Karwar: ಕಾರ್ಮಿಕ ಇಲಾಖೆ ಯೋಜನೆ ಪ್ರಚಾರಕ್ಕಾಗಿ ಹೊಸ ತಂತ್ರ, ಕಾರವಾರದಿಂದ ಬೆಂಗಳೂರಿನವರೆಗೂ ಸ್ಕೆಟಿಂಗ್!

ಕಾರವಾರದಿಂದ ಸುಮಾರು 530 ಕಿ.ಮೀ ದೂರದ ಬೆಂಗಳೂರಿನವರೆಗೆ ಸ್ವತಃ ಮಕ್ಕಳು ಸ್ಕೇಟಿಂಗ್ ಮೂಲಕ ತೆರಳಲಿದ್ದು, ದಾರಿಯುದ್ದಕ್ಕೂ ಬ್ಯಾನರ್ ಕರಪತ್ರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಬೆಂಗಳೂರಿನಲ್ಲಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಕ್ಕಳನ್ನು ಬರಮಾಡಿಕೊಳ್ಳಲಿದ್ದಾರೆ.

ಕಾರವಾರದಿಂದ ಬೆಂಗಳೂರಿನವರೆಗೂ ಸ್ಕೆಟಿಂಗ್

ಕಾರವಾರದಿಂದ ಬೆಂಗಳೂರಿನವರೆಗೂ ಸ್ಕೆಟಿಂಗ್

  • Share this:
ಕಾರವಾರ, ಉತ್ತರ ಕನ್ನಡ: ರಾಜ್ಯ ಕಾರ್ಮಿಕ ಇಲಾಖೆ (Labor Department) ಶ್ರಮಿಕರಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನ (Programs)  ಜಾರಿಗೊಳಿಸಿದೆ. ಯೋಜನೆಗಳನ್ನ (Project) ಸಮರ್ಪಕವಾಗಿ ಅರ್ಹರಿಗೆ ತಲುಪಿಸಲು ಪ್ರಯತ್ನಿಸುತ್ತಿರುವ ಇಲಾಖೆ ಇದೀಗ ವಿನೂತನ ಮಾದರಿಯಲ್ಲಿ ಜಾಗೃತಿಗೆ (Awareness) ಮುಂದಾಗಿದೆ. ಸ್ಕೇಟಿಂಗ್ (Skating) ವಿದ್ಯಾರ್ಥಿಗಳನ್ನ (Students) ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರವಾರದಿಂದ ಬೆಂಗಳೂರಿಗೆ (Karwar to Bengaluru) ಸ್ಕೇಟಿಂಗ್ ಮೂಲಕ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಪ್ರಚಾರ ಪಡಿಸಲು ಮುಂದಾಗಿದೆ. ಜತೆಗೆ ಪ್ರತಿ ಹಳ್ಳಿಗೂ ಕಾರ್ಮಿಕ ಇಲಾಖೆಯ ಯೋಜನೆ ತಲುಪಬೇಕು ,ಜಾಗೃತಿ ಆಗಬೇಕು ಎನ್ನುವ ನಿಟ್ಟಿನಲ್ಲಿ ಸ್ಕೇಟಿಂಗ್ ಮೂಲಕ ಕಾರವಾರದಿಂದ ಬೆಂಗಳೂರು ಅಭಿಯಾನ ಯಾತ್ರೆ ಕೈಗೊಳ್ಳಲಾಗಿದೆ.

ಕಾರ್ಮಿಕ ಇಲಾಖೆಯಿಂದ ಸ್ಕೆಟಿಂಗ್ ಮೂಲಕ ಜಾಗೃತಿ

ಹೌದು, ದಿನವಿಡಿ ದುಡಿದು ಕಷ್ಟದ ಜೀವನ ನಡೆಸುವ ಕಾರ್ಮಿಕರಿಗೆ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಅದನ್ನು ಸಮರ್ಪಕವಾಗಿ ತಲುಪಿಸಲು ಕೊಂಟ್ಯಾಂತರ ರೂಪಾಯಿ ವ್ಯಯಮಾಡಲಾಗುತ್ತದೆ. ಇಷ್ಟಾದರೂ ದುಡಿದು ತಿನ್ನುವ ಕಾರ್ಮಿಕ ವರ್ಗಕ್ಕೆ ಅದು ಸಮರ್ಪಕವಾಗಿ ತಲುಪುತ್ತಿಲ್ಲ. ಅಕ್ಷರ ಜ್ಞಾನ ಅಷ್ಟಾಗಿ ಬಾರದ ಕಾರ್ಮಿಕರು ಕೂಡ ಈ ಬಗ್ಗೆ ವಿಚಾರಿಸುವುದಿಲ್ಲ. ಆದರೆ ಕಾರ್ಮಿಕರಿಗೆ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಕಾರ್ಮಿಕ ಇಲಾಖೆಯ ಸವಲತ್ತುಗಳನ್ನು ಪಡೆಯುವ ನಿಟ್ಟಿನಲ್ಲಿ ಸ್ಕೇಟಿಂಗ್ ಮೂಲಕ ಜಾಗೃತಿ ಅಭಿಯಾನಕ್ಕೆ ಮುಂದಾಗಿದೆ.

ಕಾರವಾರದಿಂದ ಹೊರಟ ಸ್ಕೇಟಿಂಗ್ ರ್ಯಾಲಿ

ಕಾರವಾರದಿಂದ ಸುಮಾರು 530 ಕಿ.ಮೀ ದೂರದ ಬೆಂಗಳೂರಿನ ವರೆಗೆ ಸ್ವತಃ ಮಕ್ಕಳು ಸ್ಕೇಟಿಂಗ್ ಮೂಲಕ ತೆರಳಲಿದ್ದು, ದಾರಿಯುದ್ದಕ್ಕೂ ಬ್ಯಾನರ್ ಕರಪತ್ರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಬೆಂಗಳೂರಿನಲ್ಲಿ ರ್ಯಾಲಿಯನ್ನು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬರಮಾಡಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಮೇ 12 ನೇ ತಾರೀಖಿಗೆ ರ್ಯಾಲಿ ಬೆಂಗಳೂರು ತಲುಪಲಿದೆ...

ಇದನ್ನೂ ಓದಿ: Karwar: ಕಡಲ ತಡಿಯಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ! ನೋಡುಗರಿಗೆ ಭರಪೂರ ಮನರಂಜನೆ

ಅಭಿಯಾನಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಾಲನೆ

ಇನ್ನೂ ಅಭಿಯಾನಕ್ಕೆ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಪ್ರಿಯಾಂಗ ಎಂ ಚಾಲನೆ ನೀಡಿದರು. ಅಭಿಯಾನದಲ್ಲಿ ಕಾರವಾರ ಸ್ಕೇಟಿಂಗ್ ಅಸೋಸಿಯೇಷನನ 25 ವಿದ್ಯಾರ್ಥಿಗಳು ಸೇರಿ 6 ವರ್ಷದಿಂದ 20 ವರ್ಷದೊಳಗಿನ ಒಟ್ಟು 40 ಮಕ್ಕಳು ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದಾರೆ.

 ಮಕ್ಕಳಿಗೆ ವಿಶ್ರಾಂತಿ ಪಡೆಯುವ ವ್ಯವಸ್ಥೆ

ಒಟ್ಟು ನಾಲ್ಕು ತಂಡಗಳನ್ನಾಗಿ ಅಭಿಯಾನದಲ್ಲಿ ತೊಡಗಿಸಿಕೊಳ್ಳಲಾಗಿದ್ದು 10 ಮಂದಿಯ ಒಂದು ತಂಡ ಪ್ರತಿ ಅರ್ಧಗಂಟೆ ಸ್ಕೇಟಿಂಗ್ ಮಾಡಲಿದೆ. ಇವರ ಜೊತೆಯಲ್ಲಿ ಪರಿಣಿತ ಸ್ಕೇಟರ್ ಗಳು ತೆರಳಲಿದ್ದು, ಮಕ್ಕಳು ವಿಶ್ರಾಂತಿ ಬಯಸಿದಲ್ಲಿ ಬಸ್ ನಲ್ಲಿ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.

ಮಕ್ಕಳ ಸುರಕ್ಷತೆಗೆ ಪೊಲೀಸರ ಸಾಥ್

ಅಲ್ಲದೆ ಹೆದ್ದಾರಿಯುದ್ದಕ್ಕೂ ಸುರಕ್ಷತೆ ದೃಷ್ಟಿಯಿಂದ ಈಗಾಗಲೇ ಸರ್ವೆ ಮಾಡಿದ್ದು ಪೊಲೀಸ್ ಇಲಾಖೆ ಕೂಡ ಸಹಕಾರ ನೀಡಲಿದೆ. ಅಭಿಯಾನದಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಸ್ಕೇಟರ್ ಗಳು ಪಾಲ್ಗೊಂಡಿದ್ದು ಮಕ್ಕಳಿಗೂ ಒಂದು ಸದಾವಕಾಶ ದೊರೆತಂತಾಗಿದೆ ಎನ್ನುತ್ತಾರೆ ಸ್ಕೇಟಿಂಗ್ ತರಬೇತುದಾರರು.

ಇದನ್ನೂ ಓದಿ: Akrama-Sakrama: ಮತ್ತೆ ಶುರುವಾಗಿದೆ ಅರಣ್ಯ ಅತಿಕ್ರಮಣದಾರರಿಗೆ ಆತಂಕ, ಅಕ್ರಮ-ಸಕ್ರಮಕ್ಕಾಗಿ ನಡೆಯುತ್ತಿದೆ ಹೋರಾಟ

ಒಟ್ಟಾರೆ ಕಾರ್ಮಿಕ ಇಲಾಖೆ ಶ್ರಮಿಕರಿಗೆ ಸಿಗಬೇಕಾದ ಯೋಜನೆ ಬಗ್ಗೆ ತಿಳಿಸಲು ಸ್ಕೇಟಿಂಗ್ ಮೂಲಕ ವಿನೂತನ ಮಾದರಿಯಲ್ಲಿ ಪ್ರಯತ್ನಿಸಿದರೇ, ಸ್ಕೇಟರ್ ಗಳು ನೂರಾರು ಕಿ.ಮೀ ಕ್ರಮಿಸಿ ಹೊಸ ಅನುಭವ ಪಡೆಯಲು ಮುಂದಾಗಿದ್ದಾರೆ.
Published by:Annappa Achari
First published: