• Home
  • »
  • News
  • »
  • uttara-kannada
  • »
  • Uttara Kannada: ಶಿರಸಿ ಶಾಲೆಯ ಮಕ್ಕಳು ನಾಟಕದಲ್ಲೂ ರಾಜ್ಯಕ್ಕೇ ಫಸ್ಟ್!

Uttara Kannada: ಶಿರಸಿ ಶಾಲೆಯ ಮಕ್ಕಳು ನಾಟಕದಲ್ಲೂ ರಾಜ್ಯಕ್ಕೇ ಫಸ್ಟ್!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಇನ್ನೂ ಒಂದು ವಿಶೇಷ ಅಂದ್ರೆ ನಾಟಕದ 24 ಪಾತ್ರಗಳನ್ನು ಎಂಟು ವಿದ್ಯಾರ್ಥಿಗಳಷ್ಟೇ ನಿರ್ವಹಿಸಿದರು. ಹೀಗೆ ಸರ್ಕಾರಿ ಶಾಲೆಯ ಮಕ್ಕಳ ಸಾಧನೆ ನಿಜಕ್ಕೂ ಗಮನಸೆಳೆಯಿತು.

  • News18 Kannada
  • Last Updated :
  • Uttara Kannada, India
  • Share this:

    ಶಿರಸಿ: ಗೀಯ ಗೀಯ.. ಗಾಗಿಯ ಗೀಯಾ.. ಅಂತಾ ಗೀಗಿ ಪದ ಹಾಡ್ತಾ ಈ ವಿದ್ಯಾರ್ಥಿಗಳು ಆಡಿ ತೋರಿಸ್ತಿರೋದು ವಿಜ್ಞಾನದ ನಾಟಕವನ್ನು, ವೈಜ್ಞಾನಿಕ ಮನೋಭಾವವನ್ನು. ಕಣ್ಣಿಗೆ ಕಟ್ಟುವಂತೆ ಆಡಿ ತೋರಿಸಿದ ಈ ನಾಟಕ ಜನರಿಂದಲೂ ಭೇಷ್ ಅನಿಸಿಕೊಂಡ್ತು. ಭಾರೀ ಮೆಚ್ಚುಗೆ ಗಳಿಸ್ತು. ಈ ವೈಜ್ಞಾನಿಕ ನಾಟಕ ಪ್ರದರ್ಶಿಸಿದ್ದು ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಿರಸಿಯ ಮಾರಿಕಾಂಬೆ ಶಾಲೆಯ  (Marikamba School Sirsi)ಮಕ್ಕಳು. ಕೊರೊನಾ ಲಸಿಕೆ ಹುಟ್ಟು, ಅದರ ಪರಿಣಾಮಗಳನ್ನ 'ಒಂದು ಲಸಿಕೆಯ ಕಥೆ' (Vaccine) ವಿಷಯದಡಿ ಈ ಮಕ್ಕಳು ನಾಟಕದ ಮೂಲಕ ಅಭಿನಯಿಸಿ ತೋರಿಸಿದರು.


    ಒಬ್ಬೊಬ್ಬರು ಮಕ್ಕಳ ಅಭಿನಯವೂ ಅಮೋಘವಾಗಿತ್ತು. ಮನಸ್ಸಿಗೆ ನಾಟುವಂತಿತ್ತು. ವಸ್ತುಸ್ಥಿತಿ ಅರಿವಾಗುವಂತಿತ್ತು. ಅದಕ್ಕೆ ತಕ್ಕಂತೆ ವೇಷಭೂಷಣ, ವೇದಿಕೆಯ ಅಲಂಕಾರವೂ ಇತ್ತು.


    ಇದನ್ನೂ ಓದಿ: Dolphin Viral Video: ಡಾಲ್ಫಿನ್​ಗಳ ಹೈಜಂಪ್ ಸ್ಪರ್ಧೆ! ಕಣ್ಣಿಗೆ ಮಜವೋ ಮಜ!


    ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ
    ತುಳಸಿ, ಎಂ.ವಿ ಶ್ರೇಯಾ ಸಂಗಡಿಗರು ಶಿಕ್ಷಕರಾದ ನಾರಾಯಣ್ ಭಾಗ್ವತ ಅವ್ರ ಸಹಾಯದಿಂದ ಈ ನಾಟಕದಲ್ಲಿ ಅಭಿನಯಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದರು.


    ಇದನ್ನೂ ಓದಿ:  Uttara Kannada: ಸ್ವತಃ ಕರೆಂಟ್ ತಯಾರಿಸೋ ಶಿರಸಿಯ ಗ್ರಾಮಸ್ಥರು! ಇವರಿಗೆ ಸರ್ಕಾರಿ ವಿದ್ಯುತ್ ಬೇಕಂತಿಲ್ಲ!


    24 ಪಾತ್ರಗಳನ್ನು ನಿರ್ವಹಿಸಿದ  8 ವಿದ್ಯಾರ್ಥಿಗಳು
    ಇನ್ನೂ ಒಂದು ವಿಶೇಷ ಅಂದ್ರೆ ನಾಟಕದ 24 ಪಾತ್ರಗಳನ್ನು ಎಂಟು ವಿದ್ಯಾರ್ಥಿಗಳಷ್ಟೇ ನಿರ್ವಹಿಸಿದರು. ಹೀಗೆ ಸರ್ಕಾರಿ ಶಾಲೆಯ ಮಕ್ಕಳ ಸಾಧನೆ ನಿಜಕ್ಕೂ ಗಮನಸೆಳೆಯಿತು.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: