Uttara Kannada: ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರಿಗೂ ಈ 'ನಾಸ'ವೇ ದೇವರು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸಿದ್ಧಿಗಳಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಯಾರೇ ಇದ್ದರೂ ಈ ಸಿದ್ಧಿ ನಾಸನನ್ನು ಆರಾಧಿಸುತ್ತಾರೆ.

  • News18 Kannada
  • 4-MIN READ
  • Last Updated :
  • Uttara Kannada, India
  • Share this:

ಉತ್ತರ ಕನ್ನಡ: ಕಾಡು‌ ಮನುಷ್ಯರಂತೆ ವೇಷ ಧರಿಸಿ ಕುಣಿಯುತ್ತಿರೋ ಯುವಕರು, ಇನ್ನೊಂದೆಡೆ ವೇದಿಕೆಯಲ್ಲಿ ಹೆಣ್ಮಕ್ಕಳಿಂದಲೂ ಜಾನಪದ ಮಾದರಿಯ (Traditional Dance) ಕುಣಿತ. ಜೊತೆಗೊಂದಿಷ್ಟು ಸಿನೆಮಾ ಹಾಡಿಗೆ ಕುಣಿಯೋ ಮಕ್ಕಳದ್ದು ಇಡೀ ಕಾರ್ಯಕ್ರಮಕ್ಕೆ ಆಧುನಿಕ ಟಚ್. ಹಾಗಿದ್ರೆ ಏನಿದು ಕಾಡು ಜನರ  ಸಂಭ್ರಮ? ಇಲ್ಲೇನಿದು ಪೂಜೆ (Siddi Community Rituals) ಅಂತೀರ? ಅದೆಲ್ಲಕ್ಕೂ ಈ ಸ್ಟೋರಿ ನೋಡಿ.


ಅಂದಹಾಗೆ ಈ ದೃಶ್ಯಗಳು ಕಂಡು ಬಂದಿದ್ದು ಉತ್ತರ ಕನ್ನಡದಲ್ಲಿ ನೆಲೆಸಿರುವ ಸಿದ್ಧಿ ಜನಾಂಗದ 'ಸಿದ್ಧಿ ನಾಸ' ಜಾತ್ರೆಯಲ್ಲಿ. ದಕ್ಷಿಣ ಆಫ್ರಿಕಾ ಮೂಲದ ಸಿದ್ಧಿ ಜನಾಂಗ ತಮ್ಮೊಂದಿಗೆ ಬಂದ ಕರಿಕಲ್ಲಿನ ದೈವವನ್ನು ಯಲ್ಲಾಪುರ ಅಂಕೋಲಾದ ಗಡಿ ಹಳ್ಳಿಯಾದ ಸಾತನಬೈಲಿನಲ್ಲಿ ಪ್ರತಿಷ್ಠಾಪಿಸಿದರು.‌ ಅಂದಿನಿಂದ ಇಂದಿನವರೆಗೂ ಇದಕ್ಕೆ ವರ್ಷಂಪ್ರತಿ ಏಪ್ರಿಲ್ ತಿಂಗಳಿನಲ್ಲಿ ಜಾತ್ರೆ ನಡೆಯುತ್ತಾ ಬಂದಿದೆ.




ಇದನ್ನೂ ಓದಿ: Children Swimming: ಈ ಹಳ್ಳಿ ಮಕ್ಕಳು ಹೇಗೆ ಈಜ್ತಾರೆ ನೋಡಿ, ಮಜಾ ಅಂದ್ರೆ ಇದು ಕಣ್ರೀ!


ವಿಶಿಷ್ಟ ಆಚರಣೆ
ಜಾತ್ರೆ ಸಮಯದಲ್ಲಿ ಇಂತಹ ವಿಶಿಷ್ಟ ಹಾಗೂ ಸಾಂಸ್ಕೃತಿಕ ಆಚರಣೆಗಳು ಕಂಡುಬರುತ್ತೆ. ಕಾಡು ಮನುಷ್ಯನ ಮಾದರಿಯಲ್ಲಿ ವೇಷ ಧರಿಸಿ ಸಿದ್ಧಿ ಜನಾಂಗದ ಮಂದಿ ಕುಣಿಯುತ್ತಾರೆ. ಅದಕ್ಕೆ ಅದ್ರದ್ದೇ ಹಾಡು, ತಾಳವಿದ್ದು ಅದರಂತೆ ಕುಣಿದು ಸಿದ್ಧಿ ನಾಸನಿಗೆ ಭಕ್ತಿ ಸಮರ್ಪಿಸುತ್ತಾರೆ. ಇನ್ನು ಕತ್ತಲಾಗ್ತಿದ್ದಂತೆ ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿ ಬರುತ್ತೆ. ಮಕ್ಕಳಿಂದ ಹಿಡಿದು, ಯುವಕ, ಯುವತಿಯರು ಜಾನಪದದ ಜೊತೆಗೆ ಸಿನೆಮಾ ಹಾಡುಗಳಿಗೆ ನೃತ್ಯ ಮಾಡ್ತಾ ಮನೋರಂಜನೆ ನೀಡುತ್ತಾರೆ.




ಇದನ್ನೂ ಓದಿ: Vibhuti In River: ಈ ನದಿಯಲ್ಲಿ ಸಿಗುತ್ತಂತೆ ನೈಸರ್ಗಿಕ ವಿಭೂತಿ!

top videos


    ಎಲ್ರಿಗೂ ಆರಾಧ್ಯ ದೈವ
    ಈ ಜಾತ್ರೆಯನ್ನು ಕಣ್ತುಂಬಿಕೊಳ್ಳಲೆಂದು ಅಂಕೋಲಾ,ಯಲ್ಲಾಪುರ,ದಾಂಡೇಲಿ, ಮುಂಡಗೋಡದಲ್ಲಿ ನೆಲೆಸಿರುವ ಸಿದ್ಧಿ ಸಮುದಾಯದವರೆಲ್ಲರೂ ಸಾತನಬೈಲಿಗೆ ಬರ್ತಾರೆ. ಇನ್ನು ಸಿದ್ಧಿಗಳಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಯಾರೇ ಇದ್ದರೂ ಈ ಸಿದ್ಧಿ ನಾಸನನ್ನು ಆರಾಧಿಸುತ್ತಾರೆ. ಒಟ್ಟಿನಲ್ಲಿ ಸಿದ್ಧಿ ನಾಸ ಜಾತ್ರೆಯು ತಮ್ಮ ಜನಾಂಗದ ಒಗ್ಗಟ್ಟನ್ನು ಪ್ರದರ್ಶಿಸುತ್ತಾ ಸಡಗರ ಸಂಭ್ರಮದೊಂದಿಗೆ ಸಂಪನ್ನಗೊಳ್ಳುತ್ತೆ.

    First published: