• Home
  • »
  • News
  • »
  • uttara-kannada
  • »
  • Positive Story: ಹುಟ್ಟುಹಬ್ಬಕ್ಕೆ ಚಾಕೊಲೇಟ್ ಅಲ್ಲ, ಸಸಿ ಗಿಫ್ಟ್! ಶಿರಸಿಯ ಸರ್ಕಾರಿ ಶಾಲೆಯಲ್ಲಿ ಮಾದರಿ ಕಾರ್ಯ

Positive Story: ಹುಟ್ಟುಹಬ್ಬಕ್ಕೆ ಚಾಕೊಲೇಟ್ ಅಲ್ಲ, ಸಸಿ ಗಿಫ್ಟ್! ಶಿರಸಿಯ ಸರ್ಕಾರಿ ಶಾಲೆಯಲ್ಲಿ ಮಾದರಿ ಕಾರ್ಯ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

80 ವಿದ್ಯಾರ್ಥಿಗಳಿರುವ 4 ಶಿಕ್ಷಕರಿರುವ ಶಿರಸಿ ನಗರದ ಹೊರಭಾಗದಲ್ಲಿ ಈ ಸರ್ಕಾರಿ ಶಾಲೆ ನಿಜಕ್ಕೂ ಮಾದರಿ ಕಾರ್ಯವನ್ನು ಮಾಡುತ್ತಿದೆ.

  • Share this:

    ಶಿರಸಿ: ಶತಾವರಿ, ನಾಗಸಂಪಿಗೆ, ತುಳಸಿ, ಸಿಂಧೂರ. ಹೀಗೆ ಪ್ರತಿಯೊಂದು ಗಿಡವನ್ನೂ (Plants) ಹೆಸರಿಸಿ ಮಾಹಿತಿ ನೀಡುತ್ತಿರೋ ಪುಟ್ಟ ಪುಟ್ಟ ಮಕ್ಕಳು. ಸುತ್ತ ಹಸಿರಿನಿಂದ ನಗುತ್ತಿರೋ ಹಲವಾರು ಔಷಧೀಯ ಸಸ್ಯಗಳು. ಉತ್ತರ ಕನ್ನಡದ (Uttara Kannada News) ಶಾಲೆಯೊಂದರ ಆವರಣದಲ್ಲಿ (Uttara Kannada Government Schools) ಕಂಡುಬರುವ ಅಪರೂಪದ ದೃಶ್ಯಗಳಿವು.


    ಶಿರಸಿ ತಾಲೂಕಿನ ರಾಮನಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ತಮ್ಮ ಓದಿನ ಜೊತೆಗೆ ಗಿಡಗಳನ್ನು ಬೆಳೆಸಿ ಮಾದರಿಯಾಗಿದ್ದಾರೆ.


    ಮಕ್ಕಳಿಂದಲೇ ಗಿಡಗಳ ವಿವರಣೆ
    ಬರೀ ಗಿಡವಷ್ಟೇ ಆಗಿದ್ರೆ ಅಷ್ಟು ದೊಡ್ಡ ಮಾತಾಗ್ತಿರ್ಲಿಲ್ಲ, ಕೆಲವು ಕಣ್ಣಿಗೆ ಕಾಣದ ಅಥವಾ ಕಂಡರೂ ಮಹತ್ವ ಗುಟ್ಟಾಗಿರುವ ಅನೇಕ ತಳಿಯ ಸಸ್ಯಗಳನ್ನು ಮೂಲಿಕೆಗಳು ಇಲ್ಲಿವೆ. ಅಷ್ಟೇ ಅಲ್ಲದೇ, ಆಯಾ ಗಿಡಗಳ ಹೆಸರು, ವೈಜ್ಞಾನಿಕ ಹೆಸರು, ಅದರ ಉಪಯೋಗಗಳನ್ನು ಕೂಡಾ ಮಕ್ಕಳೇ ವಿವರಿಸ್ತಾರೆ.


    ಹುಟ್ಟುಹಬ್ಬಕ್ಕೆ ಚಾಕೊಲೇಟ್ ಗಿಫ್ಟ್ ಇಲ್ಲ!
    ಇನ್ನೊಂದು ವಿಶೇಷ ಅಂದರೆ, ಇಲ್ಲಿ ಯಾವುದೇ ವಿದ್ಯಾರ್ಥಿಯ ಜನ್ಮದಿನ ಇರಲಿ ಅವರು ಎಂದಿಗೂ ಚಾಕೊಲೇಟ್ ಕೊಡುವುದಿಲ್ಲ. ಬದಲಿಗೆ, ತಮ್ಮ ಸಹಪಾಠಿಗಳಿಗೆ ಗಿಡವನ್ನು ಗಿಫ್ಟ್ ಮಾಡ್ತಾರೆ. ಶಾಲೆಗೆ ಆಗಮಿಸಿದ ಅತಿಥಿಗಳಿಗೂ ಗಿಡ ಕೊಡುತ್ತಾರೆ. 80 ವಿದ್ಯಾರ್ಥಿಗಳಿರುವ 4 ಶಿಕ್ಷಕರಿರುವ ಶಿರಸಿ ನಗರದ ಹೊರಭಾಗದಲ್ಲಿ ಈ ಸರ್ಕಾರಿ ಶಾಲೆ ನಿಜಕ್ಕೂ ಮಾದರಿ ಕಾರ್ಯವನ್ನು ಮಾಡುತ್ತಿದೆ.




    ಇದನ್ನೂ ಓದಿ: Murudeshwar Fair: ಮುರುಡೇಶ್ವರ ಜಾತ್ರೆಯಲ್ಲಿ 'ಶಿವ' ವೈಭವ!


    ಈ ರಾಮನಬೈಲ್ ಸರ್ಕಾರಿ ಶಾಲೆಗೆ ಹತ್ತು ವರ್ಷದ ಹಿಂದೆ ಯೂಥ್ ಫಾರ್ ಸೇವಾ ಸಂಸ್ಥೆ ಮತ್ತು ಅರಣ್ಯ ಇಲಾಖೆಯವರು ಭೇಟಿ ನೀಡಿದ್ದರು. ಅಂದಿನಿಂದ ಮುಖ್ಯೋಪಾಧ್ಯಾಪಕರಾದ ಗೀತಾ ಜೋಗಳೇಕರ್ ಹಾಗೂ ವಿಜ್ಞಾನ ಶಿಕ್ಷಕ ನಾರಾಯಣ್ ಬಿ ನಾಯಕ್ ಅವರು ತಮ್ಮ ವಿದ್ಯಾರ್ಥಿಗಳೊಂದಿಗೆ ನಾನಾ ಬಗೆಯ ಗಿಡ ಬೆಳೆಸಲು ಶುರು ಮಾಡಿದರು.


    ಇದನ್ನೂ ಓದಿ: Uttara Kannada: ಬೌದ್ಧ ಭಿಕ್ಕುಗಳಿಂದ 49 ದಿನ ಶ್ರಾದ್ಧ ಆಚರಣೆ!


    ಈಗ ಶಾಲೆಯ ತುಂಬಾ ಉತ್ತರಣೆ, ಗರಿಕೆ, ಹತ್ತು ಬಗೆಯ ತುಳಸಿ, ಏಕನಾಯಕ, ಅಶ್ವತ್ಥ, ನಾಲಿಗೆಸೌತೆ, ಬ್ರಾಹ್ಮಿ, ಸಿಂಧೂರ ಸೇರಿದಂತೆ ಸುಮಾರು 40 ರಿಂದ 50 ಬಗೆಯ ಔಷಧಿ ಸಸ್ಯಗಳಿವೆ. ಇದನ್ನೆಲ್ಲಾ ಮಕ್ಕಳು ಹಾಗೂ ಶಿಕ್ಷಕರು ಬೇರೇ ಬೇರೆ ಊರಿಂದ ತಂದು ಇಲ್ಲಿ ಬೆಳೆಸಿರುವುದು ವಿಶೇಷ.


    ವರದಿ: ಎ.ಬಿ.ನಿಖಿಲ್,ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು