ಹಸಿರು ಪರಿಸರದಲ್ಲಿ ಪುಟ್ಟ ದೇಗುಲ, ಚಿಕ್ಕ ಗರ್ಭಗುಡಿ, ಅಲ್ಲೇ ಕೈಯಲ್ಲಿ ಮಣ್ಣು ತಿಂತಿರೋ ಮಕ್ಕಳು! ಅರೇ! ಇದೇನಿದು ಈ ಪುಟ್ಟ ಪುಟ್ಟ ಮಕ್ಕಳು ಮಣ್ಣು ತಿಂತಿರೋದ್ಯಾಕೆ ಅಂತೀರಾ? ಅಲ್ಲೇ ಇದೆ ನೋಡಿ ವಿಶೇಷ. ಉತ್ತರ ಕನ್ನಡ ಜಿಲ್ಲೆಯ (Uttara Kannada Temple's) ಕುಮಟಾದ ಶ್ರೀ ಕಂಚಿಕಾ ಪರಮೇಶ್ವರಿ ದೇವಸ್ಥಾನದಲ್ಲೇ (Kumta Kanchika Parameshwari Temple) ಈ ರೀತಿ ಮಣ್ಣನ್ನ ಪ್ರಸಾದದ ರೂಪದಲ್ಲಿ ಕೊಡಲಾಗುತ್ತೆ. ಇಲ್ಲಿ ತಮ್ಮ ಮಕ್ಕಳನ್ನ ಕರೆತರುವ ಪೋಷಕರು ಪ್ರಸಾದದ ರೂಪದಲ್ಲಿ ಕೊಂಚ ಮಣ್ಣನ್ನು (Soil Prasad) ತಿನ್ನಿಸ್ತಾರೆ. ಹೀಗೆ ಪ್ರಸಾದದ ಮಣ್ಣು ತಿಂದರೆ ಮಕ್ಕಳು ವೃಥಾ ಹಠ ಹಿಡಿಯಲ್ವಂತೆ, ಮಣ್ಣು ತಿನ್ನೋ ಹವ್ಯಾಸ ಬಿಟ್ಬಿಡ್ತಾರಂತೆ ಅನ್ನೋ ನಂಬಿಕೆಯಿದೆ.
ಈ ದೇವಸ್ಥಾನದ ಮಣ್ಣಿಗೆ ಇಂಥದ್ದೊಂದು ಗುಣವಿದೆ ಅನ್ನೋ ನಂಬಿಕೆಯ ಬೆನ್ನಟ್ಟಿ ಹೋದ್ರೆ ರೋಮಾಂಚಕ ಕಥೆಗಳೇ ತೆರೆದುಕೊಳ್ಳುತ್ವೆ. ಕಂಚಿಕಾ ಪರಮೇಶ್ವರಿ ದೇಗುಲ ಕಲಭರಾಜರ್ಷಿಯಿಂದ ಸ್ಥಾಪಿತವಾಗಿದೆಯಂತೆ. ಸದ್ಯ ಪೂಜಿಸುತ್ತಿರೋ ದೇವಿಯನ್ನು ಕಂಚಿಯಿಂದ ತಂದು ಪ್ರತಿಷ್ಠಾಪಿಸಲಾಗಿದ್ಯಂತೆ.
ರಾಜನೇ ದೇವರಾದ!
ಬರೀ ದೇವಿಯಷ್ಟೇ ಅಲ್ಲ ರಾಜನೂ ಕೂಡ ತನ್ನ ಜೀವಿತದ ಕೊನೆಕೊನೆಗೆ ದೇವರೇ ಆಗಿಹೋಗಿದ್ದ ಅಂತಾರೆ ಸ್ಥಳೀಯರು. ಕಾವಲು ದೈವವಾಗಿ, ಕಾರಣಿಕ ಶಕ್ತಿಯಾಗಿ ಈ ರಾಜನು ಜನಮಾನಸದಲ್ಲಿ ಬೆರೆತುಹೋಗಿದ ಅನ್ನುತ್ತೆ ಇತಿಹಾಸ.
ಇದನ್ನೂ ಓದಿ: Success Story: ಕಿರಾಣಿ ಅಂಗಡಿ ಮಾಲೀಕ ವೇಟ್ ಲಿಫ್ಟಿಂಗ್ನಲ್ಲಿ ಬಂಗಾರಕ್ಕೆ ಮುತ್ತಿಟ್ರು!
ಕಲಭೇಶ್ವರ ದೇವಸ್ಥಾನದ ಮಹಿಮೆ
ರಾಜನಿಗೆ ಎಂದೇ ಗುಡಿ ಕಟ್ಟಿ ಅದನ್ನು ಕಡಬಜ್ಜನ ಗುಡಿ, ಕಲಭೇಶ್ವರ ದೇವಸ್ಥಾನ ಎಂದು ಕರೆಯಲಾಯ್ತು. ಮುಂದೆ ಕಲಭರಾಯನ ಅಭಿಷೇಕದಿಂದ ನೆನೆದ ಇಲ್ಲಿನ ಮಣ್ಣಿನಿಂದ ಮಕ್ಕಳ ಹಲವು ರೋಗ ಶಮನವಾಗುತ್ತದೆ ಅನ್ನೋ ನಂಬಿಕೆ ಬೆಳೆದುಬಂತಂತೆ.
ಇದನ್ನೂ ಓದಿ: Manjguni Temple: ಅಕ್ಷರಶಃ ವೈಕುಂಠವಾದ ಕರ್ನಾಟಕದ ತಿರುಪತಿ, 708 ವರ್ಷಗಳ ನಂತರ ಮತ್ತೆ ಭೂದಾನ
ದೇವಸ್ಥಾನಕ್ಕೆ ಹೀಗೆ ಬನ್ನಿ (ಚಿತ್ರಕೃಪೆ:ಗೂಗಲ್ ಮ್ಯಾಪ್ಸ್)
ಯಶೋದೆಯ ಕೃಷ್ಣನಿಂದ ಹಿಡಿದು ಈಗಲೂ ಮಕ್ಕಳ ಮಣ್ಣು ತಿನ್ನೋ ಸಮಸ್ಯೆಗೆ ಪರಿಹಾರ ಕಂಡ್ಕೊಳ್ಳೋಕೆ ಭಕ್ತರು ಈ ಕಂಚಿಕಾ ಪರಮೇಶ್ವರಿ ದೇಗುಲ ಹುಡುಕಿ ಬರ್ತಾರೆ. ನೀವೂ ಕುಮಟಾಕ್ಕೆ ಬಂದು ಅಘನಾಶಿನಿ ಬಸ್ಸು ಹತ್ತಿ ಬಾಡದ ಕಾಂಚಿಕಾ ಪರಮೇಶ್ವರಿ ಬಂದರೆ ಪುಣ್ಯಭೂಮಿಯಾಗಿರೋ ಈ ಮಣ್ಣಿನ ಕ್ಷೇತ್ರ ತಲುಪಬಹುದಾಗಿದೆ. ನೀವೂ ಒಮ್ಮೆ ಇತ್ತ ಬಂದ್ರೆ ಈ ವಿಶೇಷ ದೇಗುಲ ದರ್ಶನ ಮಾಡಬಹುದು ನೋಡಿ!
ವರದಿ: ಎ.ಬಿ.ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ