Sri Ramalingeshwara Temple: ಶಿವನ ಎದುರೇ ಶ್ರೀಮನ್ನಾರಾಯಣ! ನೀವೂ ದರ್ಶನ ಪಡೆಯಿರಿ

Uttara Kannada Temples: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿರುವ ಶ್ರೀರಾಮಲಿಂಗೇಶ್ವರ ದೇಗುಲವು ಹಚ್ಚ ಹಸಿರಿನ ನಡುವೆ ಇರುವ ನೆಮ್ಮದಿಯ ತಾಣ. ದಟ್ಟ ಅರಣ್ಯದ ನಡುವೆ ನಿಂತಿರುವ ಶಿವನು ತನ್ನ ಭಕ್ತರನ್ನು ಹರಸಿ ಹಾರೈಸುತ್ತಾನೆ. ಬನ್ನಿ ನೀವೂ ದರ್ಶನ ಪಡೆಯಿರಿ.

ಹಸಿರು ಪರಿಸರದ ತಾಣ

"ಹಸಿರು ಪರಿಸರದ ತಾಣ"

 • Share this:
  ಉತ್ತರ ಕನ್ನಡ: ಸುತ್ತಲೂ ಹಚ್ಚಹಸಿರಿನ ದಟ್ಟ ಕಾಡು.. ಅದರ ನಡುವಿನ ಸಣ್ಣ ದಾರಿಯಲ್ಲಿ ಸ್ವಲ್ಪ ದೂರ ಮುಂದೆ ಹೋದ್ರೆ ನಡುವೆ ಹೊಳೆಯುವ ಕಲ್ಲು ಮಂಟಪ.. ಒಳಗೆ ಕುಳಿತವನು ಶಾಂತಮೂರ್ತಿ ಪರಶಿವ! (Lord Shiva) ಮನಸ್ಸಿನೊಳಗೆ ಅದೇನೇ ಗೊಂದಲ, ಆತಂಕ, ಭಯ ಇರ್ಲಿ… ಇಲ್ಲಿ ಕಾಲಿಟ್ಟೊಡನೆ ಅದೆಲ್ಲವೂ ಕ್ಷಣ ಮಾತ್ರದಲ್ಲಿ ಮಾಯ.. ಮನಸ್ಸು ಇನ್ನಷ್ಟು ಪ್ರಶಾಂತವಾಗಿ ನೆಮ್ಮದಿಯ ತಾಣವಾಗಿ ಬಿಡುತ್ತದೆ.. ಅಂದ್ಹಾಗೆ ಹೀಗೆ ಗೊಂಡಾರಣ್ಯದೊಳಗೇ ಇದ್ದು ಭಕ್ತರನ್ನು ಕಾಯುತ್ತಿರುವವನು ಶ್ರೀ ರಾಮಲಿಂಗೇಶ್ವರ.. ಉತ್ತರ ಕನ್ನಡ ಜಿಲ್ಲೆಯ (Uttara Kannada) ಬೆಡಸಗಾವಿಯಲ್ಲಿ ನೆಲೆನಿಂತ ಆ ದೇವನೇ ಅವನೇ ಶ್ರೀ ರಾಮಲಿಂಗೇಶ್ವರ (Sri Ramalingeshwara Templ) ಬನ್ನಿ ನೀವೂ ದರ್ಶನ ಪಡೆಯಿರಿ. 

  ಬಿಜ್ಜಳದೇವ ಕಟ್ಟಿಸಿದ ಗುಡಿ
  ಅದು 1163ನೇ ಇಸವಿ.. ಮಹಾನ್ ಶಿವಭಕ್ತ ಬಿಜ್ಜಳದೇವ ಶಿವನಿಗೊಂದು ಗುಡಿ ಕಟ್ಟಿಸಿದ. ಆಗ ಈ ಪ್ರದೇಶ ಕಳಚೂರಿನ ಚಾಲುಕ್ಯರ ಬಿಜ್ಜಳ ದೇವನ ಉಪರಾಜಧಾನಿ ಆಗಿತ್ತಂತೆ. ಈ ದೇವಸ್ಥಾನದಲ್ಲಿ ಶಿವ ತನ್ನ ಪರಿವಾರ ದೇವತೆಗಳ ಸಮೇತ ನೆಲೆಸಿದ್ದಾನೆ. ಇಡೀ ದೇವಾಲಯದ ಒಳ ಹೊರಗೆಲ್ಲಾ ಅದ್ಭುತ ಶಿಲ್ಪಕಲೆಗಳಿವೆ.

  ಇದನ್ನೂ ಓದಿ: Vijayapura: ಕೈಬೀಸಿ ಕರೆಯುವ ಪುಟ್ಟಪುಟ್ಟ ಜಲಪಾತಗಳು! ವೀಡಿಯೋ ನೋಡಿ

  ಬರುವ ಭಕ್ತರಿಗೆ ಮನಸ್ಸಿನ ಜೊತೆ ಕಣ್ಣಿಗೂ, ಕಲೆಯ ಒಲವಿಗೂ ಇದು ಹೇಳಿ ಮಾಡಿಸಿದಂಥಾ ಸ್ಥಳ. ಇನ್ನು ಶಿವನ ಎದುರೇ ಶ್ರೀಮನ್ನಾರಾಯಣ ಇದ್ದಾನೆ. ವಾಸುಕಿ ಪರಿವಾರ ಸಮೇತ ನಾಗಬನವಿದೆ, ರಾಮ ಬಾಣ ಬಿಟ್ಟಲ್ಲಿ ಸೂರ್ಯನಾರಾಯಣನ ಮೂರ್ತಿಯಿದೆ. ಸುತ್ತಲಿನ ದಟ್ಟ ಅಡವಿ ಕುರಿತು ಜನರಲ್ಲಿ ಭಕ್ತಿ ಭಾವ ಇದ್ದೇ ಇದೆ.

  ದೇವರ ಕಾಡು ಅಂತಲೇ ಪ್ರಸಿದ್ಧಿ
  ಅಂದಹಾಗೆ ಈ ಇಡೀ ದೇಗುಲ ಕಲ್ಲಿನಲ್ಲೇ ಕಟ್ಟಿರೋದು. ಗರ್ಭಗುಡಿಯಲ್ಲಿ ಶಿವ, ಪ್ರಾಂಗಣದಲ್ಲಿ ಪರಿವಾರ ದೇವತೆಗಳಾದ ಗಣೇಶ ಹಾಗೂ ದುರ್ಗಾ ಪರಮೇಶ್ವರಿಯ ಸುಂದರ ಕಲ್ಲಿನ ಚಿಕ್ಕ ಮೂರ್ತಿಯಿದೆ. ಇಲ್ಲೇ ಇರುವ ನಂದಿ ಎಲ್ಲರಿಗೂ ಭಕ್ತಿ ಭಾವ ಹೆಚ್ಚಿಸುತ್ತೆ.ಇಷ್ಟೆಲ್ಲಾ ದೇವರ ಮೂರ್ತಿಗಳು ಹೀಗೆ ದಟ್ಟ ಕಾಡಿನಲ್ಲಿ ಇರೋದ್ರಿಂದ ಇದನ್ನು ದೇವರ ಕಾಡು ಅಂತಲೂ ಕರೀತಾರೆ.

  ಇದನ್ನೂ ಓದಿ: Vijayapura: ಸೈನಿಕನ ಸೈಕಲ್ ಯಾತ್ರೆ! ಬೆಂಗಳೂರು ಟು ಕಾರ್ಗಿಲ್ ಪಯಣ ಹೀಗಿತ್ತು ನೋಡಿ

  Ramalingeshwara Temple
  ಶ್ರೀ ರಾಮಲಿಂಗೇಶ್ವರ ದೇಗುಲದ ದರ್ಶನ ಪಡೆಯಲು ಹೀಗೆ ಬನ್ನಿ! (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್) 

  ಶ್ರೀ ರಾಮಲಿಂಗೇಶ್ವರ ದೇಗುಲದ ದರ್ಶನ ಪಡೆಯಲು ಹೀಗೆ ಬನ್ನಿ! (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಶಿವ ಭಕ್ತರ ನೆಚ್ಚಿನ ತಾಣ
  ಊರೂರಿಂದ ಭಕ್ತರು ಶಿವನನ್ನು ಕಾಣೋಕೆ ಹುಡುಕಿ ಬರ್ತಾರೆ. ಎಲ್ಲರಿಗೂ ಪ್ರತಿದಿನ ಅನ್ನ ಸಂತರ್ಪಣೆಯ ರೂಪದಲ್ಲಿ ದೇವರ ಪ್ರಸಾದ ಸಿಗುತ್ತದೆ. ಶಿವರಾತ್ರಿಯ ದಿನವಂತೂ ಕೇಳೋದೇ ಬೇಡ, ಪಲ್ಲಕ್ಕಿ ಉತ್ಸವ, ಜಾತ್ರೆ, ಜಾಗರಣೆ ಭಜನೆಯ ಅದ್ದೂರಿಯಾಗಿ ನಡೆಯುತ್ತದೆ. ಹೆಚ್ಚು ಜನಸಂದಣಿ ಇರದೇ ಇರೋದೇ ಈ ದೇವಸ್ಥಾನವನ್ನು ಭಕ್ತರ ಪಾಲಿಗೆ ಆಪ್ತ ಎನಿಸುವಂತೆ ಮಾಡಿರೋದು. ನೆಮ್ಮದಿಯ ತಾಣವಾದ ಇಲ್ಲಿ ಮನಸ್ಸು ಮತ್ತಷ್ಟು ಖುಷಿಪಡುತ್ತದೆ. ಈ ಪುರಾತನ ತೀರ್ಥ ಕ್ಷೇತ್ರಕ್ಕೆ ನೀವು ಒಮ್ಮೆ ತಪ್ಪದೇ ಬನ್ನಿ, ಶಿರಸಿ, ಮುಂಡಗೋಡಿನಿಂದ ಬಸ್ ಇದ್ದರೂ ಮತ್ತೆ ನಡೆಯಬೇಕಾಗುತ್ತೆ. ಸ್ವಂತ ವಾಹನ ತರೋದು ಬೆಸ್ಟ್.

  ವರದಿ: ಎ. ಬಿ. ನಿಖಿಲ್
  Published by:guruganesh bhat
  First published: