• Home
  • »
  • News
  • »
  • uttara-kannada
  • »
  • Uttara Kannada: ತಾಯಿಯನ್ನು ಸದಾ ಜೀವಂತವಿಟ್ಟ ಮಗ, ಅವ್ವನ ನೆನಪು ಎಂಬ ಮಮತೆಯ ಮ್ಯೂಸಿಯಂ

Uttara Kannada: ತಾಯಿಯನ್ನು ಸದಾ ಜೀವಂತವಿಟ್ಟ ಮಗ, ಅವ್ವನ ನೆನಪು ಎಂಬ ಮಮತೆಯ ಮ್ಯೂಸಿಯಂ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ತಮ್ಮ ತಾಯಿ ಕೊನೆಗಾಲದಲ್ಲಿ ಮಲಗುತ್ತಿದ್ದ ದಿಂಬು, ಬೀಸುತ್ತಿದ್ದ ಬೀಸಣಿಕೆ, ಕೂರುತ್ತಿದ್ದ ಕುರ್ಚಿಯನ್ನೂ ಸಹ ಬಿಡದೇ ಎಲ್ಲವನ್ನೂ ಹಾಗೆ ಇಟ್ಟಿದ್ದಾರೆ ಈ ಮಗ.

  • News18 Kannada
  • Last Updated :
  • Uttara Kannada, India
  • Share this:

    ಹಳೆಯ ಸೀರೆ, ರವಿಕೆ, ನಾಣ್ಯ, ವೀಣೆ, ಗ್ರಾಮಾಫೋನು, ಲಾಟೀನು! ಇದೇನು ಹಳೆ ವಸ್ತುಗಳ ಸಂಗ್ರಹಾಲಯ ಅಂದ್ಕೊಂಡ್ರಾ? ಇದು ವ್ಯಕ್ತಿಯೊಬ್ಬರು ತಾಯಿಯ ನೆನಪಲ್ಲಿ ರಚಿಸಿದ ಚಿಕ್ಕ ಸಂಗ್ರಹಾಲಯ. ಅಮ್ಮನ ನೆನಪಲ್ಲಿ ಒಡಮೂಡಿದ ಸುಂದರ ಲೋಕವಿದು. ತಾಯಿ ಮಗನ (Mother-Son Relationship) ಸಂಬಂಧ ಎಂದಿಗೂ ಮುಗಿಯದ್ದು. ತಾಯಿಯ ನೆನಪು ಸದಾಕಾಲ ನಮ್ಮ ಜೊತೆಗಿರಬೇಕು ಅನ್ನೋದು ಉತ್ತರ ಕನ್ನಡ (Uttara Kannada News) ಅಂಕೋಲಾದ ಈ ಸಾಹಿತಿಯ ಮನದಿಚ್ಛೆ.


    ಅಂಬಾರಕೊಡ್ಲು ಗ್ರಾಮದಲ್ಲಿ ನೆಲೆಸಿರುವ ಸಾಹಿತಿ ವಿಷ್ಣು ನಾಯ್ಕ್ ಅಭಿಲಾಷೆ. ಅದಕ್ಕಾಗಿಯೇ ತಮ್ಮ ತಾಯಿ ಅಗಲಿದರೂ ಅವರ ನೆನಪಿಗಾಗಿ ತಾಯಿ ಉಪಯೋಗಿಸುತ್ತಿದ್ದ ಉಡುಪು, ಪರಿಕರಗಳನ್ನು ಹಾಗೂ ಇತರೆ ವಸ್ತುಗಳನ್ನು ಅಷ್ಟೇ ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದಾರೆ.




    ಇದನ್ನೂ ಓದಿ: Rudra Veena: ಭಾರತದ 8 ರುದ್ರವೀಣೆಯ ವಾದಕರಲ್ಲಿ ಉತ್ತರ ಕನ್ನಡದ ಇವರೂ ಒಬ್ಬರು!


    ಅಮ್ಮ ಬಳಸುತ್ತಿದ್ದ ಎಲ್ಲ ವಸ್ತುಗಳೂ ಇಲ್ಲಿವೆ
    ಅದಕ್ಕಾಗಿಯೇ ಒಂದು ಕೊಠಡಿಯನ್ನು ಮೀಸಲಿಟ್ಟಿದ್ದಾರೆ ವಿಷ್ಣು ನಾಯ್ಕ್. ತಮ್ಮ ತಾಯಿಯು ಕೊನೆಗಾಲದಲ್ಲಿ ಮಲಗುತ್ತಿದ್ದ ದಿಂಬು, ಬೀಸುತ್ತಿದ್ದ ಬೀಸಣಿಕೆ, ಕೂರುತ್ತಿದ್ದ ಕುರ್ಚಿಯನ್ನೂ ಸಹ ಬಿಡದೇ ಎಲ್ಲವನ್ನೂ ಹಾಗೆ ಇಟ್ಟಿದ್ದಾರೆ.


    ಇದನ್ನೂ ಓದಿ: Uttara Kannada: ಅಯ್ಯಪ್ಪ ಭಕ್ತರ ಕೆಂಡಸೇವೆ! ಇಲ್ಲಿದೆ ನೋಡಿ ವಿಡಿಯೋ


    ವಿಷ್ಣು ನಾಯ್ಕ್ ಅವರ ತಾಯಿ ಬುದವಂತಿ ನಾಯ್ಕ್ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದ್ದರು. ಆದರೆ ತಾಯಿಯ ಕುರಿತು ಅವರ ಪ್ರೀತಿ ಎಳ್ಳಷ್ಟೂ ಕಡಿಮೆಯಾಗಿಲ್ಲ. ಹಾಗಾಗಿ ತಾಯಿಯು ಉಪಯೋಗಿಸುತ್ತಿದ್ದ ವಸ್ತುಗಳಿಗೆ ಸ್ಥಾನ ಕಲ್ಪಿಸಿ ಆ ಮೂಲಕ ತಾಯಿಯನ್ನು ಕಾಣುತ್ತಿದ್ದಾರೆ. ಜೊತೆಗೆ ತನ್ನ ಹೆತ್ತಬ್ಬೆ ಮೇಲಿನ ಪ್ರೀತಿ ತೋರಿಸ್ತಿದ್ದಾರೆ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: