• Home
  • »
  • News
  • »
  • uttara-kannada
  • »
  • Uttara Kannada: ಬಿದಿರಿಗೆ ಸೆಡ್ಡು ಹೊಡೆಯುತ್ತಿದೆ ಈ ಕಬ್ಬು, ಆಕಾಶ ಮುಟ್ಟೋದೊಂದು ಬಾಕಿ!

Uttara Kannada: ಬಿದಿರಿಗೆ ಸೆಡ್ಡು ಹೊಡೆಯುತ್ತಿದೆ ಈ ಕಬ್ಬು, ಆಕಾಶ ಮುಟ್ಟೋದೊಂದು ಬಾಕಿ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸಾಮಾನ್ಯವಾಗಿ 6-7 ಅಡಿ ಕಬ್ಬು ಬೆಳೆಯೋದನ್ನ ನೋಡಿದ್ದೀವಿ. ಆದ್ರಿಲ್ಲಿ ನೀವ್ ನೋಡ್ತಿರೋ ಈ ಕಬ್ಬಿನ ಎತ್ತರ 20 ಅಡಿ.

  • Share this:

    ಶಿರಸಿ:  ಅಡಿಕೆಯ ಮರದಂತೆ ತೂಗುತ್ತಿರುವ ಇದು ಕಬ್ಬಾ (Sugarcane) ಅಥವಾ ಬಿದಿರಾ? ಅನ್ನೋ ಕನ್ಫ್ಯೂಶನ್. ಲೋಲಕದ ಹಾಗೆ ಅಲುಗಾಡುವ ಇದರ ಎತ್ತರ ನಿಜಕ್ಕೂ ಅಚ್ಚರಿ ಮೂಡಿಸುತ್ತೆ! ಈ ಲೆವಲ್​ಗೂ ಕಬ್ಬು (Sugarcane Farming) ಗೊಂದಲ ಮೂಡಿಸುತ್ತೆ. ಹಾಗಿದ್ರೆ ಈ ಕಬ್ಬಿನ ವಿಶೇಷತೆ ಏನು ಅಂತೀರಾ? ಹೇಳ್ತೀವಿ ನೋಡಿ.


    ಸಾಮಾನ್ಯವಾಗಿ 6-7 ಅಡಿ ಕಬ್ಬು ಬೆಳೆಯೋದನ್ನ ನೋಡಿದ್ದೀವಿ. ಆದ್ರಿಲ್ಲಿ ನೀವ್ ನೋಡ್ತಿರೋ ಈ ಕಬ್ಬಿನ ಎತ್ತರ 20 ಅಡಿ. ಹೌದು, ಅಡಿಕೆ ಮರಕ್ಕೆ ಕಾಂಪಿಟೇಶನ್ ಅನ್ನೋ ರೇಂಜಿಗೆ ಈ ಕಬ್ಬು ಬೆಳೆಯೋದಾದ್ರೂ ಹೇಗೆ ಅನ್ನೋ ಪ್ರಶ್ನೆ ಮೂಡೋದು ಸಹಜ.


    ಇವರೇ ಇಷ್ಟೆತ್ತರದ ಕಬ್ಬು ಬೆಳೆದವರು?
    ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಕಾನಸೂರಿನ ವಿಜಯೇಂದ್ರ ನಾಯ್ಕ್ ಅವರು ಇಂತಹ ಎತ್ತರದ ಕಬ್ಬು ಬೆಳೆಯುವುದರಲ್ಲಿ ನಿಸ್ಸೀಮ. ವಿಜಯೇಂದ್ರ ನಾಯ್ಕ್ ಮಾಜಿ ಬ್ಯಾಂಕ್ ಉದ್ಯೋಗಿ, ಕಳೆದ ಎಂಟು ವರ್ಷದಿಂದ ಕಬ್ಬಿನ ಕೃಷಿ ಮಾಡುತ್ತಿದ್ದಾರೆ. ಸಾಲಾಗಿ ನಾಟಿ ಮಾಡುವ ಪದ್ಧತಿ ಅವರಿಗೆ ಒಗ್ಗಲಿಲ್ಲ. ಹೀಗಾಗಿ ಪಿಟ್ ಹಾಗೂ ಟ್ರೇಂಚ್ ಮಾದರಿಯ ಕೃಷಿಯನ್ನು ಅಳವಡಿಸಿಕೊಂಡು ಆಳೆತ್ತರದ ಕಬ್ಬನ್ನು ಬೆಳೆಯುತ್ತಿದ್ದಾರೆ.


    ಈ ತಳಿಯ ಕಬ್ಬುಗಳನ್ನೂ ಬೆಳೆಯಹುದು!
    ಇದಕ್ಕಾಗಿ ಅವರು ಆಯ್ದುಕೊಂಡಿದ್ದು ಸಂಜೀವಿನಿ, ಕೋಣನಕಟ್ಟೆ, ರಸದಾಳೆ, ಮಂಡ್ಯ ಹಾಗೂ ಹೆಬ್ಬಾಳ ಕಬ್ಬುಗಳು. ಇವುಗಳೆಲ್ಲವನ್ನು ಅವರು ಒಟ್ಟಾಗಿ ಬೆಳೆಯುತ್ತಾರೆ. ಈ ಕಬ್ಬನ್ನು ಅವರು ಗೃಹ ಬಳಕೆಗೆ ಮಾತ್ರ ಬಳಸುತ್ತಾರೆ. ಮಾರಾಟ ಮಾಡುವುದು ಬಹಳ ಅಪರೂಪ ಎನ್ನುತ್ತಾರೆ ವಿಜಯೇಂದ್ರ.




    ಇದನ್ನೂ ಓದಿ: Gumate Pang: ಗಣಪತಿ ದೇವರ ಇಷ್ಟದ ವಾದ್ಯ ಗುಮಟೆ ಪಾಂಗ್! ಇದು ಲೋಕಲ್ ಬ್ಯಾಂಡ್ ಸೆಟ್!


    ಮಣ್ಣನ್ನು ಗಮನಿಸಿ ಗುಂಡಿ ತೆಗೆದು ಟ್ರ್ಯಾಕ್ಟರ್ ಮೂಲಕ ಸೆಕ್ಷನ್ ಮಾಡಿಸಿ ನಂತರ ಒಂದು ಕಬ್ಬಿನ ನಾಟಿ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಗ್ಯಾಪ್ ಇಟ್ಟುಕೊಂಡು ಮಾಡುವ ಕೃಷಿಯನ್ನು ಪಿಟ್ ಹಾಗೂ ಟ್ರೆಂಚ್ ಕೃಷಿ ಎನ್ನುತ್ತಾರೆ. ಇನ್ನು ಮಲೆನಾಡಿನಲ್ಲಿ ಕಬ್ಬನ್ನು ಸಾಲಾಗಿ ನಾಟಿ ಮಾಡುವ ವಿಧಾನವಿದ್ದು ಈ ಪಿಟ್ ವಿಧಾನ ಹೆಚ್ಚಿನ ಇಳುವರಿ ಹಾಗೂ ಕಡಿಮೆ ಖರ್ಚಿನದ್ದಾಗಿರುತ್ತದೆ.


    ಇದನ್ನೂ ಓದಿ: Uttara Kannada: ತಾಯಿಯನ್ನು ಸದಾ ಜೀವಂತವಿಟ್ಟ ಮಗ, ಅವ್ವನ ನೆನಪು ಎಂಬ ಮಮತೆಯ ಮ್ಯೂಸಿಯಂ


    ವಿವಿಧ ತಳಿಯ ಕಬ್ಬುಗಳು ಒಟ್ಟಾಗಿ ಬೆಳೆಯುವುದರಿಂದ ಯಾವ ಕಬ್ಬು ಎಂದು ಸುಲಭವಾಗಿ ತಿಳಿಯದು. ಟೇಸ್ಟ್ ನೋಡಿದ್ರಷ್ಟೇ ಅದ್ರ ಬಗ್ಗೆ ಗೊತ್ತಿದ್ದವರಿಗೆ ವ್ಯತ್ಯಾಸ ಗೊತ್ತಾಗುತ್ತವೆ. ಇನ್ನು ಕೋಣನಕಟ್ಟೆ ಕಬ್ಬಿಗೆ ಹಾಗೂ ಅದರ ಬೆಲ್ಲಕ್ಕೆ ಬೇಡಿಕೆ ಜಾಸ್ತಿಯಿದೆ. ಒಟ್ಟಿನಲ್ಲಿ ಈ ಆಳೆತ್ತರದ ಕಬ್ಬು ಬಾಯಿಗೆಷ್ಟು ಸಿಹಿ ನೀಡುತ್ತದೋ, ಕಣ್ಣಿಗೂ ಅಷ್ಟೇ ಮುದ ನೀಡುತ್ತವೆ.

    Published by:ಗುರುಗಣೇಶ ಡಬ್ಗುಳಿ
    First published: