ಟ್ರಿಣ್ ಟ್ರಿಣ್..ಎದ್ರಿಗೆ ಬಂದೋರೆಲ್ಲಾ ಸೈಡಿಗೆ ನಿಲ್ರೀ! ಸೈಕಲ್ ಏರಿ ಹೀಗೆ ಮುಂದೆ ಮುಂದೆ ಸಾಗ್ತಿರೋ ಯುವತಿ, ಹಿಂದೂ ಯಾರಿಲ್ಲ, ಮುಂದೂ ಯಾರಿಲ್ಲ, ಆದ್ರೆ ಆತ್ಮವಿಶ್ವಾಸದ ಪ್ರವಾಹವೇ ಇನ್ನೂ ಫಾಸ್ಟ್ ಆಗಿ ಈಕೆ ಸೈಕಲ್ ತುಳಿಯುವಂತೆ ಮಾಡ್ತಿದೆ. ಈ ಯುವತಿ ಹೀಗೆ ದಣಿವರಿಯದೇ ಸೈಕಲ್ ಓಡಿಸ್ತಿರೋದಾದ್ರೂ ಯಾಕಂತೀರಾ? ನಾವ್ ಹೇಳ್ತೀವಿ ಕೇಳಿ. ಹೀಗೆ ಸೈಕಲ್ ಓಡಿಸ್ತಿರೋ ಈ ಯುವತಿಯ ಹೆಸ್ರು ಆಶಾ ಮಾಲ್ವಿ ಅಂತ. ಮಧ್ಯ ಪ್ರದೇಶದ (Madhya Pradesh) ರಾಜಗಢ ಜಿಲ್ಲೆಯ ಈಕೆ ಸೈಕಲ್ ಯಾತ್ರೆಗೆ (Solo Cycle Travel) ಹೊರಟಿರೋ ಕಾರಣ ಏನಂತ ತಿಳಿದ್ರೆ ನೀವು ಹುಬ್ಬೇರಿಸ್ತೀರಿ!
ಒಬ್ಳೇ ಸೈಕಲ್ ಓಡಿಸೋ ಮೂಲಕ ಭಾರತ ಒಂಟಿ ಮಹಿಳೆಯರಿಗೆ ಸೇಫಾಗಿದೆ ಅಂತ ಇಡೀ ಜಗತ್ತಿಗೇ ಸಾರುವ ಪ್ರಯತ್ನ ಇವರದ್ದು. ನವೆಂಬರ್ 1 ರಂದು ಮಧ್ಯಪ್ರದೇಶದ ಭೋಪಾಲ್ನಿಂದ ಸೈಕಲ್ ಯಾತ್ರೆಯನ್ನ ಆರಂಭಿಸಿದ್ದು, ಈಗಾಗಲೇ ಸುಮಾರು 3,700 ಕಿ.ಮೀ. ಸೈಕಲ್ ತುಳಿದಿದ್ದಾರೆ. ಗೋವಾ ಮಾರ್ಗವಾಗಿ ಕರ್ನಾಟಕ ಪ್ರವೇಶಿಸಿ ಕಾರವಾರದ ಮೂಲಕ ಮುಂದೆ ಸಾಗ್ತಿದ್ದಾರೆ.
ಇದನ್ನೂ ಓದಿ: Robot: 7ನೇ ಕ್ಲಾಸ್ ಬಾಲಕ ರೋಬೋಟ್ ತಯಾರಿಸಿದ! ಇದು ಸೇನೆಗೂ ಸಹಾಯ ಮಾಡುತ್ತೆ!
ಮಹಿಳೆಯರ ರಕ್ಷಣೆಯೇ ಪ್ರಯಾಣದ ಉದ್ದೇಶ
ಆಶಾ ತಾವು ತೆರಳುವ ಪ್ರದೇಶಗಳಲ್ಲಿ ಶಾಲೆ- ಕಾಲೇಜುಗಳಿಗೆ ಭೇಟಿ ನೀಡ್ತಾರೆ. ಭಾರತದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ. ಮಹಿಳೆಯರ ರಕ್ಷಣೆಯ ಕಾಳಜಿಯನ್ನ ಭಾರತ ಹೊಂದಿದೆ ಅಂತ ಜಾಗೃತಿ ಮೂಡಿಸ್ತಾರೆ. ಸದ್ಯ ಕಾರವಾರಕ್ಕೆ ಆಗಮಿಸಿದ ಅವರನ್ನ ಇಲ್ಲಿನ ತಹಶೀಲ್ದಾರ್ ಭೇಟಿಯಾಗಿ ಅಭಿನಂದಿಸಿದ್ರು.
ಇದನ್ನೂ ಓದಿ: Soil Prasad: ಇಲ್ಲಿ ಮಣ್ಣೇ ಪ್ರಸಾದ! ಮಕ್ಕಳ ಹಠ ಕಡಿಮೆ ಆಗೋಕೆ ಈ ದೇಗುಲದ ಮಣ್ಣು ತಿನಿಸುವ ಪೋಷಕರು!
ಯುವತಿಯ ಧೈರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ
ಒಟ್ಟಿನಲ್ಲಿ ಒಬ್ಬಂಟಿಯಾಗಿ ಸೈಕಲ್ ಯಾತ್ರೆ ಹೊರಟಿರುವ ಆಶಾ ಅವ್ರ ಧೈರ್ಯಕ್ಕೆ ಮೆಚ್ಚಲೇಬೇಕು. ಯುವಜನರಿಗೆ ಮಾದರಿಯಾಗಬಲ್ಲ ಅವರ ಈ ಕಾರ್ಯಕ್ಕೆ ನಾವು ಕೂಡ ಶುಭ ಹಾರೈಸೋಣ ಅಲ್ವಾ?
ವರದಿ: ದೇವರಾಜ್ ನಾಯ್ಕ್, ಕಾರವಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ