ಶಿರಸಿ: ಕೆಂಪು ಹಾಸಿನ ಮೈದಾನ, ಊರಿಡೀ ಕೇಳುವ ಕಾಮೆಂಟ್ರಿ ಸಪ್ಪಳ, ಸುತ್ತಲೂ ಕ್ಯಾಮೆರಾ ಕಣ್ಗಾವಲು, ಎರಡು ಟೀಂಗಳ ಕಾದಾಟಕ್ಕೆ ಸೀಟಿ ಹಾಕಿ ಬೆಂಬಲಿಸುತ್ತಿರುವ ಪ್ರೇಕ್ಷಕ ಪ್ರಭುಗಳು. ಹೌದು, ಕ್ರಿಕೆಟ್ ಫಿವರ್ ಅಂದ್ರೆ ಕಡಿಮೆನಾ? ಮಲೆನಾಡ ಮಡಿಲಲ್ಲಿ (Sirsi Premier League) ಗ್ರ್ಯಾಂಡ್ ಆಗಿ ನಡೆಯಿತು ಅದ್ದೂರಿ ಕ್ರಿಕೆಟ್ ಕ್ರೀಡಾಕೂಟ!
ಹೌದು, ಉತ್ತರ ಕನ್ನಡದ ಶಿರಸಿಯ ಜಿಲ್ಲಾ ಕ್ರೀಡಾಂಗಣವು ನಾಲ್ಕನೇ ಶಿರಸಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಸಾಕ್ಷಿಯಾಯಿತು. ಕಲ್ಪವೃಕ್ಷ ಚಾರಿಟೇಬಲ್ ಟ್ರಸ್ಟ್ ಸಂಸ್ಥೆ ಆಯೋಜಿಸಿದ್ದ ಈ ಲೀಗ್ನಲ್ಲಿ 8 ತಂಡಗಳು ಗೆಲುವಿಗಾಗಿ ಸೆಣಸಿದವು.
1,11,111 ರೂಪಾಯಿ ಬಹುಮಾನ!
ಸುಮಾರು ಹದಿನೈದು ಲಕ್ಷ ಬಜೆಟ್ನಲ್ಲಿ ಆಯೋಜಿಸಲಾಗಿದ್ದ ಈ ಪಂದ್ಯಕೂಟದಲ್ಲಿ ಗೆದ್ದ ತಂಡಕ್ಕೆ ಸಿಗುವ ಇನಾಮಿನ ಮೊತ್ತ 1,11,111 ರೂಪಾಯಿಯಾಗಿತ್ತು. ಅದಕ್ಕಾಗಿಯೇ ಶಿರಸಿಯ ಕ್ರೀಡಾಂಗಣದಲ್ಲಿ ಎಂಟು ತಂಡಗಳು ಸೆಣಸಾಡಿದವು. ಶಿರಸಿ ಸೂಪರ್ ಕಿಂಗ್ಸ್ ತಂಡ ಬಹುಮಾನವನ್ನು ಮುಡಿಗೇರಿಸಿಕೊಂಡಿತು.
ಇದನ್ನೂ ಓದಿ: Uttara Kannada: ಈ ಹಳ್ಳಿ ಮಕ್ಕಳು ತಾವೇ ಡ್ರೋನ್ ಮಾಡಿ ಹಾರಿಸ್ತಿದ್ದಾರೆ ನೋಡಿ!
ಇನ್ನು ಶಿರಸಿ ಪ್ರೀಮಿಯರ್ ಲೀಗ್ ಅದ್ಧೂರಿತನಕ್ಕಾಗಿ ಇದೇ ಮೊದಲ ಬಾರಿಗೆ ಎಲ್.ಇ.ಡಿ ಸ್ಕ್ರೀನ್ , ಅದ್ದೂರಿ ಸೌಂಡ್ ಸಿಸ್ಟಂ ಮತ್ತು ಪ್ರತ್ಯೇಕ ಚೇಂಬರ್ ಪೆವಿಲಿಯನ್ ನಿರ್ಮಿಸಲಾಗಿತ್ತು. ಪ್ರೇಕ್ಷಕರಂತೂ ಪ್ರತಿ ಪಂದ್ಯವನ್ನು ಕಣ್ತುಂಬಿಕೊಂಡು ಎಂಜಾಯ್ ಮಾಡ್ತಿದ್ರೆ, ಇತ್ತ ತಂಡದ ಮಾಲಕರು ಈ ಸಲ ಕಪ್ ನಮ್ದೇ ಅಂತಾ ಫುಲ್ ಜೋಶ್ನಲ್ಲಿದ್ದರು.
ಇದನ್ನೂ ಓದಿ: House Lifting Technology: ಕಟ್ಟಿದ ಮನೆಯೇ ನೆಲದಿಂದ 6 ಅಡಿ ಎತ್ತರಕ್ಕೆ ಲಿಫ್ಟ್!
ಒಟ್ಟಿನಲ್ಲಿ ಶಿರಸಿಯ ಭವಿಷ್ಯದ ಕ್ರಿಕೆಟ್ ಪಟುಗಳಿಗೆ ಶಿರಸಿ ಪ್ರೀಮಿಯರ್ ಹೊಸ ಸಂಚಲನ ಮೂಡಿಸಿತು. ತಮ್ಮೂರ ಮೈದಾನದಲ್ಲೇ ಐಪಿಎಲ್ ಮಾದರಿ ಪಂದ್ಯಕೂಟ ನೋಡಿ ಖುಷಿಪಟ್ಟ ಕ್ರಿಕೆಟ್ ಪ್ರೇಮಿಗಳು ತಮ್ಮಿಷ್ಟದ ತಂಡಗಳನ್ನು ಶಿಳ್ಳೆ, ಚಪ್ಪಾಳೆಗಳೊಂದಿಗೆ ಬೆಂಬಲಿಸಿದರು.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್ ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ