ಬೃಹತ್ ಗಾತ್ರದ ಒಲೆ, ಮೇಲೊಂದು ಕಪ್ಪಗಿನ ಬಾಣಲೆ, ಇನ್ನೇನು ಮೂಗಿಗೆ ಬಡಿಯುವ ಪರಿಮಳ. ಇದುವೇ ಆಲೆಮನೆ ಬೆಲ್ಲದ (Special Jaggery) ತಯಾರಿಯ ಶೈಲಿ.. ಆದ್ರೀಗ ಬೆಲ್ಲ ತಯಾರಕರ ಪಾಲಿಗೆ ಬೆಲ್ಲದ ಅಚ್ಚು ಕಹಿಯಾಗಿದೆ. ಸಹಜವಾಗಿಯೇ ಕಬ್ಬು ಬೆಳೆಗಾರರಲ್ಲೂ ನಿರಾಶೆ ಉಂಟು ಮಾಡಿದೆ. ಆಲೆಮನೆ ಬೆಲ್ಲದ ಅರಮನೆಯ ಶೈಲಿಯೇ ಹೀಗೆ. ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಿರಸಿ, ಸಿದ್ಧಾಪುರ, ಯಲ್ಲಾಪುರ ಭಾಗದಲ್ಲಿ ಆಲೆಮನೆಗೆ (Alemane) ಇನ್ನೂ ಜನರು ಸಿದ್ಧತೆ ನಡೆಸುತ್ತಿದ್ದರೆ, ಶಿರಸಿಯ (Alemane In Sirsi) ಬಿಸಿಲುಕೊಪ್ಪದಲ್ಲಿ ಈಗಾಗಲೇ ಆಲೆಮನೆ ಕಾರ್ಯಾರಂಭಗೊಂಡಿದೆ.
ಹಿಂದೆ ಎತ್ತು ಗಾಣವಿದ್ದ ಜಾಗದಲ್ಲಿ ಇಂದು ಯಂತ್ರವೊಂದು ರೀಪ್ಲೇಸ್ ಆಗಿದ್ಬಿಟ್ರೆ, ಮಿಕ್ಕಿದ್ದೆಲ್ಲವೂ ಪಕ್ಕಾ ಸಾವಯವ ರೀತಿಯಲ್ಲಿ ಬೆಲ್ಲ ತಯಾರಾಗ್ತಿದೆ. ಆಲೆಮನೆಯಲ್ಲಿ ತಯಾರಿಸೋ ಈ ಬೆಲ್ಲದ ಅಚ್ಚನ್ನ ನೋಡೋದೇ ಒಂದು ಚೆಂದ.
ಸಾವಯವ ಬೆಲ್ಲ ತಯಾರಿಸೋದು ಹೀಗೆ
ಈ ಆಲೆಮನೆಗೆ ಸ್ವಾಗತ ಕೋರುವುದು ಕಬ್ಬಿನ ರಸ ಹಿಂಡಿ ತೆಗೆಯುವ ಯಂತ್ರ. ಅಲ್ಲಿ ಬಂದ ಕಬ್ಬಿನ ಹಾಲು ಸುಮಾರು 600 ಲೀಟರ್ ಕಬ್ಬಿನಹಾಲು ಹಿಡಿಯುವ ಬಾಣಲೆಗೆ ಧುಮುಕುತ್ತವೆ. ಅಲ್ಲಿ ಬೃಹದಾಕಾರದ ಒಲೆಗಳಲ್ಲಿ ಕಬ್ಬಿನ ಹಾಲು ಕುದಿ ಬಂದ್ಮೇಲೆ ಕೊನೆಗೆ ತನ್ನ ಹರಿಯುವ ರೂಪ ಕಳೆದುಕೊಂಡು ಚೂರು ಗಟ್ಟಿಯಾಗಿ ಬೆಲ್ಲದ ರೂಪಕ್ಕೆ ಬರುತ್ತೆ. ಅದನ್ನ ನಂತರ ತಣಿಸಿ ಕ್ಯಾನ್ಗಳಿಗೆ ತುಂಬಲಾಗುತ್ತೆ. ಒಂದು ಸಲದ ಈ ಪ್ರಕ್ರಿಯೆಯಲ್ಲಿ 600 ಲೀಟರ್ ಕಬ್ಬಿನಹಾಲಿಗೆ ಒಂದೂವರೆ ಕ್ವಿಂಟಾಲ್ ಶುದ್ಧ ಸಾವಯವ ಬೆಲ್ಲ ಸಿಗುತ್ತೆ.
ಇದನ್ನೂ ಓದಿ: PVC Pipe Gun: ಮಂಗನನ್ನು ಓಡಿಸೋಕೆ ಪೈಪ್ ಗನ್! ಕೃಷಿಕರೇ, ವಿಡಿಯೋ ನೋಡಿ
ಬೆಲೆ ಇಳಿಕೆಯ ಕಹಿ
ಆದ್ರೆ ಹಿಂದೆ 25 ಕೆಜಿಯ ಕ್ಯಾನ್ ಬೆಲ್ಲ 2,250 ರೂಪಾಯಿಗೆ ಮಾರಾಟವಾದ್ರೆ, ಈಗ ಅದೇ ಕ್ಯಾನ್ ಸಾವಿರಕ್ಕೆ ಬಂದು ನಿಂತಿದೆ. ಕಬ್ಬು ಬೆಳೆಗಾರರು ಇದರ ವಿರುದ್ಧ ಧ್ವನಿ ಎತ್ತಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸಾಂಪ್ರದಾಯಿಕವಾಗಿ ಬೆಲ್ಲ ತಯಾರಿಸುವವರಿಗೆ, ಕಬ್ಬು ಬೆಳೆಗಾರರಿಗೆ ಸಿಹಿ ಕೊಡಬೇಕಿದ್ದ ಇವುಗಳು ಕಹಿಯಾಗಿ ಪರಿಣಮಿಸಿದೆ.
ಇದನ್ನೂ ಓದಿ: Uttara Kannada: ಕಡಿಮೆ ಖರ್ಚು, ಹೆಚ್ಚು ಲಾಭ! ಕೃಷಿಕರೇ ಈ ಪಂಪ್ ಬಳಸಿ ನೋಡಿ
ಅದೇನೆ ಇರಲಿ ಸಾಂಪ್ರದಾಯಿಕ ಬೆಲ್ಲ ಹೆಚ್ಚು ಆರೋಗ್ಯಪೂರ್ಣ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರ. ಹಾಗಾಗಿ ಇಂತಹ ಆಲೆಮನೆ ಬೆಲ್ಲಗಳನ್ನು ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಸಾರ್ವಜನಿಕರು ಮುಂದಾಗಬೇಕಿದೆ.
ನೀವೂ ಆಲೆಮನೆಗೆ ಹೋಗ್ಬೇಕಂದ್ರೆ ಇವರನ್ನು ಸಂಪರ್ಕಿಸಬಹುದು: ಮಹಾಬಲೇಶ್ವರ ಹೆಗಡೆ: 94821 11064
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ