• Home
 • »
 • News
 • »
 • uttara-kannada
 • »
 • Shaurya Award: ಜೀವ ಕೊಟ್ಟ ಅಪ್ಪನಿಗೇ ಪ್ರಾಣದಾತೆಯಾದ ಮಗಳು, ಉತ್ತರ ಕನ್ನಡದ ಬಾಲಕಿ ಮುಡಿಗೆ ಶೌರ್ಯ ಪ್ರಶಸ್ತಿಯ ಗರಿ

Shaurya Award: ಜೀವ ಕೊಟ್ಟ ಅಪ್ಪನಿಗೇ ಪ್ರಾಣದಾತೆಯಾದ ಮಗಳು, ಉತ್ತರ ಕನ್ನಡದ ಬಾಲಕಿ ಮುಡಿಗೆ ಶೌರ್ಯ ಪ್ರಶಸ್ತಿಯ ಗರಿ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ತನಗೆ ಪ್ರಶಸ್ತಿ ಬಂದಿದ್ದಕ್ಕಿಂತಲೂ, ತನ್ನ ಅಪ್ಪನ ಪ್ರಾಣ ಉಳಿಸಿದ್ದೇ ಅತೀ ದೊಡ್ಡ ಗೌರವ ಎಂದುಕೊಂಡಿದ್ದಾಳೆ ಈ ಬಾಲಕಿ. ಕಿರಿ ವಯಸ್ಸಿನಲ್ಲಿ ಈಕೆಯ ಧೈರ್ಯ, ಸಾಹಸ ಅರ್ಹವಾಗಿಯೇ ಪ್ರಶಸ್ತಿ ಸಲ್ಲುವಂತೆ ಮಾಡಿದೆ.

 • News18 Kannada
 • Last Updated :
 • Uttara Kannada, India
 • Share this:

  ಶಿರಸಿ: ಅಪ್ಪನ ಜೊತೆಗೆ ಮುಗುಳ್ನಗುತ್ತಾ ಕೂತಿರೋ ಈ ಮಗಳ ಸಾಹಸ ಅಂತಿದ್ದಲ್ಲ, ಹಾಗಾಗಿಯೇ ನೋಡಿ ತನ್ನ ಜೀವ ಉಳಿಸಿದ ಈ ಮಗಳ ಮೇಲೆ ಅಪ್ಪನಿಗೂ ಅಷ್ಟೇ ಪ್ರೀತಿ. ಅಂದಹಾಗೆ, ಈ ಮಲೆನಾಡಿನ ಹುಡುಗಿ ಸಾಹಸಗಾಥೆಗೆ ಇದೀಗ ಕೆಳದಿ ಚೆನ್ನಮ್ಮ ಪ್ರಶಸ್ತಿ ಅರಸಿ ಬಂದಿದೆ. ಶಾಲೆಯಲ್ಲಿ ಆಟವಾಡೋ ಸಮಯಕ್ಕೆ ಈಕೆ ಊರೆಲ್ಲ ಪ್ರಸಿದ್ಧಿಯಾಗಿದ್ದಾಳೆ.  ಈಕೆಯ ಹೆಸರು ಕೌಸಲ್ಯಾ ಅಂತ ಉತ್ತರ ಕನ್ನಡದ (Uttara Kannada Student) ಕಾನಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7 ನೇ ತರಗತಿ ವಿದ್ಯಾರ್ಥಿನಿ. ಈಕೆಗೆ ಇದೀಗ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ (Keladi Chennamma Shaurya Award) ಸಂದಿದೆ.


  ತನಗೆ ಪ್ರಶಸ್ತಿ ಬಂದಿದ್ದಕ್ಕಿಂತಲೂ, ತನ್ನ ಅಪ್ಪನ ಪ್ರಾಣ ಉಳಿಸಿದ್ದೇ ಅತೀ ದೊಡ್ಡ ಗೌರವ ಎಂದುಕೊಂಡಿದ್ದಾಳೆ ಈ ಬಾಲಕಿ. ಕಿರಿ ವಯಸ್ಸಿನಲ್ಲಿ ಈಕೆಯ ಧೈರ್ಯ, ಸಾಹಸ ಅರ್ಹವಾಗಿಯೇ ಪ್ರಶಸ್ತಿ ಸಲ್ಲುವಂತೆ ಮಾಡಿದೆ. ಅಷ್ಟಕ್ಕೂ ಈಕೆ ತೋರಿದ ಆ ಧೈರ್ಯ ಅಂದು ಕೌಸಲ್ಯಾ ತಂದೆ ವೆಂಕಟರಮಣ ಹೆಗಡೆ ಅವರ ಪ್ರಾಣ ಉಳಿಸಿತ್ತು ಅನ್ನೋದು ಮರೆಯುವಂತಿಲ್ಲ.


  ಆ ಘಟನೆ ನೆನೆಸಿಕೊಂಡರೆ ಮೈ ಝುಮ್ ಅನ್ನುತ್ತೆ!
  ಅದೊಂದು ದಿನ ಈ ಕೌಸಲ್ಯಾ ತನ್ನ ತಂದೆಗೆ ಸಹಾಯವಾಗಲೆಂದು ಶಾಲೆಗೆ ರಜೆ ಇರೋ ದಿನ ಕ್ಯಾಟರಿಂಗ್ ಮಾಡೋಕೆ ತೆರಳಿದ್ದಳು. ಅಂದು ಇದೇ ಜೀಪಿನಲ್ಲಿ ಸಿದ್ದಾಪುರದ ಮಾವಿನಗುಂಡಿಯ ಹೆಮ್ಗಾರಿನ ಅಡವಿತೋಟ ಎಂಬಲ್ಲಿ ಜೀಪು ಚಲಾಯಿಸುವಾಗ ಜೀಪ್ ಮಗುಚಿ ಬಿದ್ದಿತ್ತು. ಜೀಪಿನ ಅಡಿ ಸಿಲುಕಿದ್ದ ವೆಂಕಟ್ರಮಣ ಹೆಗಡೆಯವರ ತೊಡೆಯ ಮೇಲೆಯೇ ಜೀಪ್ ಇತ್ತು.


  ದಟ್ಟ ಅಡವಿ, ಇಳಿಸಂಜೆ; ಅಪ್ಪನನ್ನು ಕಾಪಾಡುವವರು ಯಾರು?
  ಮಿಸುಕಾಡಲೂ ಕೂಡ ತ್ರಾಣವಿರಲಿಲ್ಲ. ಹೇಳಿ ಕೇಳಿ ಆ ಇಳಿಸಂಜೆಯಲ್ಲಿ, ಅದ್ರಲ್ಲೂ ದಟ್ಟ ಅಡವಿಯಲ್ಲಿ ಹುಡುಕಿದರೂ, ಜೋರಾಗಿ ಕೂಗಿದರೂ ಸಹ ಕೇಳಲಿಕ್ಕೆ ಯಾರೂ ಇಲ್ಲ. ಹಿಂದುಗಡೆ ಇದ್ದದ್ದು ಕೌಸಲ್ಯಾ ಮತ್ತವಳ ತಮ್ಮ. ಅವರು ತಮಗಾಗಿದ್ದ ಪೆಟ್ಟನ್ನೂ ನೋಡದೆ ಅಪ್ಪನ ಜೀವ ಉಳಿಸಲಿಕ್ಕೆ ಹೆಣಗಾಡಿದರು.


  ಇದನ್ನೂ ಓದಿ: Dharavati Ranga Temple: ಈ ದೇಗುಲದಲ್ಲಿ ಚಪ್ಪಲಿಯಲ್ಲಿ ಹೊಡೆದುಕೊಂಡ್ರೆ ಒಳ್ಳೇದಾಗುತ್ತಂತೆ!


  ಅಪ್ಪನನ್ನು ಬದುಕಿಸಲು ಮಹಾ ಸಾಹಸ
  ಮೊದಲು ಅಪ್ಪನ ಮೊಬೈಲ್ ತಗೆದುಕೊಂಡು ಡೈಲ್ ಲಿಸ್ಟ್​ನಲ್ಲಿದ್ದ ಎಲ್ಲರಿಗೂ ಕಾಲ್ ಮಾಡಿದರು ಅಪ್ಪನ ನರಳಾಟ ಮುಗಿಲು ಮುಟ್ಟಿತ್ತು. ಅದ್ಯಾವ ಶಕ್ತಿ ಈ ಬಾಲಕಿಯನ್ನು ಬಡಿದೆಬ್ಬಿಸಿತೋ, ಬರೋಬ್ಬರಿ 1.5 ಕಿಮೀ ದೂರ ಓಡಿಹೋಗಿ ಜನರನ್ನು ಕರೆತಂದು ಜೀಪ್ ಎತ್ತಿಸಿ ಅಪ್ಪನನ್ನು ಬದುಕಿಸಿಕೊಂಡರು.


  ಧೈರ್ಯೇ ಸಾಹಸೇ ಲಕ್ಷ್ಮೀ
  ಈಗಲೂ ವೆಂಕಟರಮಣ ಹೆಗಡೆಯವರ ಕಾಲಿಗೆ ಮೂರು ರಾಡ್ ಹಾಕಲಾಗಿದೆ. ಅಂದು ಕೌಸಲ್ಯಾ ತೋರಿದ ಸಮಯಪ್ರಜ್ಞೆ ಆಕೆಯ ತಂದೆಯನ್ನೂ ಬದುಕುಳಿಸಿತು. ಜೊತೆಗೆ, ಜೀವ ಕೊಟ್ಟ ತಂದೆಗೆ ಮರುಜೀವ ಕೊಟ್ಟು ತಾಯಿಯಾಗಿ "ಧೈರ್ಯೇ ಸಾಹಸೇ ಲಕ್ಷ್ಮೀ" ಎಂಬುದಕ್ಕೆ ಅನ್ವರ್ಥವಾಗಿ ಈ ಕೌಸಲ್ಯಾ ನಿಂತಳು.


  ಇದನ್ನೂ ಓದಿ: Uttara Kannada: 22 ಸಾವಿರ ಕಿಮೀ ದೂರದಿಂದ ಉತ್ತರ ಕನ್ನಡಕ್ಕೆ ಹಾರಿಬಂದ ಅತಿಥಿಗಳು!


  ಇಂತಹ ಹೆಮ್ಮೆಯ ಬಾಲಕಿಯ ಇದೀಗ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಅರಸಿ ಬಂದಿವೆ. ಸಮಯ ಪ್ರಜ್ಞೆ ಜೊತೆಗೆ ಧೈರ್ಯದಿಂದ ಮುನ್ನಡೆದ ಈ ಹಳ್ಳಿಯ ಬಾಲಕಿಗೆ ನಮ್ಮ ಕಡೆಯಿಂದಲೂ ಕಂಗ್ರಾಟ್ಸ್.


  ವರದಿ: ಎ.ಬಿ.ನಿಖಿಲ್, ಮುಂಗಡೋಡ್

  Published by:ಗುರುಗಣೇಶ ಡಬ್ಗುಳಿ
  First published: