• Home
  • »
  • News
  • »
  • uttara-kannada
  • »
  • Sirsi: ನೀರು ಚಿಮ್ಮೋ ಬಾವಿ! ಇದು ಶಿರಸಿಯಲ್ಲಿರೋ ಅಚ್ಚರಿ!

Sirsi: ನೀರು ಚಿಮ್ಮೋ ಬಾವಿ! ಇದು ಶಿರಸಿಯಲ್ಲಿರೋ ಅಚ್ಚರಿ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ಮುಸುಕಿನ ಬಾವಿಯನ್ನ ಸೋದೆ ಅರಸ ಸದಾಶಿವರಾಯ ತನ್ನ ಪತ್ನಿ ಚನ್ನಾದೇವಿಗೆ ಅಂತ ನಿರ್ಮಿಸಿದ್ದರಂತೆ!

  • Share this:

    ಉತ್ತರ ಕನ್ನಡ ಎಲ್ಲಿ ನೋಡಿದ್ರೂ ನೀರೇ ನೀರು. ಇದೇನಿದು? ಮಳೆಯಿಂದಾಗಿ ನೆರೆ ನೀರು ಮನೆಗೇ ನುಗ್ಗಿತು ಅಂದ್ಕೊಂಡ್ರಾ? ಖಂಡಿತಾ ಇದು ನೆರೆ ನೀರಲ್ಲ, ಮಳೆ ನೀರೂ ಅಲ್ಲ. ಬಾವಿಯಿಂದ ಉಕ್ಕುತ್ತಿರೋ ಕಣ್ಮನ ಸೆಳೆಯೋ ಕಾರಂಜಿ ನೀರು! ಇದೇನಿದು ಅದ್ಭುತ ಅಂತೀರಾ? ಹಾಗಿದ್ರೆ ನಾವ್ ಹೇಳ್ತೀವಿ ನೋಡಿ ಈ ಝೇಂಕರಿಸೋ ಕಾರಂಜಿ‌ ಇರೋ ಮುಸುಕಿನ ಬಾವಿ ಕಥೆಯನ್ನ. ಉತ್ತರ ಕನ್ನಡ ಶಿರಸಿಯಲ್ಲಿರೋ (Uttara Kannada Sirsi)  ಈ ಮುಸುಕಿನ ಬಾವಿಯನ್ನ ಸೋದೆ ಅರಸ ಸದಾಶಿವರಾಯ (Sode King Sadashiva Raya) ತನ್ನ ಪತ್ನಿ ಚನ್ನಾದೇವಿಗೆ ಅಂತ ನಿರ್ಮಿಸಿದ್ದರಂತೆ. ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿರೋ ಕಟ್ಟಡದಲ್ಲಿ ಗುಪ್ತ ಸುರಂಗ ಮಾರ್ಗ ಸಹಾ ಇದೆಯಂತೆ.


    ಈ ಬಾವಿ ಒಳಗೆ ಸುಂದರ ಕಾರಂಜಿಯಿದೆ. ವಿಶೇಷ ಅನಿಸೋ ಕಟ್ಟಡ ಸಹಾ ಇದೆ. ಸದಾ ಜಲಧಾರೆ ಹರಿಸೋ ಕಾರಂಜಿಯಿಂದ ಬಾವಿ‌ ತುಂಬಿ‌ತುಳುಕುತ್ತೆ. ನೋಡುಗರ ಕಣ್ಮನ ಸೆಳೆಯುತ್ತದೆ.


    ಇದನ್ನೂ ಓದಿ: Uttara Kannada: ಕೋಟೆ ಪಕ್ಕದಲ್ಲೇ ಬೀಚ್! ಉತ್ತರ ಕನ್ನಡದ ಅದ್ಭುತ ಸ್ಥಳವಿದು


    Musukina Honda Sirsi
    ಮುಸುಕಿನ ಬಾವಿಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ನೋಡೋರಿಗೆ ತಾವೂ ಬಾವಿಗಿಳಿದು ನೀರಲ್ಲಿ ಆಟ ಆಡ್ಬೇಕು ಅನ್ನೋ ಹುಮ್ಮಸ್ಸು ಬರುತ್ತೆ! ಸದಾಶಿವರಾಯರ ನಂತರ ಪಾಳುಬಿದ್ದಿದ್ದ ಮುಸುಕಿನ ಬಾವಿಯನ್ನ ಶಿರಸಿ ನಗರಸಭೆ ಮತ್ತೆ ನಳನಳಿಸುವಂತೆ ಮಾಡಿದೆ.


    ಇದನ್ನೂ ಓದಿ: Horse Riding: ಶಿರಸಿಲಿ ಶಿವಾಜಿ ಹವಾ! ದಂಪತಿ ಮಾಡ್ತಾರೆ ಸವಾರಿ!


    ಇದ್ರಿಂದ ಸೂಪರ್ ಆಗಿ ಕಾಣ್ತಿರೋ ಮುಸುಕಿನ ಬಾವಿಗೆ ಶಿರಸಿ ಜನ ಬೇಜಾರ್ ಬಂದಾಗೆಲ್ಲ‌ ವಿಸಿಟ್ ಹಾಕ್ತಿದಾರೆ. ನೀವು ಶಿರಸಿಗೆ ಬಂದಾಗ ಮುಸುಕಿನ ಬಾವಿ‌ ನೋಡೋಕೆ ಮರೆಯಬೇಡಿ ಆಯ್ತಾ?


    ವರದಿ: ಎ.ಬಿ.ನಿಖಿಲ್, ಮುಂಡಗೋಡು

    Published by:ಗುರುಗಣೇಶ ಡಬ್ಗುಳಿ
    First published: