Uttara Kannada: ಕ್ಲಾಸ್ ಬೋರಾದ್ರೆ ಕುಟೀರಕ್ಕೆ ಬರುವ ವಿದ್ಯಾರ್ಥಿಗಳು! ಇದು ಉತ್ತರ ಕನ್ನಡದ ಈ ಶಾಲೆಯ ಸ್ಪೆಷಲ್

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಇಂತಹ ಕಗ್ಗಾಡಿನಲ್ಲೂ ಇವರಿಗೆ ಒಂದನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ ಕೊಡಲಾಗುತ್ತಿದೆ. ಪ್ರಾಜೆಕ್ಟರ್ ಮೂಲಕ ಪಾಠ ಕಲಿಸಲಾಗುತ್ತಿದೆ. ಗಿಡ ಬೆಳೆಸುವುದು, ಮೀನು ಸಾಕುವಿಕೆ, ರಂಗೋಲಿಯಲ್ಲಿ ನಕಾಶೆ ಹೀಗೆ ಹಲವು ಕ್ರಿಯೇಟಿವ್ ಪ್ರಯತ್ನಗಳು ನಡೆದಿವೆ.

  • Share this:

    ಉತ್ತರ ಕನ್ನಡ: ಮುದ್ದು ಮುದ್ದಾದ ಪುಟ್ಟ ಪುಟ್ಟ ಮಕ್ಕಳು. ಮಕ್ಕಳನ್ನ ಆಕರ್ಷಿಸಬಲ್ಲ ಶಾಲೆ ಗೋಡೆಗಳು. ಆಟದ ಜೊತೆಗೆ ಪಾಠದ ಮಜಾ ತಗೊಳ್ಳೋ ಪುಟಾಣಿಗಳು. ಕ್ಲಾಸ್ ಅಲ್ಲಿ ಕೂತು ಬೋರಾದ್ರೆ ಕುಟೀರಕ್ಕೆ ಬಂದು ಪಾಠ ಓದೋ ಸ್ಟೂಡೆಂಟ್ಸ್. ಯೆಸ್, ಓದುವ ಕುಟೀರ, ಚೆಂದದ ಕ್ಲಾಸ್ ರೂಂ, ಬ್ಯೂಟಿಫುಲ್ ನೇಚರ್ ಹೊಂದಿರೋ ಈ ಶಾಲೆ (Government School) ಎಲ್ಲಿದೆ ಅಂತೀರ? ಈ ವೀಡಿಯೋ ನೋಡಿ ನಿಮಗೆ ತಿಳಿಯುತ್ತೆ.

    ವಾಲ್ ಗಾರ್ಡನ್
    ಉತ್ತರ ಕನ್ನಡದ ಶಿರಸಿ ತಾಲೂಕಿನ ಪಂಚಲಿಂಗ ಹಿರಿಯ ಪ್ರಾಥಮಿಕ ಶಾಲೆಯು ಅದ್ಭುತ ಪರಿಕಲ್ಪನೆಯಿಂದ ಮೂಡಿಬಂದಿದೆ. ಇಲ್ಲಿ ವಾಲ್ ಪೇಂಟಿಂಗ್ ಅಷ್ಟೇ ಅಲ್ದೇ, ವಾಲ್ ಗಾರ್ಡನ್ ಇವೆ. ಓದೋದಕ್ಕಾಗಿ ಹರಟೆ ಕಟ್ಟೆಯಂತಿರೋ ಚೆಂದದ ಓದುವ ಕಟ್ಟೆ ಇದೆ.


    ಹಲವು ವಿದ್ಯಾರ್ಥಿಗಳು, ದಾನಿಗಳ ನೆರವು
    ಇನ್ನು ಗೋಡೆ ಮೇಲ್ಭಾಗದಲ್ಲೂ ಕಲರ್​ಫುಲ್ ಕೊಡೆ, ಇನ್ನಿತರ ಅಲಂಕಾರಿಕ ವಸ್ತುಗಳು ಆಕರ್ಷಿಸುತ್ತವೆ. ಇದೆಲ್ಲವೂ ಈ ಶಾಲೆಯ ಶಿಕ್ಷಕರು ಹಾಗೂ ಮಕ್ಕಳಿಂದ ಆಗಿರೋ ಅದ್ಭುತ ಬದಲಾವಣೆಯೂ ಹೌದು. ಇವರ ಈ ಪ್ರಯತ್ನಕ್ಕೆ ಹಳೆ ವಿದ್ಯಾರ್ಥಿಗಳು, ದಾನಿಗಳು ನೆರವಾಗಿದ್ದಾರೆ.


    ಆಟ, ಪಾಠಕ್ಕೆ ಪೂರಕ
    ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 57 ಮಕ್ಕಳಿದ್ದು, ಅವರ ಆಟ, ಪಾಠಗಳಿಗೆ ಬೇಕಾದ ಪೂರಕ ವಾತಾವರಣ ಕಲ್ಪಿಸಲಾಗಿದೆ. ಶಾಲೆಯ ತುಂಬಾ ಕೊರೊನಾ ಸಮಯದಲ್ಲಿ ಮಕ್ಕಳು ಅನೇಕ ಭಿತ್ತಿಗಳನ್ನು, ಮೇಲ್ಛಾವಣಿಯ ವಿನ್ಯಾಸವನ್ನು ಮಾಡಿದ್ದಾರೆ. ಅಲ್ಲದೇ ಇಂತಹ ಕಗ್ಗಾಡಿನಲ್ಲೂ ಇವರಿಗೆ ಒಂದನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ ಕೊಡಲಾಗುತ್ತಿದೆ. ಪ್ರಾಜೆಕ್ಟರ್ ಮೂಲಕ ಪಾಠ ಕಲಿಸಲಾಗುತ್ತಿದೆ. ಗಿಡ ಬೆಳೆಸುವುದು, ಮೀನು ಸಾಕುವಿಕೆ, ರಂಗೋಲಿಯಲ್ಲಿ ನಕಾಶೆ ಹೀಗೆ ಹಲವು ಕ್ರಿಯೇಟಿವ್ ಪ್ರಯತ್ನಗಳು ನಡೆದಿವೆ.


    ಇದನ್ನೂ ಓದಿ: Uttara Kannada: 4 ಮಂದಿ, 15 ಕೆಜಿ ಬಾಡೂಟ, ಇಲ್ಲಿ ಉಂಡೋನೆ ಮಹಾಶೂರ!


    ಓದುವ ಕುಟೀರ
    ಹಾಗೆಯೇ ಮಕ್ಕಳ ಓದುವ ಕುಟೀರ ವ್ಯವಸ್ಥೆ ಹೊಂದಿರುವ ಏಕೈಕ ಶಾಲೆಯಾಗಿದೆ ಈ ಪಂಚಲಿಂಗ ಶಾಲೆ. ಈ ಕುಟೀರದ ಭರಪೂರ ಲಾಭವನ್ನು ಮಕ್ಕಳು ಪಡೆಯುತ್ತಿರುವುದು ಸಂಸತದ ವಿಚಾರವೇ ಸರಿ.




    ಇದನ್ನೂ ಓದಿ: Uttara Kannada: ಮರ ಹತ್ತೋದೇನು, ಬಾವಿ ಇಳಿಯೋದೇನು! ಶಿರಸಿಯ ಈ ಲೇಡಿ ಮುಂದೆ ಸೂಪರ್​ಮ್ಯಾನ್​ ಸಹ ಏನಲ್ಲ!


    ಒಟ್ಟಿನಲ್ಲಿ ಪಂಚಲಿಂಗ ಹಿರಿಯ ಪ್ರಾಥಮಿಕ ಶಾಲೆಯು ನಾಲ್ವರು ಶಿಕ್ಷಕರ ಮಾರ್ಗದರ್ಶನದಿಂದ ಅತ್ಯುತ್ತಮವಾಗಿ ರೂಪಿತಗೊಂಡಿದೆ. ಈ ಶಾಲೆಯು ನಾಡಿಗೆ ಮಾದರಿಯಾಗಲಿ ಅನ್ನೋ ಶುಭ ಹಾರೈಕೆ ನಮ್ಮದು.


    ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು