Yakshagana In America: ಅಮೆರಿಕಾ ನೆಲದಲ್ಲಿ ಯಕ್ಷ ಕಲೆ ಉಣಬಡಿಸಿದ ಶಿರಸಿ ಮಹಿಳೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕನ್ನಡಿಗರಷ್ಟೇ ಅಲ್ಲದೇ, ಸುಮಾರು 15 ಕ್ಕೂ ಹೆಚ್ಚು ವಿವಿಧ ರಾಜ್ಯದ ವಿವಿಧ ಭಾಷೆಯ ಜನರು, ಅಮೇರಿಕಾದ ಪ್ರಜೆಗಳು ಉತ್ಸುಕತೆಯಿಂದ ಪಾಲ್ಗೊಳ್ಳುತ್ತಿದ್ದಾರೆ.

  • News18 Kannada
  • 5-MIN READ
  • Last Updated :
  • Sirsi, India
  • Share this:

ಉತ್ತರ ಕನ್ನಡ: ತಕಧಿಮಿತ ಅಂತಾ ಹೆಜ್ಜೆ ಹಾಕ್ತಿರೋ ಯುವತಿಯರು. ಯಕ್ಷಗಾನ ಟೀಚರ್​ನ್ನೇ ಯಥಾವತ್ತಾಗಿ ಪಾಲಿಸೋ ಶಿಷ್ಯೆಯರು. ಇದ್ಯಾವುದೋ ಕರಾವಳಿಯ ಯಕ್ಷ ತರಬೇತಿ ಕೇಂದ್ರ ಅಂದ್ಕೊಂಡ್ರೆ ನಿಮ್ಮ ಊಹೆ ತಪ್ಪು. ಇದು ವಿಶ್ವದ ದೊಡ್ಡಣ್ಣ ಅಮೇರಿಕಾದಲ್ಲಿ (Yakshagana In America) ನಡೆಯುತ್ತಿರೋ ಯಕ್ಷಾಭ್ಯಾಸ. ಕರುನಾಡಿ ಗಂಡುಕಲೆಗೂ, ಅಮೇರಿಕಾಕ್ಕೂ ಈಗ ಹತ್ತಿರದ ಸಂಬಂಧ.


ಯೆಸ್, ಯಕ್ಷಗಾನ ಅಂದ್ರೇನೆ ವಿಶ್ವಗಾನ ಅನ್ನೋ ಮಾತಿದೆ. ಅಂತೆಯೇ ಅಮೇರಿಕಾದ ನೆಲದಲ್ಲೂ ಆಗೊಮ್ಮೆ ಈಗೊಮ್ಮೆ ಯಕ್ಷ ಪ್ರದರ್ಶನ ನಡೆಯುವುದೂ ಇದೆ. ಅನಿವಾಸಿ ಭಾರತೀಯ ಕನ್ನಡಿಗರು ಯಕ್ಷಗಾನ ಕೂಟವನ್ನ ಆಯೋಜಿಸಿದ್ರೆ, ನಮ್ಮ ರಾಜ್ಯದ ಕಲಾವಿದರು ತೆರಳಿ ಪ್ರದರ್ಶನ ನೀಡ್ತಾ ಬಂದಿದ್ದಾರೆ.
ರಾವಣಾವಸಾನ ಪ್ರಸಂಗದಲ್ಲಿ ಹೆಣ್ಣು ಮಕ್ಕಳೇ ಪಾತ್ರಧಾರಿಗಳು!
ಶಿರಸಿಯ ವನಿತಾ ಸಮಾಜದವರು ಅಮೇರಿಕಾದ ಕ್ಯಾಲಿಫೋರ್ನಿಯಾ ಕನ್ನಡ ಕೂಟದಿಂದ ಆಹ್ವಾನಿತರಾಗಿ "ರಾವಣಾವಸಾನ" ಎಂಬ ಹೆಣ್ಣುಮಕ್ಕಳೇ ಪಾತ್ರಧಾರಿಗಳಾಗಿರುವ ಯಕ್ಷಗಾನವನ್ನು ಪ್ರದರ್ಶಿಸಿದ್ದರು. ಕಲಾವಿದೆ ಸುಮಾ ಗಡಿಗೆಹೊಳೆ ನೇತೃತ್ವದ ಈ ತಂಡದ ಪ್ರದರ್ಶನ ಭಾರೀ ಮೆಚ್ಚುಗೆ ಪಡೆದಿತ್ತು.


ಅಮೆರಿಕನ್ನರಿಗೆ ಯಕ್ಷ ತರಬೇತಿ
ಇಲ್ಲಿಗೆ ನಿಲ್ಲದ ಅಮೇರಿಕಾದ ಅನಿವಾಸಿ ಕನ್ನಡಿಗರ ಯಕ್ಷಾಭಿಮಾನ ಇದೀಗ ಅವರಲ್ಲಿ ಯಕ್ಷಗಾನ ಕಲಿಕೆಯ ಉತ್ಸಾಹ ಮೂಡುವಂತೆ ಮಾಡಿದೆ. ಹೀಗಾಗಿ ಶಿರಸಿಯ ವೃತ್ತಿಪರ ಕಲಾವಿದೆ ಸುಮಾ ಗಡಿಹೊಳೆ ಅವರಿಂದ ಇದೀಗ ಅಮೇರಿಕಾದಲ್ಲಿಯೇ ಯಕ್ಷಗಾನ ತರಬೇತಿ ಪಡೆಯುತ್ತಿದ್ದಾರೆ.


ಇದನ್ನೂ ಓದಿ: Idagunji Ganapati: ಮಹತೋಭಾರ ವಿನಾಯಕನ ಕ್ಷೇತ್ರ ದರ್ಶನ, ಇದು ಇಡಗುಂಜಿ ಗಣಪತಿಯ ಮಹಿಮೆ


ಅದಕ್ಕಾಗಿಯೇ ಸುಮಾ ಅವರು ಅಮೇರಿಕಾ ಪಯಣ ಮಾಡಿದ್ದು, ಕಳೆದ ಏಪ್ರಿಲ್ 30 ರಿಂದ ಈ ತರಬೇತಿ ಶುರುವಾಗಿದೆ. ಕನ್ನಡಿಗರಷ್ಟೇ ಅಲ್ಲದೇ, ಸುಮಾರು 15 ಕ್ಕೂ ಹೆಚ್ಚು ವಿವಿಧ ರಾಜ್ಯದ ವಿವಿಧ ಭಾಷೆಯ ಜನರು, ಅಮೇರಿಕಾದ ಪ್ರಜೆಗಳು ಉತ್ಸುಕತೆಯಿಂದ ಪಾಲ್ಗೊಳ್ಳುತ್ತಿದ್ದಾರೆ.
ಸಂಸ್ಕೃತಿಯ ಪರಿಚಯ
"ಕೃಷ್ಣಾರ್ಜುನ ಕಾಳಗ" ಪ್ರಸಂಗವನ್ನು ಇಲ್ಲಿನ ಅನಿವಾಸಿ ಭಾರತೀಯರಿಗೆ ಸುಮಾ ಗಡಿಗೆಹೊಳೆ ಮತ್ತು ತಂಡ ಕಲಿಸುತ್ತಿದೆ. ನಾರದ, ಕೃಷ್ಣ, ಅರ್ಜುನ ಮುಂತಾದ ಪಾತ್ರಗಳಿರುವ ವೈವಿಧ್ಯಮಯ ಪ್ರಸಂಗ ಇದಾಗಿದೆ.


ಇದನ್ನೂ ಓದಿ: Positive Story: ಇವ್ರು ಮರ ಹತ್ತುವ ಮಹಿಳೆ, 50 ವರ್ಷ ಆದ್ರೂ ಯಾರಿಗೂ ಕಡಿಮೆ ಇಲ್ಲ!


ಒಟ್ಟಿನಲ್ಲಿ ಅಮೇರಿಕಾ ನೆಲದಲ್ಲೂ ಸದ್ಯ ಯಕ್ಷಗಾನ ತಕಧಿಮಿತದ ಸದ್ದು ಕೇಳಿ ಬರುತ್ತಿದ್ದು, ಯಕ್ಷ ಕಂಪನ್ನ ನಾಡಿಗೆ ಪಸರಿಸುವಂತೆ ಮಾಡಿದೆ.

First published: