• Home
 • »
 • News
 • »
 • uttara-kannada
 • »
 • Volleyball Tournament: 10 ಜಿಲ್ಲೆಗಳ 150 ಪುರುಷ, 40 ಮಹಿಳಾ ವಾಲಿಬಾಲ್ ಆಟಗಾರರ ಜಿದ್ದಾಜಿದ್ದಿ!

Volleyball Tournament: 10 ಜಿಲ್ಲೆಗಳ 150 ಪುರುಷ, 40 ಮಹಿಳಾ ವಾಲಿಬಾಲ್ ಆಟಗಾರರ ಜಿದ್ದಾಜಿದ್ದಿ!

X
ಇಲ್ಲಿ ನೋಡಿ ಮ್ಯಾಚ್

"ಇಲ್ಲಿ ನೋಡಿ ಮ್ಯಾಚ್"

ಅಂತಿಮವಾಗಿ ಸುಮಾರು 25 ಆಟಗಾರರನ್ನು ಆಯ್ಕೆ ಮಾಡಲಾಯ್ತು. ಈ ಆಟಗಾರರಿಗೆ ಕಲಬುರಗಿಯಲ್ಲಿ 20 ದಿನಗಳ ತರಬೇತಿ ಸಿಗಲಿದೆ. ಅಲ್ಲದೇ, ಮಧ್ಯಪ್ರದೇಶದಲ್ಲಿ ಕರ್ನಾಟವನ್ನು ಪ್ರತಿನಿಧಿಸುವ ಅವಕಾಶವೂ ದೊರೆಯಲಿದೆ.

 • News18 Kannada
 • Last Updated :
 • Uttara Kannada, India
 • Share this:

  ಶಿರಸಿ: ಚೆಂಡಿನ ಸದ್ದಿನ ಪ್ರತಿಧ್ವನಿ, ರಂಗೇರಿದ ಕೋರ್ಟ್! ನೆಲ ನಡುಗಿಸುವ ವಾಲಿಬಾಲ್ ಹೊಡೆತ. ಒಬ್ಬರಿಗಿಂತ ಒಬ್ಬರದ್ದು ರಣೋತ್ಸಾಹ.. ಎದೆ ಝಲ್ಲೆನಿಸುವ ರೋಮಾಂಚಕ ಆಟ. ಇದು ವಾಲಿಬಾಲ್ ರಣಕಲಿಗಳು ಅವಕಾಶಕ್ಕಾಗಿ ನಡೆಸಿದ ಅದ್ಭುತ ಸ್ಪರ್ಧೆ! ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಿರಸಿಯ ಮಾರಿಕಾಂಬಾ ಕ್ರೀಡಾಂಗಣದಲ್ಲಿ (Marikamba Ground Sirsi) ವಾಲಿಬಾಲ್ ಆಟದ Volleyball Tournament) ಕಲರವದ ಝಲಕ್ ಇದು.


  10 ಜಿಲ್ಲೆಗಳ ಸ್ಪರ್ಧಿಗಳು
  ಕರ್ನಾಟಕ ರಾಜ್ಯ ತಂಡಕ್ಕೆ ನಡೆಸುವ ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಒಟ್ಟು 10 ಜಿಲ್ಲೆಗಳ 150 ಪುರುಷ ಹಾಗೂ 40 ಮಹಿಳಾ ಆಟಗಾರ್ತಿಯರು ವಾಲಿಬಾಲ್ ಕೋರ್ಟ್​ನಲ್ಲಿ ಕಸರತ್ತು ನಡೆಸಿದರು. ಕಲಬುರಗಿ, ಮಂಗಳೂರು, ಬೆಂಗಳೂರು ಹಾಗೂ ತಮಿಳುನಾಡು ರೆಫ್ರಿಗಳು ಆಟಗಾರರನ್ನು ಆಯ್ಕೆ ಮಾಡಿಕೊಂಡರು.


  ಇದನ್ನೂ ಓದಿ: Uttara Kannada: ಅಯ್ಯಪ್ಪನ ದರ್ಶನಕ್ಕೆ ಹೊರಟ ನಾಯಿ! ಪಾದಯಾತ್ರಿಗಳ ಜೊತೆ ಶಬರಿಮಲೆಗೆ ಪಯಣ


  ಅಂತಿಮವಾಗಿ ಸುಮಾರು 25 ಆಟಗಾರರನ್ನು ಆಯ್ಕೆ ಮಾಡಲಾಯ್ತು. ಈ ಆಟಗಾರರಿಗೆ ಕಲಬುರಗಿಯಲ್ಲಿ 20 ದಿನಗಳ ತರಬೇತಿ ಸಿಗಲಿದೆ. ಅಲ್ಲದೇ, ಮಧ್ಯಪ್ರದೇಶದಲ್ಲಿ ಕರ್ನಾಟವನ್ನು ಪ್ರತಿನಿಧಿಸುವ ಅವಕಾಶವೂ ದೊರೆಯಲಿದೆ.


  ಇದನ್ನೂ ಓದಿ: Best Travel Plan: ಬಾವಿಯೊಳಗಿನ ಕೋಟೆಯಲ್ಲಿ 3 ಸುರಂಗ! ಇದು ಗೋಳಬಾವಿಯ ರಹಸ್ಯ!


  ಒಟ್ಟಾರೆ ಕರ್ನಾಟಕದ ವಾಲಿಬಾಲ್ ಕಲಿಗಳ ಆಯ್ಕೆ ಪ್ರಕ್ರಿಯೆಗೆ ಶಿರಸಿ ಸಾಕ್ಷಿಯಾಯ್ತು. ಕ್ರೀಡಾಸಕ್ತರು, ಶಿರಸಿಯ ನಾಗರಿಕರು ಪಂದ್ಯವನ್ನು ಕಣ್ತುಂಬಿಕೊಂಡು ಖುಷಿಪಟ್ರು.


  ವರದಿ: ಎ.ಬಿ.ನಿಖಿಲ್, ಮುಂಡಗೋಡ್

  Published by:ಗುರುಗಣೇಶ ಡಬ್ಗುಳಿ
  First published: