ಉತ್ತರ ಕನ್ನಡ: ರುಚಿ ರುಚಿಯಾದ ಬಜ್ಜಿ. ಚಟ್ನಿ ನೆಚ್ಚಿಕೊಂಡು ಸವಿಯುತ್ತಿರೋ ಗ್ರಾಹಕರು. ಬೇರೆಲ್ಲ ಕಡೆ ಮೆಣಸಿಕಾಯಿ ಬಜ್ಜಿ ಫೇಮಸ್ ಇದ್ರೆ, ಇಲ್ಲಿ ಮಾತ್ರ ಬದನೆಕಾಯಿ ಬಜ್ಜಿ (Brinjol Bajji) ಸಖತ್ ಡಿಮ್ಯಾಂಡ್ ಹೊಂದಿದೆ. ಎಣ್ಣೆಯಿರೋ ಬಾಣಲೆಗೆ ಬಜ್ಜಿ ಹಾಕ್ತಿದ್ರೆ, ಇತ್ತ ಬಾಯಲ್ಲಿ ನೀರೂರಿಸುತ್ತೆ. ಹಾಗಿದ್ರೆ ಹೇಗಿರುತ್ತೆ ಬದನೆಕಾಯಿ ಬಜ್ಜಿ ಟೇಸ್ಟಿ ಅನ್ನೋದಕ್ಕೆ ಈ ಸ್ಟೋರಿ ನೋಡಿ.
ಬದನೆಕಾಯಿ ಬಜ್ಜಿ
ಉತ್ತರ ಕನ್ನಡ ಶಿರಸಿಯ ಸಿಪಿ ಬಜಾರ್ನಲ್ಲಿ ಈ ಸ್ಪೆಷಲ್ ಬಜ್ಜಿ ಬೋಂಡಾ ಅಂಗಡಿ ಇದೆ. ಇಲ್ಲಿ ಸಿಗೋ ಬದನೆಕಾಯಿ ಬಜ್ಜಿ ಅಂದ್ರೆ ಎಲ್ರಿಗೂ ಅಚ್ಚುಮೆಚ್ಚು. ಅದ್ರಲ್ಲೂ ಇಲ್ಲಿ ತಯಾರಿಸೋ ಬದನೆಕಾಯಿ ಬಜ್ಜಿ ಅಂತೂ ಸಖತ್ ಫೇಮಸ್. ತುಂಬಾನೇ ಟೇಸ್ಟ್ ಹಾಗೂ ಸ್ಪೈಸಿ ಆಗಿರೋ ಬದನೆಕಾಯಿ ಬಜ್ಜಿ ಸವಿಯೋಕ್ಕಂತಲೇ ಸಾಯಂಕಾಲದ ವೇಳೆಗೆ ಜನ ಇಲ್ಲಿಗೆ ಆಗಮಿಸ್ತಾರೆ.
ಇದನ್ನೂ ಓದಿ: Uttara Kannada: ದೇವರಿಗೇ ಚೆಂದದ ಮನೆ ಕಟ್ಟಿಸಿದ್ರು ನೋಡಿ ಭಕ್ತರು!
ಗೋಳಿ ಬಜೆನೂ ಇದೆ
ನಾಗೇಶ್ ಮೊಗೇರ್ ಎಂಬವರಿಗೆ ಸೇರಿದ ಅಂಗಡಿ ಇದಾಗಿದ್ದು, ಇವರು ಮೂಲತಃ ಮುರುಡೇಶ್ವದವರಾಗಿದ್ದು, ಶಿರಸಿಯಲ್ಲಿ ಗಲ್ಲಿ ಗಲ್ಲಿ ಸುತ್ತಿ ಚಹಾ ಮಾರುತ್ತಿದ್ದರು. ಈಗ ಒಂದು ಅಂಗಡಿ ಹಾಕಿಕೊಂಡಿದ್ದಾರೆ. ಬಿಸಿ ಬಿಸಿ ಬದನೆಕಾಯಿ ಬಜ್ಜಿಗಿಲ್ಲಿ ಒಂದಕ್ಕೆ 15 ರೂಪಾಯಿಯಷ್ಟೇ. ಜೊತೆಗೆ ಗೋಳಿಬಜೆ ಕೂಡಾ ಈ ಕ್ಯಾಂಟೀನ್ ಸ್ಪೆಷಲ್. ಹಸಿ ಮೆಣಸಿನ ಚಟ್ನಿ ನೆಚ್ಚಿಕೊಂಡು ತಿಂದ್ರಂತೂ ಈ ಬಜ್ಜಿ, ಬೋಂಡಾಗಳು ನಾಲಗೆಯ ರುಚಿ ಹೆಚ್ಚಿಸುತ್ತೆ.
ಇದನ್ನೂ ಓದಿ: Uttara Kannada: 142 ವರ್ಷಗಳ ಲಿಖಿತ ಇತಿಹಾಸವಿರುವ ಬಗ್ಗೋಣ ಪಂಚಾಂಗ ಬರೆಯುವ ಕನ್ನಡತಿ!
ಒಟ್ಟಿನಲ್ಲಿ ಸಖತ್ ಟೇಸ್ಟಿ ಆಗಿರೋ ಬದನೆಕಾಯಿ ಬಜ್ಜಿ ಈ ಕ್ಯಾಂಟೀನ್ ಸ್ಪೆಷಲ್ ಆಗಿದ್ದು, ಜನ್ರಂತೂ ಸಾಯಂಕಾಲದ ಚಹಾ ಜೊತೆಗೆ ನೆಚ್ಚಿಕೊಳ್ಳೋಕೆ ಇಷ್ಟಪಡ್ತಾರೆ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ