• Home
  • »
  • News
  • »
  • uttara-kannada
  • »
  • Uttara Kannada: ಸೈಕಲ್ಲೇ ಜಿಮ್ ಆಯ್ತು! 15 ಸಾವಿರದ ಅದ್ಭುತ ಸಾಧನ ಇಲ್ಲಿ ಸಿಗುತ್ತೆ ನೋಡಿ

Uttara Kannada: ಸೈಕಲ್ಲೇ ಜಿಮ್ ಆಯ್ತು! 15 ಸಾವಿರದ ಅದ್ಭುತ ಸಾಧನ ಇಲ್ಲಿ ಸಿಗುತ್ತೆ ನೋಡಿ

ಇಲ್ಲಿದೆ ಅದ್ಭುತ ಉಪಕರಣದ ವಿಡಿಯೋ

"ಇಲ್ಲಿದೆ ಅದ್ಭುತ ಉಪಕರಣದ ವಿಡಿಯೋ"

ಇಂಟೆರೆಸ್ಟಿಂಗ್ ಅಂದ್ರೆ ಈ ಪೋರ್ಟೆಬಲ್ ಜಿಮ್​ನ್ನು ಎಲ್ಲಿಂದಲೋ ಖರೀದಿಸಿ ತಂದಿಲ್ಲ. ಬದಲಿಗೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಜನಿ ಬೋವಿ ಎಂಬ ವಿದ್ಯಾರ್ಥಿನಿಯೇ ಈ ಪೋರ್ಟೆಬಲ್ ಜಿಮ್​ನ ಸಂಶೋಧಕಿ.

  • Share this:

    ಉತ್ತರ ಕನ್ನಡ: ಒಂದು ಕಡೆ ನಿಲ್ಸಿರೋ ಸೈಕಲ್ಲು. ಅದ್ರ ಮೇಲೆ ಕಸರತ್ತು ನಡೆಸೋ ಡಂಬಲ್ಸು. ಅರೆ, ಇದೆಂತಹಾ ವಿಚಿತ್ರ. ಇದೇನು ಸೈಕಲ್ಲೋ ಅಥವಾ ಡಂಬಲ್ಸ್ ಇಡೋ ಮೆಷಿನ್ನ್ನೋ ಅಂತಾ ಕನ್ಫೂಶನ್ ಆದ್ರಾ? ಹಾಗೇನಿಲ್ಲ, ಅಸಲಿಗೆ ಇದು ಪೋರ್ಟೇಬಲ್ ಜಿಮ್. ಇಲ್ನೋಡಿ ಈ ಸೈಕಲ್ ಅದೆಂತ ರೂಪ ಪಡೆದು ಕಸರತ್ತು ನಡೆಸೋ ಜಿಮ್ ಆಗಿದೆಯೆಂದು. ಹೌದು, ನೀವ್ ಯಾರು ಊಹಿಸಲಿಕ್ಕೂ ಸಾಧ್ಯವಿಲ್ಲದಂತಹ ಮೊಬೈಲ್ ಜಿಮ್ ಇದು. ಇಂಟೆರೆಸ್ಟಿಂಗ್ ಅಂದ್ರೆ ಈ ಪೋರ್ಟೆಬಲ್ ಜಿಮ್​ನ್ನು ಎಲ್ಲಿಂದಲೋ ಖರೀದಿಸಿ ತಂದಿಲ್ಲ. ಬದಲಿಗೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಜನಿ ಬೋವಿ ಎಂಬ ವಿದ್ಯಾರ್ಥಿನಿಯೇ ಈ ಪೋರ್ಟೆಬಲ್ ಜಿಮ್​ನ ಸಂಶೋಧಕಿ.


    ಎಲ್ಲ ವಯೋಮಾನದವರಿಗೂ ಹೊಂದಾಣಿಕೆ ಆಗೋ ಈ ಮೊಬೈಲ್ ಜಿಮ್ ರಾಷ್ಟ್ರಮಟ್ಟದ ಇನ್​ಸ್ಪೈರ್ ಅವಾರ್ಡ್ಸ್​ಗೆ ರಾಜ್ಯಮಟ್ಟದಿಂದ ಆಯ್ಕೆಯಾಗಿ ಹತ್ತು ಸಾವಿರ ರೂಪಾಯಿಯ ಗೌರವಧನಕ್ಕೂ ಪಾತ್ರವಾಗಿದೆ. ಆದರೆ ಇಂತಹದ್ದೊಂದು ಪೋರ್ಟೆಬಲ್ ಜಿಮ್ ತಯಾರಿಸಲು ಈಕೆಗೆ ನೆರವಾದದ್ದು ಮಾತ್ರ ಕೊರೊನಾ ಲಾಕ್​​ಡೌನ್.


    ಲಾಕ್​ಡೌನ್ ಶ್ರಮದ​ ಪ್ರತಿಫಲ
    ನಿಜ, ಕೊರೊನಾ ಲಾಕ್​ಡೌನ್​ನಲ್ಲಿ ಜಿಮ್ ಅನ್ನ ಮಿಸ್ ಮಾಡಿದವರಲ್ಲಿ ಶಿರಸಿಯ ಈ ಸಜನಿ ಬೋವಿ ಮತ್ತು ಅವರ ತಂದೆ ಸೋಮಶೇಖರ ಭೋವಿ ಕೂಡಾ ಒಬ್ಬರು. ಹೀಗಂತ ಸುಮ್ಮನೇ ಕೂರದ ಸಜನಿ ಮೊದಲನೆಯದ್ದಾಗಿ ಗುಜರಿ ಅಂಗಡಿಗೆ ತೆರಳಿ ಅಲ್ಲಿ ಕೆಟ್ಟು ನಿಂತಿದ್ದ ಸೈಕಲ್ ಹೊತ್ತು ತಂದಿದ್ದಳು.


    ಬಳಿಕ ಅದರ ಮುಂಭಾಗ ಹಾಗೂ ಹಿಂಭಾಗಗಳಲ್ಲಿ ಕಸರತ್ತಿಗೆ ಬೇಕಾದ ಐಟಂಗಳನ್ನ ನೀಟಾಗಿ ಬಣ್ಣ ಬಳಿದು ಜೋಡಿಸಿದರು. ಈಗ ಏನಿಲ್ಲ ಅಂದ್ರೂ ಏಳೆಂಟು ವ್ಯಾಯಾಮಗಳನ್ನ ಆರಾಮವಾಗಿ ಮಾಡಬಹುದಾಗಿದೆ.


    ಇದನ್ನೂ ಓದಿ: Uttara Kannada: ಗಣಪಮ್ಮ, ದುಗ್ಗಮ್ಮ, ಭಾಗೀರಥಮ್ಮ..ಗರ್ಭಿಣಿ-ಬಾಣಂತಿಯರೂ ಜೈಲು ಸೇರಿದರು!


    ಸದ್ಯ ಡೋನ್ ಬಾಸ್ಕೋ ಸ್ಕೂಲಿನಲ್ಲಿ ಒಂಬತ್ತನೇ ತರಗತಿ ಓದುತ್ತಿರುವ ಸಜನಿ ಬೋವಿ, ಇಂತಹ ಅಪರೂಪದ ಸಾಧನೆ ಮಾಡಿದ್ದಾರೆ. ಹತ್ತರಿಂದ ಹದಿನೈದು ನಿಮಿಷದಲ್ಲಿ ಈ ಉಪಕರಣವನ್ನು ಬಿಡಿಭಾಗಗಳನ್ನಾಗಿ ಮಾಡಿ ನಾವಿದ್ದಲ್ಲಿಗೆ ತೆಗೆದುಕೊಂಡು ಹೋಗಹುದಾಗಿದೆ. ಹೀಗೆ ಲಾಕ್​ಡೌನ್ ಸಮಯವನ್ನ ಈ ಬಾಲಕಿ ಸದುಪಯೋಗಪಡಿಸಿದ್ದಕ್ಕೆ ಈ ಪೋರ್ಟೆಬಲ್ ಜೀಮ್ ಸಾಕ್ಷಿ ಅಂತಿದ್ದಾರೆ ಶಿರಸಿ ಮಂದಿ.


    ಇದನ್ನೂ ಓದಿ: Uttara Kannada: ಘನತ್ಯಾಜ್ಯದಿಂದ ಗೊಬ್ಬರ! ಇದು ಅಡಿಕೆಗೂ ಭಾರೀ ಬೆಸ್ಟ್ ಅಂತೆ!


    ನಿಮಗೂ ಈ ಸೈಕಲ್ ಜಿಮ್ ಬೇಕಿದ್ದರೆ ಇವರನ್ನ ಸಂಪರ್ಕಿಸಿ
    ನೀವೂ ಕೂಡ ಈ ರೀತಿಯ ಮಾಡೆಲ್ ಮಾಡಿಸಿಕೊಳ್ಳಬಹುದು ಸಜನಿಯವರ ತಂದೆ ಈ ಉಪಕರಣವನ್ನು ಮಾಡಿಕೊಡುತ್ತಾರೆ ಅವರ ಸಂಪರ್ಕ ಸಂಖ್ಯೆ:+91 94802 10991


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: