ಜೇನು ಹನಿ ನೋಡಿದ್ದೀವಿ, ಸವಿದಿದ್ದೀವಿ, ಆದ್ರೆ ಇಲ್ಲಿರೋದೆಲ್ಲವೂ ಜೇನಿನ (Honey Business) ಉತ್ಪನ್ನಗಳು ಅಂದ್ರೆ ನೀವ್ ನಂಬ್ತೀರಾ? ನಿಜ, ಜೇನುಮೇಣದಿಂದ (Honey Wax) ತಯಾರಾಗಿದೆ ನೋಡಿ ಲಿಪ್ ಸ್ಟಿಕ್, ಫೇಸ್ ಕ್ರೀಂ ಹಾಗೂ ಇನ್ನಿತರ ಕಾಸ್ಮೆಟಿಕ್ ಜೆಲ್ ಗಳು. ಜೇನು ಸಾಕಾಣಿಕೆಯಿಂದ ಇಷ್ಟೆಲ್ಲ ಲಾಭ ಮಾಡ್ಕೋಬಹುದು ಅಂತಾ ಉತ್ತರ ಕನ್ನಡದ (Uttara Kannada) ಮಧುಕೇಶ್ವರ್ ಹೆಗಡೆಯವರ ಸಾಧಿಸಿ ತೋರಿಸಿದ್ದಾರೆ.
ಹೌದು, ಸಾಮಾನ್ಯವಾಗಿ ಜೇನು ಸಾಕಾಣಿಕೆ ಮಾಡೋರು ಕೂಡಾ ಬರೇ ಹನಿಗಾಗಿ ಅಷ್ಟೇ ಬಳಸಿ ಮತ್ತೆ ನಿರುಪಯುಕ್ತ ಎಂದು ಭಾವಿಸ್ತಾರೆ. ಆದರೆ ತಾರಗೋಡಿನ ಕಲ್ಲಳ್ಳಿಯ ಮಧುಕೇಶ್ವರ್ ಹೆಗಡೆಯವರ ಅದೆಲ್ಲವನ್ನೂ ಜೇನು ಮೇಣದಿಂದ ಹಲವು ನೈಸರ್ಗಿಕ ಉತ್ಪನ್ನಗಳನ್ನ ತಯಾರಿಸಿದ್ದಾರೆ. ಅದ್ರಿಂದ ಮುಖ, ಕೈ ಕಾಲುಗಳಿಗೆ ಹಚ್ಚುವ ಬಾಡಿ ಲೋಷನ್ ಮಾದರಿಯ ಕ್ರೀಂ, ಲಿಪ್ ಸ್ಟಿಕ್, ಇನ್ನಿತರ ಕಾಸ್ಮೆಟಿಕ್ ವ್ಯಾಕ್ಸ್ ಗಳಾಗಿ ಪರಿವರ್ತಿಸಿದ್ದಾರೆ.
ಜೇನುಮೇಣವನ್ನ ಮೊದಲು ಹೀಗೆ ಮಾಡ್ತಾರೆ
ಮಧುಕೇಶ್ವರ್ ಹೆಗಡೆ ಅವರು ಜೇನುತುಪ್ಪ ಸಂಗ್ರಹ ಆದ ಮೇಲೆ ಜೇನುಗೂಡನ್ನ ಹಿಂಡಿ ತೆಗೆದು ನಂತರ ಅದನ್ನು ಕಾಯಿಸಿಕೊಳ್ಳುತ್ತಾರೆ. ಆಗ ಈ ರೀತಿ ನುಣುಪಾದ ಮೊಂಬತ್ತಿ ರೂಪದ ಗಟ್ಟಿ ವಸ್ತು ಸಿಗುತ್ತದೆ. ಅದುವೇ ಜೇನು ಮೇಣ. ಬಳಿಕ ಅದನ್ನ ತಮಗೆ ಬೇಕಾದ ರೀತಿಯಲ್ಲಿ ಪರಿವರ್ತಿಸಿಕೊಳ್ಳಬಹುದು.
ಇದನ್ನೂ ಓದಿ: Ghante Ganapati: ಈ ಗಣಪತಿಗೆ ಘಂಟೆ ಅಂದ್ರೆ ಇಷ್ಟ! ಹಸಿರು ಕಾಡಿನ ನಡುವೆ ಸಿದ್ಧಿ ವಿನಾಯಕನ ತಾಣ
ಈ ವಸ್ತುಗಳ ತಯಾರಿಕೆಗೆಲ್ಲ ಬಳಕೆ ಆಗುತ್ತಂತೆ
ಬಹುತೇಕ ನೀವು ಹಚ್ಚಿಕೊಳ್ಳುವ ಎಲ್ಲಾ ಕಾಸ್ಮೆಟಿಕ್ಗಳಲ್ಲಿಯೂ ಈ ಮೇಣವನ್ನು ಉಪಯೋಗಿಸ್ತಾರೆ. ಹಲ್ಲಿನ ಪುಡಿ, ಕ್ಯಾಂಡಲ್ ಹಾಗೂ ಅಕ್ಕಸಾಲಿಗರ ಕೆಲಸಕ್ಕೆ, ಪೇಂಟ್ ತಯಾರಿಕೆ, ಹಿಮ್ಮಡಿ ಸವೆತ ನಿವಾರಣೆಗೆ ಇನ್ನೂ ಹೇಳಬೇಕಂದರೆ ನಮ್ಮ ಶೂಪಾಲಿಶ್ ಕ್ರೀಂ ಅಲ್ಲೂ ಜೇನು ಮೇಣವಿರುತ್ತದೆ. ಆದರೆ ಜೇನು ಮೇಣದ ಮಹಿಮೆ ಗೊತ್ತಿಲ್ಲದವರು ಇಷ್ಟೆಲ್ಲ ಸಾಧ್ಯ ಅನ್ನೋದನ್ನ ತಿಳಿದರೆ ಜೇನು ಸಾಕಾಣಿಕೆಯಿಂದ ಮಾಡುವ ಲಾಭ ಡಬಲ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: Positive Story: ಉತ್ತರ ಕನ್ನಡಕ್ಕೆ ಮಲ್ಟಿ ನ್ಯಾಷನಲ್ ಕಂಪನಿಗಳು! ಸರ್ಕಾರಕ್ಕೇ ಮಾದರಿಯಾಗ್ತಿದೆ ಮನುವಿಕಾಸ
ಹೀಗೆ ಜೇನು ಮೇಣದ ಉಪಯೋಗ ನೋಡಿದ್ಮೇಲಾದರೂ ಇಂತಹ ಕ್ರಿಯಾಶೀಲ ಪ್ರಯೋಗಕ್ಕೆ ಕೈ ಹಾಕಿದಲ್ಲಿ ಎಲ್ಲವೂ ಜೇನಿನಂತೆ ಸಿಹಿಯಾಗುತ್ತೆ ಅನ್ನೋದರಲ್ಲಿ ಸಂಶಯವಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ