• Home
 • »
 • News
 • »
 • uttara-kannada
 • »
 • Snake Video: ಹೆಬ್ಬಾವು, ಕಾಳಿಂಗ, ನಾಗರ ಎಲ್ಲಾ ಹಾವುಗಳಿಗೂ ಇವರೇ ಫ್ರೆಂಡ್!

Snake Video: ಹೆಬ್ಬಾವು, ಕಾಳಿಂಗ, ನಾಗರ ಎಲ್ಲಾ ಹಾವುಗಳಿಗೂ ಇವರೇ ಫ್ರೆಂಡ್!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಅದೆಂತಹದ್ದೇ ಸಮಯವಿರಲಿ, ಪವನ್ ನಾಯ್ಕ್ ಕರೆ ಬರುತ್ತಲೇ ತಮ್ಮ ಕಿಟ್ ಹಿಡಿದು ಹೊರಟುನಿಲ್ತಾರೆ. ಹೀಗೆ ಇದುವರೆಗೆ ಸುಮಾರು 5 ಸಾವಿರದಷ್ಟು ಹಾವುಗಳನ್ನು ರಕ್ಷಿಸಿದ್ದಾರೆ.

 • News18 Kannada
 • Last Updated :
 • Uttara Kannada, India
 • Share this:

  ಕಾರವಾರ: ಹಾವಿನ ಜೊತೆ ಸರಸವಾಡ್ತಾರೆ, ರಕ್ಷಣೆ ಮಾಡಿ ಆಶ್ರಯ ಕಲ್ಪಿಸುತ್ತಾರೆ. ಅದೆಷ್ಟೇ ಭಯಂಕರವಾಗಿ ಬುಸುಗುಡುತ್ತಿದ್ದರೂ, ನಯವಾಗಿ ಅದನ್ನ ಚೀಲ ಸೇರಿಸ್ತಾರೆ. ಹೀಗೆ ಹಾವು ಮಾತ್ರವಲ್ಲ, ಅದೆಂತದ್ದೇ ಪ್ರಾಣಿಗಳಿದ್ರೂ ಅದರ ರಕ್ಷಣೆಗೆ (Snake Rescue In Uttara Kannada)  ಮುಂದಾಗೋ ಇವರ ಹೆಸರೇ ಸ್ನೇಕ್ ಪವನ್. ಉತ್ತರ ಕನ್ನಡದ (Uttara Kannada) ಕುಮಟಾದ ಬ್ಯಾಂಕ್ ಒಂದರ ಅಸಿಸ್ಟಂಟ್ ಮ್ಯಾನೇಜರ್ ಆಗಿರೋ ಪವನ್ ನಾಯ್ಕ್, ಪ್ರವೃತ್ತಿಯಲ್ಲಿ ಉರಗ ತಜ್ಞರು. ಅದೆಂತಹದ್ದೇ ಸಮಯವಿರಲಿ, ಪವನ್ ನಾಯ್ಕ್ ಕರೆ ಬರುತ್ತಲೇ ತಮ್ಮ ಕಿಟ್ ಹಿಡಿದು ಹೊರಟುನಿಲ್ತಾರೆ. ಹೀಗೆ ಇದುವರೆಗೆ ಸುಮಾರು 5 ಸಾವಿರದಷ್ಟು ಹಾವುಗಳನ್ನು (Snake Capture) ರಕ್ಷಿಸಿದ್ದಾರೆ. ಅದು ಹೆಬ್ಬಾವು, ಕಾಳಿಂಗ, ನಾಗರ ಹೀಗೆ ಯಾವುದೇ ಇರ್ಲಿ ರಕ್ಷಿಸಿ ಸುರಕ್ಷಿತ ತಾಣಕ್ಕೆ ಬಿಟ್ಟು ಬರ್ತಾರೆ.


  ಅಂದ್ಹಾಗೆ ಹಾವುಗಳಷ್ಟೇ ಅಲ್ಲ, ಚಿರತೆ, ಕಡವೆ, ಕೋತಿ, ನಾಯಿ ಹೀಗೆ ಹಲವು ಬಗೆಯ ಪ್ರಾಣಿಗಳನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ ಕುಮಟಾದ ಪವನ್. ಅದೆಷ್ಟೋ ಬಾರಿ ರಾತ್ರಿ, ಹಗಲೆನ್ನದೇ ರಿಸ್ಕ್ ತೆಗೆದುಕೊಂಡು ಕೆಲಸ ಮಾಡಿದ್ದೂ ಇದೆ. ಬಾವಿಗಿಳಿದು ಸರೀಸೃಪಗಳನ್ನು ರಕ್ಷಿಸಿದ್ದೂ ಇದೆ.


  ಇದನ್ನೂ ಓದಿ: Swarnavalli Mutt: ಪರಿಸರ ಮಂತ್ರ ಜಪಿಸುವ ಹಸಿರು ಸ್ವಾಮೀಜಿ! ಸ್ವರ್ಣವಲ್ಲಿ ಮಠದ ಇಂಟರೆಸ್ಟಿಂಗ್ ಕಥೆ


  ಎಲ್ಲಿಂದಲೇ ಫೋನ್ ಬರ್ಲಿ, ತಕ್ಷಣ ಸಿದ್ಧ
  ಬರೀ ಹಿಡಿಯುವುದಷ್ಟೆ ಅಲ್ಲ, ಅವುಗಳ ಬಗ್ಗೆ ಆಳ ಅಧ್ಯಯನ ಮಾಡಿ ಚಿಕಿತ್ಸೆಯನ್ನೂ ನೀಡ್ತಾರೆ. ಶಿರಸಿಯಿಂದಾಗಿರ್ಲಿ, ಭಟ್ಕಳದಿಂದಾಗಿರ್ಲಿ ಫೋನ್ ಬಂದ್ರೂ ಆ ಕ್ಷಣಕ್ಕೆ ಇವರು ಹೊರಡುತ್ತಾರೆ. ಇವರ ಈ ಸೇವೆಗೆ ಮನೆಮಂದಿ ಕೂಡಾ ಬೆಂಬಲವಾಗಿ ನಿಂತಿದ್ದಾರೆ.


  ಇದನ್ನೂ ಓದಿ: Jobs In Hubballi: ಹುಬ್ಬಳ್ಳಿಯಿಂದಲೇ ದೇಶ ರಕ್ಷಿಸೋಕೆ ಚಾನ್ಸ್! ಉತ್ತರ ಕರ್ನಾಟಕ ಜನರಿಗೆ ಸುವರ್ಣಾವಕಾಶ


  ಯಾವುದೇ ಫಲಾಪೇಕ್ಷೆಯಿಲ್ಲ
  ಹಾವು ರಕ್ಷಣೆ ವಿಚಾರದಲ್ಲಿ ಸ್ನೇಕ್ ಪವನ್ ಯಾವುದೇ ಫಲಾಪೇಕ್ಷೆ ಬಯಸೋದಿಲ್ಲ. ಒಟ್ಟಿನಲ್ಲಿ ಇವರ ಈ ಅಮೋಘ ಸೇವೆಗೆ ನಿಜಕ್ಕೂ ಹ್ಯಾಟ್ಸಾಪ್ ಹೇಳಲೇಬೇಕು.

  Published by:ಗುರುಗಣೇಶ ಡಬ್ಗುಳಿ
  First published: