• Home
  • »
  • News
  • »
  • uttara-kannada
  • »
  • Swarnavalli Mutt: ಪರಿಸರ ಮಂತ್ರ ಜಪಿಸುವ ಹಸಿರು ಸ್ವಾಮೀಜಿ! ಸ್ವರ್ಣವಲ್ಲಿ ಮಠದ ಇಂಟರೆಸ್ಟಿಂಗ್ ಕಥೆ

Swarnavalli Mutt: ಪರಿಸರ ಮಂತ್ರ ಜಪಿಸುವ ಹಸಿರು ಸ್ವಾಮೀಜಿ! ಸ್ವರ್ಣವಲ್ಲಿ ಮಠದ ಇಂಟರೆಸ್ಟಿಂಗ್ ಕಥೆ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಉತ್ತರ ಕನ್ನಡದ ಕೈಗಾ ಅಣು ಸ್ಥಾವರ, ಬೇಡ್ತಿ-ವರದಾ ಯೋಜನೆಯ ವಿರುದ್ಧ ಧ್ವನಿ ಎತ್ತಿದವರು ಇದೇ ಸ್ವಾಮೀಜಿ.

  • News18 Kannada
  • Last Updated :
  • Uttara Kannada, India
  • Share this:

    ಶಿರಸಿ: ಎಲ್ಲಿ ನೋಡಿದರೂ ಹಚ್ಚ ಹಸಿರ ರಸದೌತಣ. ಹಲವು ಬಗೆಯ ಗಿಡ ಮರಗಳು, ನೋಡಲು ಅದೊಂಥರಾ ಸೋಜಿಗ. ಇದು ಯಾವುದೋ ಕೃಷಿ ಯೂನಿವರ್ಸಿಟಿ ಅಲ್ಲ. ಬದಲಿಗೆ, ಘಟ್ಟದ ತಪ್ಪಲಲ್ಲಿ ವಿಶಾಲವಾಗಿರುವ ಶ್ರೀ ಸ್ವರ್ಣವಲ್ಲಿ (Shri Swarnavalli Mutt) ಮಹಾಸಂಸ್ಥಾನ! ಈ ಅದ್ಭುತ ಚೆಲುವಿನ ನಿರ್ಮಾತೃ ಸ್ವರ್ಣವಲ್ಲಿ ಸಂಸ್ಥಾನದ ಪೀಠಸ್ಥ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ. ಹೀಗಾಗಿಯೇ ನೋಡಿ ಇವರಿಗೆ ನಡೆದಾಡುವ ಹಸಿರು ಸ್ವಾಮಿಗಳು ಅಂತಲೇ ಕರೀತಾರೆ. ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೇ ಪರಿಸರ ಹೋರಾಟಗಳಲ್ಲೂ ಸಕ್ರಿಯರಾಗಿದ್ದಾರೆ.  ಪರಿಸರ ಹೋರಾಟದ ಮೂಲಕ ಹೊಸ ಸಂಚಲನ ಸೃಷ್ಟಿಸಿದ ಸಂತರ ಸಾಲಿನಲ್ಲಿ ಗಂಗಾಧರೇಂದ್ರ ಸ್ವಾಮೀಜಿಗಳದ್ದು (Sonda Gangadharendra Saraswati Mutt ಅಗ್ರಸ್ಥಾನ. ಉತ್ತರ ಕನ್ನಡದ ಕೈಗಾ ಅಣು ಸ್ಥಾವರ (Kaiga Nuclear Plantation) ಬೇಡ್ತಿ-ವರದಾ ಯೋಜನೆಯ ವಿರುದ್ಧ ಧ್ವನಿ ಎತ್ತಿದವರು ಇದೇ ಸ್ವಾಮೀಜಿ.


    ಇಷ್ಟೇ ಅಲ್ಲ, ಮಾದಕ ವ್ಯಸನಗಳಿಗೆ ಬಲಿಯಾದ ಯುವಕರನ್ನು ಆ ಜಾಲದಿಂದ ಹೊರ ತರಲು ಶಿಬಿರಗಳನ್ನೂ ಸ್ವರ್ಣವಲ್ಲಿ ಮಠ ಏರ್ಪಡಿಸುತ್ತೆ. ಬುಡಕಟ್ಟು ಕುಣುಬಿ ಹಾಗೂ ಸಿದ್ಧಿ ಸಮುದಾಯಗಳಿಗೆ ಮೌಲಿಕ ಶಿಕ್ಷಣ ಹಾಗೂ ಧಾರ್ಮಿಕ ಶಿಕ್ಷಣ ಒದಗಿಸಲಾಗುತ್ತೆ.


    ಹತ್ತಾರು ಸಾಮಾಜಿಕ ಕಾರ್ಯ
    ಸರ್ಕಾರವೇ ಪರಿಹಾರಕ್ಕೆ ತಡುಕಾಡುವಾಗ ಗುಡ್ಡ ಕುಸಿತದ ಪ್ರದೇಶಗಳಲ್ಲಿ ನಿರಾಶ್ರಿತರಾಗಿರುವ ಜನರಿಗೆ ಆರ್ಥಿಕ ಸಹಾಯ ಒದಗಿಸಿದ್ದಾರೆ. ಹೀಗೆ ಹತ್ತಾರು ಸಾಮಾಜಿಕ ಕಾರ್ಯಗಳಿಂದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರನ್ನು ಎಲ್ರೂ ಗೌರವಿಸ್ತಾರೆ.


    ಇದನ್ನೂ ಓದಿ: Sweet Potato: ಅಂಕೋಲಾ ಗೆಣಸು ಉಪವಾಸಕ್ಕೆ ಫೇಮಸ್ಸು! ಆರೋಗ್ಯಕ್ಕಂತೂ ಭಾರೀ ಬೆಸ್ಟು


    ಕೃಷಿ ಜಯಂತಿ ಆಯೋಜನೆ
    ಪ್ರಕೃತಿ ಅಂದ್ರೆ ಗಂಗಾಧರೇಂದ್ರ ಸ್ವಾಮೀಜಿಗಳಿಗೆ ಎಲ್ಲಿಲ್ಲದ ಪ್ರೀತಿ. ಹೀಗಾಗಿಯೇ ನೋಡಿ ವಿದೇಶಿ ತಳಿಯ ಗಿಡಗಳೂ ಇಲ್ಲಿದ್ದಾವೆ. ಅಲ್ಲದೇ, ಆರಾದ್ಯದೈವ ನರಸಿಂಹ ದೇವರ ಜಯಂತಿಯನ್ನು ಕೃಷಿ ಜಯಂತಿ ಎಂದು ಆಯೋಜಿಸಿ ಸುತ್ತಮುತ್ತಲಿನ ಎಲ್ಲಾ ಕೃಷಿಕರಿಗ ಪ್ರೋತ್ಸಾಹ ಕೊಡಲಾಗಿದೆ. ಜೊತೆಗೆ ಉಚಿತ ವೇದ ಶಿಕ್ಷಣ ಶಾಲೆ ಹಾಗೂ ಶಿಬಿರಗಳನ್ನೂ ಇಲ್ಲಿ ನಡೆಯುತ್ತವೆ.


    ಇದನ್ನೂ ಓದಿ: Positive Story: ಕೊಂಕಣಿ ಮಾತನಾಡುವ ಅಣಶಿ ಮಕ್ಕಳಿಗೆ ಕನ್ನಡ ಕಲಿಸುವ ಶಿಕ್ಷಕಿ; ಸೌಲಭ್ಯವೇ ಇರದೆಡೆ ಸಾಹಸ


    ಗೋಶಾಲೆ, ಪ್ರತಿಭಾ ಪುರಸ್ಕಾರ
    ಇಷ್ಟಕ್ಕೆ ಇವರ ಸಮಾಜಮುಖಿ ಕಾರ್ಯ ನಿಂತಿಲ್ಲ. ಕರಡೊಳ್ಳಿಯಲ್ಲಿ ಗೋಶಾಲೆಯನ್ನು ಸ್ಥಾಪಿಸಿ ಗೋವುಗಳ ಆರೈಕೆ ಮಾಡುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಾತಿ ಮತ ನೋಡದೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಸೋಂದಾದಲ್ಲಿ ಪ್ರತೀ ವರ್ಷ ಇತಿಹಾಸ ಸಮ್ಮೇಳನ. ಹೀಗೆ ಒಂದಲ್ಲ ಒಂದು ಸಾಮಾಜಿಕ ಕಾರ್ಯಗಳು ಇಲ್ಲಿ ನಡೆಯುತ್ತಲೇ ಇರ್ತವೆ.


    Sonda Swarnavalli Muth
    ಸೋಂದಾ ಸ್ವರ್ಣವಲ್ಲಿ ಮಠಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ನೀವೂ ಸ್ವರ್ಣವಲ್ಲಿ ಮಠಕ್ಕೆ ಬರಬೇಕಂದ್ರೆ ಶಿರಸಿಗೆ ಬಂದು ಯಾರನ್ನೇ ಕೇಳಿದ್ರೂ ದಾರಿ ತೋರಿಸ್ತಾರೆ!


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: