• Home
  • »
  • News
  • »
  • uttara-kannada
  • »
  • Uttara Kannada: ಕಡಿಮೆ ಖರ್ಚು, ಹೆಚ್ಚು ಲಾಭ! ಕೃಷಿಕರೇ ಈ ಪಂಪ್ ಬಳಸಿ ನೋಡಿ

Uttara Kannada: ಕಡಿಮೆ ಖರ್ಚು, ಹೆಚ್ಚು ಲಾಭ! ಕೃಷಿಕರೇ ಈ ಪಂಪ್ ಬಳಸಿ ನೋಡಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅವರ ಈ ಪ್ರಯೋಗಕ್ಕೆ ತಗುಲಿದ ಖರ್ಚು ಕೇವಲ ₹2500 ದಿಂದ ₹3000 ರೂಪಾಯಿ ಮಾತ್ರ. ಈಗ ಮಾತ್ರ ಒಂದು ರೂಪಾಯಿ ಖರ್ಚಿಲ್ಲದೇ ಇಪ್ಪತ್ನಾಲ್ಕು ತಾಸೂ ಇವರ ಮನೆ ಅಂಗಳಕ್ಕೆ ನೀರು ಬರ್ತಿದೆ.

  • News18 Kannada
  • Last Updated :
  • Uttara Kannada, India
  • Share this:

    ಚಿಮ್ಮುತ್ತಾ ಚಿಮ್ಮುತ್ತಾ ಹರಿಯೋ ನೀರಿನ ಬುಗ್ಗೆ. ಅಲ್ಲಲ್ಲಿ ಅಳವಡಿಸಲಾದ ಪೈಪ್ಗಳು. ತಮ್ಮದೇ ಆದ ಪ್ರಯತ್ನದಿಂದ ನೀರಿನ ಚಿಲುಮೆಯನ್ನ ವರ್ಷವಿಡೀ ಸಂಗ್ರಹಿಸಿಡುತ್ತಿದ್ದಾರೆ ಇಲ್ಲೊಬ್ಬ ಕೃಷಿ ಸಾಧಕ. ಹೌದು, ವಯಸ್ಸು 60 ದಾಟಿದ್ರೂ ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಿರಸಿಯ (Sirsi Farmer) ಕುಂಟೇಮನೆಯ ಗೋವಿಂದ ಹೆಗಡೆ ಅವರದ್ದು ಪ್ರಯೋಗಶೀಲ ಬದುಕು. ಕೃಷಿಯಲ್ಲಿ ಹಲವು ಯಶಸ್ವಿ ಕಂಡ (Success Story) ಇವರು ಮೆಕಾನಿಕಲ್ ಪದವಿ ಪಡೆಯದಿದ್ರೂ ನೀರನ್ನ ಎತ್ತರದಲ್ಲಿರುವ ತಮ್ಮ ಮನೆಗೆ ಪಂಪ್ (Ram Pump) ಮಾಡ್ತಿದ್ದಾರೆ. ಅದೂ ಯಾವುದೇ ಇಂಧನ, ವಿದ್ಯುತ್ ಬಳಸದೇ ಮಾಡಿದ ರ್ಯಾಂಪ್ ಪಂಪ್​ನಿಂದ!


    ನೀರಿನ ಬುಗ್ಗೆಯೊಂದು ಮೇಲ್ಮುಖಕ್ಕೆ ಪ್ರೆಸ್ ಆಗಿ ಎತ್ತರಕ್ಕೆ ಸಾಗಿಸೋ ಪಂಪ್​ನ ಗೋವಿಂದ ಹೆಗಡೆಯವ್ರು ಲಾಕ್ಡೌನ್ ಟೈಮಲ್ಲಿ ತಯಾರಿಸಿದ್ರಂತೆ. ಅದೇ ಪಂಪ್​ನ ಇದೀಗ ಮೂವತ್ತೈದು ಅಡಿ ಮೇಲಿರುವ ತಮ್ಮ ಮನೆಗೆ ನೀರನ್ನ ಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.


    ಯೂಟ್ಯೂಬ್ ನೋಡಿ ಸಾಧನೆ!
    ಗೋವಿಂದ ಹೆಗಡೆ ಅವರು ಮೂರು ವರ್ಷದ ಹಿಂದೆ ತಮ್ಮ ತೋಟದ ಕೆಳಗೆ ಹರಿದುಹೋಗುತ್ತಿದ್ದ ನೀರಿಂದ ಏನಾದರೂ ಉಪಯೋಗ ಪಡೆದುಕೊಳ್ಳೋಣ ಪ್ಲ್ಯಾನ್ ಹಾಕಿದ್ರು. ಅದಕ್ಕೆ ಪೂರಕವಾಗಿ ಯೂಟ್ಯೂಬ್​ನಲ್ಲಿ ಮಧ್ಯ ಏಷ್ಯಾದಲ್ಲಿ ಎತ್ತರದಲ್ಲಿದ್ದ ಮನೆಗಳಿಗೆ ಯಾವುದೇ ಇಂಧನ ಬಳಸದೇ ನೀರು ಪೂರೈಸುವ ವಿಧಾನವನ್ನು ಕಂಡುಕೊಂಡ್ರು.


    ಕರೆಂಟ್ ಸಹ ಬೇಡ!
    ಆಗ ತಮ್ಮ ಮನೆಯಿಂದ ಮೂವತ್ತೈದು ಫೀಟ್ ಕೆಳಗೆ ಇರುವ ಈ ನೀರನ್ನು ಮನೆಯವರೆಗೂ ಸಾಗಿಸುವಂತಹ ವ್ಯವಸ್ಥೆ ಮಾಡಿಕೊಂಡ್ರು. ಎರಡು ಫೂಟ್ ಬೇರಿಂಗ್​ಗೆ ಪಿವಿಸಿ ಪೈಪ್ ಅನ್ನು ತ್ರಿಶೂಲಾಕಾರದಲ್ಲಿ ಜಾಯಿಂಟ್ ಮಾಡಿದ್ರು. ಒಂದು ತುದಿಗೆ ನೀರನ್ನು ಸಾಗಿಸುವ ಹಾಗೆ ನೋಡಿಕೊಂಡು ಆ ನೀರಿನ ಹರಿವಿನ ಶಕ್ತಿಯಿಂದಲೇ ನೀರು ತಮ್ಮ ಮನೆಯವರೆಗೂ ಪಂಪ್ ಆಗುವ ಹಾಗೆ ಮಾಡಿಕೊಂಡ್ರು.


    ಇದನ್ನೂ ಓದಿ: Success Story: ಜೇನುತುಪ್ಪವೊಂದೇ ಅಲ್ಲ, ಮೇಣದಿಂದಲೂ ಲಾಭ ಗಳಿಸಬಹುದು!


    3 ಸಾವಿರದ ಒಳಗೆ ಎಲ್ಲಾ ಮುಗಿತು!
    ಅವರ ಈ ಪ್ರಯೋಗಕ್ಕೆ ತಗುಲಿದ ಖರ್ಚು ಕೇವಲ ₹2500 ದಿಂದ ₹3000 ರೂಪಾಯಿ ಮಾತ್ರ. ಈಗ ಮಾತ್ರ ಒಂದು ರೂಪಾಯಿ ಖರ್ಚಿಲ್ಲದೇ ಇಪ್ಪತ್ನಾಲ್ಕು ತಾಸೂ ಇವರ ಮನೆ ಅಂಗಳಕ್ಕೆ ನೀರು ಬರ್ತಿದೆ.


    ಇತರರಿಗೂ ಸಹಾಯ!
    ತಾನು ಕಲಿತ ವಿದ್ಯೆಯಿಂದ ಬೇರೆಯವರ ನೀರಿನ ದಾಹವನ್ನೂ ಗೋವಿಂದ ಹೆಗಡೆ ನೀಗಿಸಿದ್ದಾರೆ. ಇದೇ ರೀತಿ ಮೂವತ್ತು ಜನರಿಗೆ ಈ ಟೆಕ್ನಿಕ್​ನಿಂದ ನೀರು ಪಂಪ್ ಮಾಡಿಕೊಟ್ಟು ಸಕ್ಸಸ್ ಆಗಿದ್ದಾರೆ.


    ಇದನ್ನೂ ಓದಿ: Positive Story: ಉತ್ತರ ಕನ್ನಡಕ್ಕೆ ಮಲ್ಟಿ ನ್ಯಾಷನಲ್ ಕಂಪನಿಗಳು! ಸರ್ಕಾರಕ್ಕೇ ಮಾದರಿಯಾಗ್ತಿದೆ ಮನುವಿಕಾಸ


    ಜೊತೆಗೆ ಕೃಷಿಗೂ ಸರಿಯಾದ ಮಾರ್ಗದರ್ಶನ ಕೊಟ್ಟು ಜನರಿಗೆ ಸಹಾಯ ಮಾಡ್ತಿದ್ದಾರೆ. ಹೀಗೆ ಗೋವಿಂದ ಹೆಗಡೆ ಅವರ ಪ್ರಯೋಗಶೀಲ ಬದುಕಿನಿಂದ ಇನ್ನಷ್ಟು ಇಂತಹ ಅತ್ಯುತ್ತಮ ಫಲಿತಾಂಶ ಬರಲಿ ಅನ್ನೋದೆ ನಮ್ಮ ಆಶಯ.


    ವರದಿ: ಎ.ಬಿ.ನಿಖಿಲ್, ಮುಂಡಗೋಡ್

    Published by:ಗುರುಗಣೇಶ ಡಬ್ಗುಳಿ
    First published: