ಉತ್ತರ ಕನ್ನಡ: ಪೈಪ್ ಎಳೆಯುತ್ತಾ ಕಡಲ ಮಕ್ಕಳು ಸಾಗಿರೋದು ಸಮುದ್ರದೆಡೆಗೆ (Sea). ಅಲೆಗಳ ಅಬ್ಬರದ ನಡುವೆಯೂ ವೃತ್ತಾಕಾರದ ಈ ಪೈಪ್ ತೇಲಿ ಬಿಡುತ್ತಿರೋದು ಸುಮ್ಮನೇ ಅಲ್ಲ. ಇಡೀ ಬದುಕಿಗೇ ಹೊಸ ತಿರುವಿನ ಆರಂಭವಿದು. ಹಾಗಿದ್ರೆ ಏನಿದು ಪೈಪ್ ಅಳವಡಿಕೆ ಅಂತೀರಾ? ಅದರ ಕುರಿತು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
ಪೈಪ್ ಅಳವಡಿಸಿ ಮೀನು ಪೋಷಣೆ
ಉತ್ತರ ಕನ್ನಡ ಜಿಲ್ಲೆಯ ಕುಮಟಾದ ವನ್ನಳ್ಳಿಯ ವಾಣಿಜ್ಯ ಬಂದರಿನ ಬಳಿ ಕಂಡು ಬರುತ್ತಿರುವ ದೃಶ್ಯ. ಕೆನರೀಸ್ ಮೀನುಗಾರಿಕಾ ಅಭಿವೃದ್ಧಿ ಸಂಘ, ರಾಷ್ಟ್ರೀಯ ಸಾಗರ ಸಂಶೋಧನಾ ಸಂಸ್ಥೆಯೊಂದಿಗೆ ಕೈ ಜೋಡಿಸಿ ಮೀನು ಹೆಚ್ಚಳಕ್ಕೆ ಈ ಪ್ರಯತ್ನಕ್ಕೆ ಕೈ ಹಾಕಿದೆ. ಕಡಲಿನ ನಡುವೆ ಆರುವರೆ ಅಡಿ ಆಳದ ಬಲೆಯಲ್ಲಿ ಮೀನು ಮರಿಗಳನ್ನು ಬಿಟ್ಟು ಪೋಷಿಸಲಾಗುತ್ತಿದೆ. ಸುತ್ತಲೂ ಈ ಪೈಪ್ಗಳನ್ನ ಅಳವಡಿಸಿ ಮೀನುಗಳನ್ನ ಪೋಷಿಸಲಾಗುತ್ತಿದೆ. ಉಂಡೆಯ ಆಕಾರದಲ್ಲಿ ತೇಲುವ, ಮುಳುಗುವ ಫಿಶ್ ಫುಢ್ ಅನ್ನು ಆಹಾರವಾಗಿ ನೀಡಲಾಗುತ್ತೆ. ಈ ಪಂಜರ ಮೀನು ಕೃಷಿಯಲ್ಲಿ ಮರಿಗಳು ಯಾವುದೇ ತೊಂದ್ರೇನೆ ಇಲ್ದೇ ಬೆಳೆಯುತ್ತಿವೆ.
Uttarakhand: ಡ್ಯಾನ್ಸ್ ಮಾಡುತ್ತಾ ಕುಸಿದು ಬಿದ್ದ ತಂದೆ, ಮಗಳ ಮದುವೆಯ ಹಿಂದಿನ ದಿನವೇ ದಾರುಣ ಸಾವು!
ಸುಲಭ ಮೀನುಗಾರಿಕೆ ಸಾಧ್ಯ
ಮೇಲ್ಗಡೆ ಪ್ಲಾಸ್ಟಿಕ್ ಬಳಸಿದರೆ, ಆಳದಲ್ಲಿ ನೈಲಾನ್ ಬಲೆ ಉಪಯೋಗಿಸಿಕೊಂಡು ಮೀನು ಸಾಕಣೆ ಮಾಡಲಾಗುತ್ತಿದೆ. ವೇಗವಾಗಿ ಬೆಳೆಯುವ ಮೀನುಗಳು ಎಂಟು ತಿಂಗಳಲ್ಲಿ ದುಪ್ಪಟ್ಟಾಗುತ್ತವೆ. ಆಗ ಮೀನುಗಾರರಿಗೆ ಮತ್ತೆಲ್ಲೂ ಹೋಗಿ ಮೀನು ಹಿಡಿಯಬೇಕಾದ ಪ್ರಸಂಗವೂ ಇರೋದಿಲ್ಲ. ತಿಂಗಳುಗಟ್ಟಲೆ ಸಮುದ್ರದಲ್ಲೇ ಇದ್ದು ಲಾಸ್ ಮಾಡಿಕೊಳ್ಳುವ ಪ್ರಮೇಯವೂ ಎದುರಾಗೋದಿಲ್ಲ.
ಪಂಜರದಲ್ಲಿವೆ ಈ ಮೀನುಗಳು
ಸದ್ಯದ ಮಟ್ಟಿಗೆ ಸೀ ಬಾಸ್, ಕೊಂಬಿಯಾ, ಪೊಂಪ್ಯಾನೋ ಮರಿಗಳನ್ನು ಇಲ್ಲಿ ಸಾಕಲಾಗ್ತಿದೆ. ಗ್ರೂಫರ್, ಸೀ ಬಾಸ್, ಸ್ಕಾಪರ್ ಮೀನುಗಳನ್ನು ಹೋಟೆಲ್ ಉದ್ಯಮದಲ್ಲಿ ಬಳಸಲಾಗುತ್ತದೆ. ಅದರಲ್ಲೂ ಚೀನಾ, ಸಿಂಗಾಪುರ, ತೈವಾನ್ನಂತಹ ದೇಶಗಳ ರೆಸ್ಟೋರೆಂಟ್ ನಲ್ಲಿ ಪಂಜರ ಮೀನಿನ ಕೃಷಿಯಿಂದ ಬೆಳೆದ ಈ ಮೀನುಗಳಿಗೆ ಆದ್ಯತೆ ಇದೆ.
Uttara Kannada: ಅಯ್ಯಪ್ಪನ ದರ್ಶನಕ್ಕೆ ಹೊರಟ ನಾಯಿ! ಪಾದಯಾತ್ರಿಗಳ ಜೊತೆ ಶಬರಿಮಲೆಗೆ ಪಯಣ
ರಾಜ್ಯದಲ್ಲಿ ಮೊದಲ ಪ್ರಯತ್ನ
ಪ್ರಾಯೋಗಿಕವಾಗಿ ಅರಬ್ಬೀ ಸಮುದ್ರದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಯತ್ನ ನಡೆದಿದ್ದು ಅಂಡಮಾನ್ ಹಾಗೂ ಆಂಧ್ರದಲ್ಲಿ ಯಥೇಚ್ಛವಾಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಹೊಸ ವಿಧಾನದೊಂದಿಗೆ ಮೀನುಗಾರರು ಮೀನುಗಳಿಗೆ ಸಮುದ್ರದಲ್ಲೇ ಆಶ್ರಯ ನೀಡಿ ತಮ್ಮ ಜೋಳಿಗೆ ತುಂಬಿಕೊಳ್ಳುವ ತವಕದಲ್ಲಿದ್ದಾರೆ. ಕಡಲ ಮಕ್ಕಳ ಈ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಅನ್ನೋ ಹಾರೈಕೆ ನಮ್ಮದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ