Sirsi Marikamba Temple Buffalo: ಮಾರಿಕಾಂಬೆಯ ಪಟ್ಟದ ಕೋಣ! ಇದು ಬಾಹುಬಲಿಗಿಂತ ಅಜಾನುಬಾಹು!

ಶಿರಸಿ ಮಾರಿಕಾಂಬೆ ದೇಗುಲದ ಕೋಣಕ್ಕೆ 12 ವರ್ಷ ವಯಸ್ಸು. ಸುಮಾರು 100 ಕೆಜಿಗಿಂತ ಹೆಚ್ಚಿನ ತೂಕ ಹೊಂದಿದೆ. ಸೌಮ್ಯ ಸ್ವಭಾವ ಹೊಂದಿದ್ದು ಸುಮಾರು 3 ಜಾತ್ರೆಯನ್ನು ಈ ಕೋಣ ಮುಗಿಸಿದೆ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:
    ಉತ್ತರ ಕನ್ನಡ: ಜಾನಪದದ ಕಥೆಯ ಪ್ರಕಾರ ಹಾನಗಲ್ಲಿನ ಸಂಸ್ಕಾರಯುತ ಕನ್ಯೆಯೊಬ್ಬಳಿಗೆ ಮೋಸ ಮಾಡಿ ಮದುವೆಯಾಗುವ ಮಂತ್ರ ತಂತ್ರ ಬಲ್ಲ ಒಬ್ಬ ದುರಾತ್ಮನನ್ನ ಆ ಕನ್ಯೆ ಕೊಂದು ನ್ಯಾಯ ಸ್ಥಾಪಿಸಿದ ಕಥೆಯನ್ನು ಕೇಳಿರುತ್ತೀರಿ. ಅವಳೇ ಮಾರಿಕಾಂಬೆ. ಆ ಜನಪದ ಕಥೆಯ ಪ್ರಕಾರ ಆತ ಕೋಣನ ರೂಪ ಧರಿಸಿ ಮಾರಿಕಾಂಬೆಯಿಂದ ತಪ್ಪಿಸಿಕೊಂಡು ಓಡುತ್ತಿರುತ್ತಾನೆ ಆಗ ತಾಯಿಯು ಖಡ್ಗ ಪ್ರಹರಿಸಿ ಅವನನ್ನು ಕೊಲ್ಲುತ್ತಾಳೆ. ಅದರ ಪ್ರತೀಕವಾಗಿಯೇ ಪ್ರತಿ ಮಾರಿಕಾಂಬಾ (Marikamba Temple Sirsi) ದೇವಸ್ಥಾನದಲ್ಲಿ ಕೋಣ ಇರುತ್ತದೆ‌. ಇನ್ನು ಪುರಾಣೋಕ್ತವಾಗಿ ಹೇಳಬೇಕಿದ್ದರೆ ತಾಯಿಯ ಮಹಿಷಾಸುರ ಮರ್ದಿನಿ ರೂಪವೇ ಮಾರಿಕಾಂಬಾ (Goddess Marikamba) ರೂಪವಾಗಿದ್ದು ಇಲ್ಲಿ ಅದರ ಪ್ರತೀಕವಾಗಿ ಕೋಣವಿದೆ.

    ಅಜಾನುಬಾಹು ಕೋಣ
    ಶಿರಸಿ ಮಾರಿಕಾಂಬೆ ದೇಗುಲದಲ್ಲೂ ಕೋಣವಿದ್ದು ಇದಕ್ಕೆ 12 ವರ್ಷ ವಯಸ್ಸು. ಸುಮಾರು 100 ಕೆಜಿಗಿಂತ ಹೆಚ್ಚಿನ ತೂಕ ಹೊಂದಿದೆ. ಸೌಮ್ಯ ಸ್ವಭಾವ ಹೊಂದಿದ್ದು ಸುಮಾರು 3 ಜಾತ್ರೆಯನ್ನು ಈ ಕೋಣ ಮುಗಿಸಿದೆ. ಜಾತ್ರೆಯ ಸಮಯದಲ್ಲಿ ಈ ಕೋಣದ ಜೊತೆಗೆ ತಾಯಿ ಮಾರಿಕಾಂಬೆಯ ಮದುವೆಯನ್ನು ಕಂಕಣ ಕಟ್ಟುವ ಶಾಸ್ತ್ರದೊಂದಿಗೆ ಆರಂಭಿಸುತ್ತಾರೆ.

    ದೇವಿ ಮಾರಿಕಾಂಬೆ


    ಗಾಂಧಿ ಪ್ರೇರಣೆಯಿಂದ ನಿಂತ ಕೋಣ ಬಲಿ
    1930ಕ್ಕಿಂತ ಹಿಂದೆ ಕೋಣದ ಬಲಿ ಮೂಲಕ ಜಾತ್ರೆ ಮುಗಿಯುತ್ತಿತ್ತು. ಆದರೆ ರಾಷ್ಟ್ರಪಿತ ಗಾಂಧಿಯವರ ಕೋರಿಕೆ ಮೇಲೆ ಪ್ರಾಣಿ ಬಲಿ ನಿಲ್ಲಿಸಿ ಈಗ ಬೂದಗುಂಬಳ ಹುಲಿಯೊಂದಿಗೆ ಜಾತ್ರೆ ಮುಗಿಯುತ್ತದೆ.

    ಇದನ್ನೂ ಓದಿ: Dodda Ganapathi Temple: ಮದುವೆ, ಕಳ್ಳತನ ಎಲ್ಲ ಸಮಸ್ಯೆಗೂ ಪರಿಹಾರ! ಶಿರಸಿ ದೊಡ್ಡ ಗಣಪತಿಯ ಮಹಿಮೆಯೂ ದೊಡ್ಡದು

    ಪಟ್ಟದ ಕೋಣ
    ಈ ಕೋಣಕ್ಕೆ ‘ಪಟ್ಟದ ಕೋಣ‘ ಎಂದೇ ಹೆಸರು. ಇದನ್ನು ನೋಡಿಕೊಳ್ಳಲೆಂದೇ ಶಂಕರ್ ಮತ್ತು ಸಚಿನ್ ಎಂಬ ಪರಿಚಾರಕರರು ಇದ್ದಾರೆ. ಇದಕ್ಕೆ ಯಾವುದೇ ಗಾಯ, ನೋವುಗಳಾಗದಂತೆ ನೋಡಿಕೊಳ್ಳಲಾಗುತ್ತದೆ.

    ಮಾರಿಕಾಂಬೆಯ ಕೋಣ


    ಇದನ್ನೂ ಓದಿ: Uttara Kannada: ಶಾರದಜ್ಜಿಯ ಹಾಡು ಕೇಳಿ! ಇವರು ಹೊನ್ನಾವರದ ಜಾನಪದ ಗಾನಶಾರದೆ

    Sirsi Marikamba Temple
    ದೇವಸ್ಥಾನಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್

    ಇದು ಮೂರನೇ ಕೋಣ
    ದೇವಿಯ ಕೋಣ ಬಿಳಿಮಿಶ್ರಿತ ಕಪ್ಪು ಬಾಲ ಹಾಗೂ ನೇರ ಕೊಂಬಿನದಾಗಿರಬೇಕಂತೆ. ಅದೇ ರೀತಿಯ ಕೋಣವನ್ನು ಪ್ರತಿ ಸಲ ಆರಿಸಲಾಗುತ್ತದೆ. ಹಾಗಾಗಿ, ಇದು ಇಲ್ಲಿನ ಮೂರನೇ ಕೋಣವಾಗಿದೆ. ಇನ್ನು ಒಳಗೆ ಹರಕೆಯ ಸಲುವಾಗಿ ಕೋಣಗಳನ್ನು ತಂದು ತಾಯಿಗೆ ಒಪ್ಪಿಸುವ ಸಂಪ್ರದಾಯವಿದೆ. ಅದನ್ನೂ ಕೂಡ ಸಮಿತಿಯೇ ಸಾಕುತ್ತದೆ‌. ಕೋಣಗಳು ಶಾಕ್ತ ಸಂಪ್ರದಾಯದ ಅವಿಭಾಜ್ಯ ಅಂಗವಾಗಿದ್ದು, ಜಾನಪದೀಯ ಇತಿಹಾಸದ ಪ್ರತೀಕವಾಗಿ ನಿಲ್ಲುತ್ತವೆ.

    ವರದಿ: ಎ.ಬಿ.ನಿಖಿಲ್  ಮುಂಡಗೋಡು
    Published by:guruganesh bhat
    First published: