• Home
  • »
  • News
  • »
  • uttara-kannada
  • »
  • Sirsi Marikamba Temple: ಶಿರಸಿ ಮಾರಿಕಾಂಬಾ ದೇಗುಲದಲ್ಲಿ ಹೊಸ ಸೇವೆ ಆರಂಭ

Sirsi Marikamba Temple: ಶಿರಸಿ ಮಾರಿಕಾಂಬಾ ದೇಗುಲದಲ್ಲಿ ಹೊಸ ಸೇವೆ ಆರಂಭ

ದೇವಾಲಯ

ದೇವಾಲಯ

ಭಕ್ತರೂ ಕೂಡ ಹಣವನ್ನು ನಗದಿನ ಮೂಲಕ ನೀಡುವ ಪ್ರಮೇಯ ಇನ್ನಿಲ್ಲದಂತಾಗಿದೆ ಎಂದು ಮಾರಿಕಾಂಬಾ ದೇಗುಲದ ಆಡಳಿತ ಮಂಡಳಿ ತಿಳಿಸಿದೆ. 

  • Share this:

    ಉತ್ತರ ಕನ್ನಡ: ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ (Shri Marikamba Temple Sirsi)  ವರ್ಷಕ್ಕೆ ಸಾವಿರಾರು ಜನ ಭೇಟಿ ನೀಡುತ್ತಾರೆ. ಅದರಲ್ಲೂ ವಿವಿಧ ನಗರಗಳಿಂದ ಆಗಮಿಸುವ ಜನರು ಕ್ಯಾಶ್​ಲೆಸ್ ಪೇಮೆಂಟ್​ಳನ್ನು ಪ್ರಸಾದ ಹಾಗೂ ಇತ್ತೀಚಿಗೆ ಹುಂಡಿಗೂ ಬಯಸುವುದು ತೀರಾ ಕಾಮನ್! ಇದನ್ನು ಮನಗಂಡ ದೇವಸ್ಥಾನದ ಸಮಿತಿಯು ಶಿರಸಿಯ ಮಾರಿಕಾಂಬಾ ದೇಗುಲದಲ್ಲಿ ಮೂರು ಇ-ಹುಂಡಿ ಕೋಡ್ ಸ್ಕ್ಯಾನರ್ (Sirsi Marikamba Temple E-Hundi Seva) ಹಾಗೂ ಮರ್ಕಿ ದುರ್ಗಿ ದೇಗುಲದ ಹತ್ತಿರ ಮೂರು ಇ-ಹುಂಡಿ ಸೇವೆಗಳನ್ನು ಒದಗಿಸಿದೆ. ಇದು ಯುವ ಜನತೆಯ ಗಮನ ಸೆಳೆದಿದೆ.


    ಈಗಾಗಲೇ ಜಮೆಯಾಗುವ ಕಾಣಿಕೆಯನ್ನು ಮೂರು ತಿಂಗಳಿಗೊಮ್ಮೆ ಎಣಿಸಿ ಬ್ಯಾಂಕಿಗೆ ಜಮಾ ಮಾಡುವುದು ರೂಢಿಯಾಗಿತ್ತು. ಆ ರೀತಿಯ ಶ್ರಮ ಹಾಗೂ ಸಮಯ ಎರಡರ ಉಳಿತಾಯ ಈ ಇ-ಹುಂಡಿಯಿಂದ ಆಗುತ್ತಿದೆ ಎನ್ನುತ್ತಾರೆ ದೇವಸ್ಥಾನದ ವ್ಯವಸ್ಥಾಪಕ ಚಂದ್ರಕಾಂತ್.


    ನಗದು ಕಾಣಿಕೆ ಹಾಕುವ ಪ್ರಮೇಯ ಇನ್ನಿಲ್ಲ
    ಈಗಾಗಲೇ ಶಿರಸಿಯ ಶ್ರೀ ಮಾರಿಕಾಂಬಾ ದೇವರಿಗೆ ದೇಶದ ಮೂಲೆ ಮೂಲೆಯಲ್ಲಿ ಭಕ್ತರಿದ್ದು ಅವರು ದೇವಸ್ಥಾನದ ವೆಬ್ ಸೈಟ್ ನಲ್ಲಿ ಈ ಕ್ಯೂಆರ್ ಕೋಡ್ ಮೂಲಕ ದೇವಸ್ಥಾನಕ್ಕೆ ಕಾಣಿಕೆ ಸಲ್ಲಿಸಬಹುದಾಗಿದೆ. ಅಷ್ಟೇ ಅಲ್ಲದೇ ಇಲ್ಲಿಗೆ ಬರುವ ಭಕ್ತರೂ ಕೂಡ ಹಣವನ್ನು ನಗದಿನ ಮೂಲಕ ನೀಡುವ ಪ್ರಮೇಯ ಇನ್ನಿಲ್ಲದಂತಾಗಿದೆ ಎಂದು ಮಾರಿಕಾಂಬಾ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.


    ಇದನ್ನೂ ಓದಿ: Uttara Kannada: ಶಿವನಿಗೂ ಗಂಗೆಗೂ ಅದ್ದೂರಿ ಕಲ್ಯಾಣ! ಮದುವೆ ಆಲ್ಬಂ ನೋಡಿ!


    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗ
    ತಮ್ಮ ಕಾಣಿಕೆಯನ್ನು ನೇರವಾಗಿ ದೇವಸ್ಥಾನದ ಅಕೌಂಟಿಗೆ ಜಮಾ ಮಾಡಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ಈ ಇ-ಸೇವೆಯನ್ನು ಜಾರಿಗೆ ತರಲಾಗಿದೆ. ಈಗಾಗಲೇ ನವರಾತ್ರಿ ಸಮಯದಲ್ಲಿ ಭಕ್ತರು ಇ-ಕಾಣಿಕೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.


    ಇದನ್ನೂ ಓದಿ: Uttara Kannada: ಘನತ್ಯಾಜ್ಯದಿಂದ ಗೊಬ್ಬರ! ಇದು ಅಡಿಕೆಗೂ ಭಾರೀ ಬೆಸ್ಟ್ ಅಂತೆ!


    ದೇವಸ್ಥಾನದ ಅಧಿಕೃತ ವೆಬ್ ಸೈಟ್ ಹಾಗೂ ಇನ್ನಿತರ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದ್ದು ಆಸಕ್ತರು ಇನ್ನೂ ಹೆಚ್ಚಿನ ಮಾಹಿತಿ ಪಡೆಯಬಹುದು. ಈ ಮೂಲಕ ಶ್ರೀ ಮಾರಿಕಾಂಬಾ ದೇವಿಗೆ ಕಾಣಿಕೆಯನ್ನು ನೀಡಬಹುದಾಗಿದೆ ಎಂದು ದೇವಸ್ಥಾದ ಆಡಳಿತ ಮಂಡಳಿ ತಿಳಿಸಿದೆ.

    Published by:ಗುರುಗಣೇಶ ಡಬ್ಗುಳಿ
    First published: