವನ್ನ ಹಮ್ಮಿಕೊಂಡಿದೆ.




    ಹಿನ್ನೆಲೆ ಸಂಗೀತ, ವೇದಿಕೆ ಹಿಂದೆ ದೊಡ್ಡದಾದ ಪರದೆ ಹೀಗೆ ಅಚ್ಚುಕಟ್ಟಾಗಿ ನಾಟಕ ತಂಡವು ತಮ್ಮ ಪ್ರದರ್ಶನವನ್ನು ನೀಡುತ್ತಿದೆ.


    ಇದನ್ನೂ ಓದಿ: Marikamba Devi: ಮಾರಿ ಜಾತ್ರೆಗೂ ಮುನ್ನ ಹೊರಬೀಡು ಆಚರಣೆಯ ರಹಸ್ಯ!


    ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಈ ಪ್ರಯತ್ನದಿಂದ ಸಾರ್ವಜನಿಕರು ಜಾಗರೂಕತೆಯ ಚಾಲನೆ ಮಾಡುವಂತಾದರೆ ಪ್ರಾಧಿಕಾರದ ಈ ಪ್ರಯತ್ನವು ಅರ್ಥ ಪೂರ್ಣವಾಗುತ್ತದೆ ಅನ್ನೋದರಲ್ಲಿ ಸಂಶಯವಿಲ್ಲ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: